For Quick Alerts
ALLOW NOTIFICATIONS  
For Daily Alerts

  ಡಿಕೋಡಿಂಗ್ ಡೈರೆಕ್ಟರ್ ಗುರು, ಔಟ್ ಆಗಿದ್ದೇಕೆ?

  By * ಜೇಮ್ಸ್ ಮಾರ್ಟಿನ್
  |

  'Active ಆಗಿದ್ದು ಸೋಲಬೇಕು. In active ಆಗಿದ್ದು ಗೆಲ್ಲುವುದು ಹೀನಾಯ. ಇದೇ ಪಾಲಿಸಿ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆ. ಅದರಂತೆ ಆಟವಾಡಿದೆ 'ಇದು ನಿರ್ದೇಶಕ ಗುರುಪ್ರಸಾದ್ ಅವರು ಲೋನಾವಾಲದ ಬಿಗ್ ಬಾಸ್ ಮನೆ ತೊರೆಯುವ ಸಂದರ್ಭದಲ್ಲಿ ಉಳಿದ ಸ್ಪರ್ಧಿಗಳ ಮುಂದೆ ಹೇಳಿದ ಮಾತು.

  ಅತಿಯಾದ ಡಿಕೋಡಿಂಗ್, ಆಟವನ್ನು ಆಟದಂತೆ ನೋಡುತ್ತೇನೆ ಇಲ್ಲಿ ಸೆಂಟಿಮೆಂಟ್, ಮಾನವೀಯತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾರೆ ಎನ್ನುತ್ತಿದ್ದ ಗುರು ಈಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಟೆಡ್ ಆದ ರೀತಿ ನೋಡಿದರೆ ಹಂಸಲೇಖ ಬರೆದ ಸಾಂಗ್ಲಿಯಾನ ಚಿತ್ರದ 'ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನು ಆನೆಯ ಹಳ್ಳಕ್ಕೆ ಹೋಗಿ ಬಿದ್ದನು' ಎಂಬ ಹಾಡಿನ ಸಾಲು ನೆನಪಾಗುತ್ತದೆ.

  ಗುರುಪ್ರಸಾದ್ ಅವರ ವರ್ತನೆ ಮನೆಯಲ್ಲಿನ ಜನರ ಪರಿವರ್ತನೆ, ಉತ್ತಮ ಆಟಗಾರನಂತೆ ಆಟವಾಡಿದ್ದಕ್ಕೆ ನಿರೂಪಕ ಸುದೀಪ್ ರಿಂದಲೂ ಪ್ರಶಂಸೆ ಪಡೆದ ಗುರು ಮನೆಯಿಂದ ಹೊರಬಿದ್ದಿದ್ದೇಕೆ? ಗ್ರ್ಯಾಂಡ್ ಫಿನಾಲೆಗೆ ಗುರು ಪಕ್ಕಾ ಕ್ಯಾಂಡಿಡೇಟ್ ಎಂದೂ ಎಲ್ಲರೂ ಅಂದುಕೊಂಡಿದ್ದಾಗ ಬಿಗ್ ಬಾಸ್ ನೀಡಿದ ಈ ಟ್ವಿಸ್ಟ್ ಒಟ್ಟಾರೆ ರಿಯಾಲಿಟಿ ಶೋನ ರೋಚಕತೆ ಇನ್ನಷ್ಟು ಹೆಚ್ಚಿಸಿದೆ. [ನೀತೂ ಅವರೇ ಏಕೆ ಎಲಿಮಿನೇಟ್ ಆಗಿದ್ದಾರೆ?]

  ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2ನಲ್ಲಿ ಕಳೆದ ವಾರ ನಟಿ ನೀತೂ ಶೆಟ್ಟಿ ನಿರ್ಗಮನ ನಿರೀಕ್ಷಿತವಾಗಿತ್ತು. ಭಾರಿ ಕುತೂಹಲ ಕೆರಳಿಸಿದ ಈ ವಾರದ ನಾಮಿನೇಷನ್ ಪ್ರಕ್ರಿಯೆ ಹಾಗೂ ಎಲಿಮಿನೇಷ್ ಪ್ರತಿ ವಾರದಂತೆ ನಡೆದಿದೆ.

  ಅದರೆ, ಗುರುಪ್ರಸಾದ್ ಅವರಂಥ ಪ್ರಬಲ ಸ್ಪರ್ಧಿ ಗ್ರ್ಯಾಂಡ್ ಫಿನಾಲೆಗೆ ಮುನ್ನ ಮನೆಯಿಂದ ಹೊರಬಿದ್ದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಈ ಬಗ್ಗೆ ಗುರು ಏನು ಹೇಳುತ್ತಾರೋ ಕಾದು ನೋಡಬೇಕಿದೆ.

  ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಶನಿಯಾಗಿ ಕಾಡಿದ ಗುರು ಅವರ ಸ್ಥಾನ ಪಲ್ಲಟದ ಡಿಕೋಡಿಂಗ್ ಮಾಡಿದರೆ ಗೊತ್ತಾಗುವ ಪ್ರಮುಖ ಅಂಶವೆಂದರೆ, ಗುರು ಅವರ ಆತುರದ ನಿರ್ಧಾರ ಹಾಗೂ ಅತಿಯಾದ ಆತ್ಮವಿಶ್ವಾಸವೇ ಕಾರಣ ಎನ್ನಬಹುದು. ಕಿಚ್ಚನ ಜೊತೆ ಮಾತುಕತೆಗೂ ಮುನ್ನ ಎಪಿಸೋಡ್ ನಲ್ಲಿ ಅಕುಲ್ ಜೊತೆ ಮಾತನಾಡುತ್ತಾ ತಾವು ಎಲಿಮಿನೇಟ್ ಆಗುವ ಸಾಧ್ಯತೆ ಇಲ್ಲ ಎಂದಿದ್ದರು. ಈ ವಾರ ದೀಪಿಕಾ ಕಾಮಯ್ಯ ಅವರು ಮನೆಗೆ ಹೋಗುವ ಸಾಧ್ಯತೆ ಹೆಚ್ಚು ಎಂದಿದ್ದರು.

  ಗುರು ಎಡೆವಿದ್ದೇ ಟಾಸ್ಕ್ ಸಂದರ್ಭದಲ್ಲಿ : ಹಲವರ ಲೆಕ್ಕಾಚಾರವೂ ಹಾಗೆ ಇತ್ತು. ಆದರೆ, ಗುರು ಅವರ ಡಿಕೋಡಿಂಗ್ ಎಡೆವಿದ್ದೇ ಟಾಸ್ಕ್ ಸಂದರ್ಭದಲ್ಲಿ. ವಿದ್ಯುತ್ ಶಾಕ್ ಗೆ ಹೆದರಿ ಗುರು ಅವರು ಟಾಸ್ಕ್ ನಿಂದ ಹಿಂದೆ ಸರಿದರು. ಈ ಟಾಸ್ಕ್ ಗೆದ್ದವರು ಕ್ಯಾಪ್ಟನ್ ಆಗಬಹುದಿತ್ತು. ಜೊತೆಗೆ ಗ್ರ್ಯಾಂಡ್ ಫಿನಾಲೆಗೆ ಸೇರುವುದು ಬಹುತೇಕ ಖಚಿತವಾಗಿತ್ತು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಸೃಜನ್ ಈಗ ಕ್ಯಾಪ್ಟನ್ ಆಗಿದ್ದಲ್ಲದೆ ಗ್ರ್ಯಾಂಡ್ ಫಿನಾಲೆ ಸೇರಿದ ಮೊದಲ ಸ್ಪರ್ಧಿ ಎನಿಸಿಕೊಂಡರು. ಆಟದಿಂದ ಹಿಂದೆ ಉಳಿದ ಗುರು ಮನೆಯಿಂದ ಹೊರ ಬಿದ್ದರು.

  ಎಲ್ಲಾ ಆಟವನ್ನು ಬುದ್ಧಿವಂತಿಕೆಯಿಂದ ಆಡುವ ಗುರು ಅವರು ಟಾಸ್ಕ್ ಆಡದೆ ಮನೆಯಿಂದ ಹೊರಬಂದಿದ್ದು ಅವರ ಬಲಹೀನತೆ ಎನ್ನಬಹುದೇ ಹೊರತೂ ಅದನ್ನು ತಂತ್ರಗಾರಿಕೆ ಎನ್ನಲಾಗುವುದಿಲ್ಲ. ನಾನು ಹೃದಯವಂತ ಅಲ್ಲದಿರಬಹುದು ಅದರೆ, ಬುದ್ಧಿವಂತ ಎಂದು ಗುರು ಘೋಷಿಸಿಕೊಂಡಿದ್ದಾರೆ. ಮನೆಯಲ್ಲಿನ ಸ್ಪರ್ಧಿಗಳ ಜೊತೆ ಮುಖವಾಡ ಧರಿಸಿ ತಾನೇ ತಾನಾಗಿ ಇದ್ದ ಗುರು ಮನರಂಜನೆ ನೀಡಿದ ಜೊತೆಯಲ್ಲೇ ಪ್ರೇಕ್ಷಕರಿಗೂ ಕಿರಿಕಿರಿ ಉಂಟು ಮಾಡಿದ್ದು ಸುಳ್ಳಲ್ಲ

  English summary
  Suvarna Bigg Boss Kannada Season 2: Why Director Guru Prasad got eliminated from show ? Let's find out: Guru's decoding failed due to his over activeness and inability to contest in the task in which Srujun Lokesh scored and eventually became the first candidate to reach Grand Finale.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more