»   » ಡಿಕೋಡ್: ಇಷ್ಟಕ್ಕೂ ನೀತೂ ಮನೆಯಿಂದ ಹೊರಬಿದ್ದಿದ್ದೇಕೆ?

ಡಿಕೋಡ್: ಇಷ್ಟಕ್ಕೂ ನೀತೂ ಮನೆಯಿಂದ ಹೊರಬಿದ್ದಿದ್ದೇಕೆ?

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಸ್ಪರ್ಧಿ ನಟಿ ನೀತೂ ಶೆಟ್ಟಿ ಅವರು ಮನೆಯಿಂದ ಮತ್ತೊಮ್ಮೆ ಹೊರ ನಡೆದಿದ್ದಾರೆ. ಹಿಂದೊಮ್ಮೆ ಮನೆಯಿಂದ ಹೊರಗಾದರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ, ಈ ಬಾರಿ ನೀತೂ ಎಲಿಮಿನೇಷನ್ ನಿರೀಕ್ಷಿತವಾದಂತೆ ಕಂಡು ಬಂದಿತು. ಇಷ್ಟಕ್ಕೂ ನೀತೂ ಅವರೇ ಏಕೆ ಎಲಿಮಿನೇಟ್ ಆಗಿದ್ದಾರೆ? ಮುಂದೆ ಓದಿ

ಕಿಚ್ಚಿನ ಕಥೆ ಕಿಚ್ಚನ ಜತೆ 'ಎಪಿಸೋಡು ಪ್ರೇಕ್ಷಕರಿಗೆ ಸಕತ್ ಮಜಾ ನೀಡಿದೆ. ಭಾರಿ ಕುತೂಹಲ ಕೆರಳಿಸಿದ ಈ ವಾರದ ನಾಮಿನೇಷನ್ ಪ್ರಕ್ರಿಯೆ ಹಾಗೂ ಎಲಿಮಿನೇಷ್ ಪ್ರತಿ ವಾರದಂತೆ ನಡೆದಿದೆ.ಅದರೆ, ನೀತೂ ಅವರಂಥ ಪ್ರಬಲ ಸ್ಪರ್ಧಿ ಗ್ರ್ಯಾಂಡ್ ಫಿನಾಲೆಗೆ ಮುನ್ನ ಮನೆಯಿಂದ ಹೊರಬಿದ್ದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. [ಬಿಗ್ ಬಾಸ್ ಮನೆಯಿಂದ ನೀತೂ]

ಈ ಬಾರಿ ಅನುಪಮಾ ಭಟ್, ಶ್ವೇತಾ ಚೆಂಗಪ್ಪ, ದೀಪಿಕಾ ಕಾಮಯ್ಯ, ಹಾಗೂ ನೀತೂ ಶೆಟ್ಟಿ ನಾಮಿನೇಟ್ ಆಗಿದ್ದರು. ಗುರು ಪ್ರಸಾದ್ ಹಾಗೂ ಅಕುಲ್ ಬಾಲಾಜಿ ಅವರು ಮಾತ್ರ ಸೇಫ್ ಆಗಿದ್ದರು.ಈ ಪೈಕಿ ನೀತೂ ಶೆಟ್ಟಿ ಅವರನ್ನು ಮನೆಯಿಂದ ಹೊರಕ್ಕೆ ಕಳಿಸಲಾಗಿದೆ. ಕಳೆದ ಎರಡು ವಾರದ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನೀತೂ ಅವರು ಈ ವಾರ ಡೇಂಜರ್ ಜೋನ್ ನಲ್ಲಿದ್ದರೂ ಉಳಿದುಕೊಳ್ಳುವ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದಕ್ಕೆ ಕಾರಣವೂ ಇದೆ.

76ನೇ ದಿನದ ಮುಖ್ಯಾಂಶಗಳು
  

76ನೇ ದಿನದ ಮುಖ್ಯಾಂಶಗಳು

ಕಿಚ್ಚಿನ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೂ ಮುನ್ನ ಡಿಕೋಂಡಿಂಗ್ 'ಗುರು' ಪ್ರಸಾದ್ ಅವರು ಸೃಜನ್ ಲೋಕೇಶ್ ಅವರ ಫೇರ್ ವೆಲ್ ಗೆ ರೆಡಿಯಾಗಿ ಎಂದು ಅಕುಲ್ ಬಾಲಾಜಿ ಬಳಿ ಹೇಳಿಕೊಳ್ಳುತ್ತಾರೆ.

ಅಕುಲ್ ಅವರೇ ನೀವು ಟಾಸ್ಕ್ ನಲ್ಲಿ ಬಟನ್ ಹಾಕಿಸಿಕೊಳ್ಳುವುದರಿಂದ ಪೋಲ್ ಡ್ಯಾನ್ಸ್ ತನಕ ಎಲ್ಲವನ್ನು ನೋಡಿದ್ದಾರೆ. ನಿಮ್ಮ ಮನೆಯಲ್ಲಿ ಕಣ್ಣು ಅಗಲಿಸಿ ನೋಡಿದ್ದಾರಂತೆ ಎಂದು ಅಕುಲ್ ಬಾಲಾಜಿಯನ್ನು ಸುದೀಪ್ ಕಿಚಾಯಿಸಿದರು. ಅಕುಲ್ ತಮ್ಮ ಪತ್ನಿ ಹೆಸರಿಡು 'ಜೋ ಜೋ..' ನಂಬಬೇಡ ಎಂದರು.

ಅಕುಲ್ ಬಾಲಾಜಿ ಕಿಚಾಯಿಸಿದ ಕಿಚ್ಚ
  

ಅಕುಲ್ ಬಾಲಾಜಿ ಕಿಚಾಯಿಸಿದ ಕಿಚ್ಚ

ಏನು ವರಿ ಮಾಡಬೇಡಿ. Un Cut ಸೀನ್ ಎಂದು ಹೇಳಿ ಎಲ್ಲವನ್ನು ಪ್ರೇಕ್ಷಕರಿಗೆ ತೋರಿಸುತ್ತೇವೆ. ಜೋ ಎಂದರೆ ಜೋಪಾನ ಎಂದರ್ಥ ನೆನಪಿಟ್ಟುಕೊಳ್ಳಿ ಎಂದು ಸುದೀಪ್ ಹೇಳುತ್ತಾರೆ.

ನಂತರ ಇದೇ ರೀತಿ ಮಾತನ್ನು ಶ್ವೇತಾ ಅವರಿಗೂ ಸುದೀಪ್ ಹೇಳುತ್ತಾರೆ. ನಿಮ್ಮ ಪತಿ ದೇವ್ರು ಕಾಯ್ತಾ ಇದ್ದಾರೆ ನಿಮ್ಮ ಡ್ಯಾನ್ಸ್ ಬಗ್ಗೆ ಮಾತಾಡ್ಬೇಕಂತೆ ಎನ್ನುತ್ತಾರೆ.

 

ಪೋಲ್ ಡ್ಯಾನ್ಸ್, ಪೂಲ್ ಡ್ಯಾನ್ಸ್
  

ಪೋಲ್ ಡ್ಯಾನ್ಸ್, ಪೂಲ್ ಡ್ಯಾನ್ಸ್

ಅಕುಲ್ ಬಾಲಾಜಿ ಅವರು ಮನೆಯ ಮಹಿಳಾ ಸ್ಪರ್ಧಿಗಳ ಜೊತೆ ನಡೆಸಿದ ಪೋಲ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಸುತ್ತಲೇ ಕಿಚ್ಚನ ಮಾತುಕತೆ ಸುತ್ತುತ್ತಿತ್ತು. ಶಾಲೆ ಟಾಸ್ಕ್, ವಾರದ ಅವಾರ್ಡ್ ಗಳ ಬಗ್ಗೆ ಆಗಾಗ ಮಾತುಗಳು ಬಂದವು.

ಬಿಗ್ ಬಾಸ್ ಮನೆಯ ಹೆಚ್ಚಿನ ಪ್ರಶಸ್ತಿಗಳು ಗುರುಪ್ರಸಾದ್ ಗೆ ಸಿಕ್ಕಿದ್ದರ ಬಗ್ಗೆ ಪ್ರಶ್ನಿಸಿದರು. ಆದರೆ, ದೀಪಿಕಾ ಹಾಗೂ ಅನುಪಮಾಗೆ ಯಾವುದೇ ಪ್ರಶಸ್ತಿ ಸಿಗದಿದ್ದರ ಬಗ್ಗೆ ಯಾರೂ ಪ್ರಶ್ನಿಸಲೇ ಇಲ್ಲ.

ಪೋಲ್ ಟಾಸ್ಕ್ ನಲ್ಲಿ ಶ್ವೇತಾ ಹಾಗೂ ಸೃಜನ್ ಅವರು ಕೈ ಸನ್ನೆ ಮಾಡಿದ್ದರ ಬಗ್ಗೆ ಪ್ರಶ್ನೆಗಳು ಕೇಳಿ ಬಂದಿತು. ಕ್ಯಾಪ್ಟನ್ ಆದವರು ಫೈನಲ್ ಗೆ ಗ್ಯಾರಂಟಿ ಎನ್ನುವುದು ಸರಿಯಲ್ಲ ಎಂದು ಶ್ವೇತಾ ಹೇಳಿದರು.

 

ನೀತೂಗೆ ಗುರು ಬರೆದ ಪ್ರೇಮ ಸಂದೇಶದ ಬಗ್ಗೆ
  

ನೀತೂಗೆ ಗುರು ಬರೆದ ಪ್ರೇಮ ಸಂದೇಶದ ಬಗ್ಗೆ

ನೀತೂಗೆ ಗುರು ಬರೆದ ಪ್ರೇಮ ಸಂದೇಶದ ಬಗ್ಗೆ ಕಿಚಾಯಿಸಿದ ಕಿಚ್ಚ, ಆದಿ ಲೋಕೇಶ್ ಹೊರಕ್ಕೆ ಹೋಗುವ ತನಕ ಕಾದು ಎರಡು ವಾರ ಬಿಟ್ಟು ಗುರು ಅವರು ನಿಮಗೆ ಪ್ರೇಮ ಸಂದೇಶ ನೀಡಿದರು ಆದರೆ, ನೀವು ಪಾಪ ಅವರನ್ನು ನೋಯಿಸಿಬಿಟ್ರಿ ಎಂದು ನೀತೂಗೆ ಸುದೀಪ್ ಹೇಳಿದರು.

ಇದರಿಂದ ಕಂಗಾಲಾದ ಗುರುಪ್ರಸಾದ್ ಅಯ್ಯೋ ನಾನು ಆ ಅರ್ಥದಲ್ಲಿ ಪ್ರೇಮ ಸಂದೇಶ ಬರೆಯಲಿಲ್ಲ ಎಂದರು.

ಮನೆಯಲ್ಲಿ ಶನಿ ಪ್ರಸಾದ್ ಬಂದ ಮೇಲೆ ಇತರೆ ಸ್ಪರ್ಧಿಗಳು ನನ್ನ ಬಗ್ಗೆ ಯಾವ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯಿತು.

 

ಈ ಬಾರಿ ನಾಮಿನೇಟ್ ಆದ ಸದಸ್ಯರು
  

ಈ ಬಾರಿ ನಾಮಿನೇಟ್ ಆದ ಸದಸ್ಯರು

ಈ ವಾರ ಬಿಗ್ ಬಾಸ್ ಮನೆಯಲ್ಲಿರುವ ಪ್ರಬಲ ಅಭ್ಯರ್ಥಿಗಳು ನಾಮಿನೇಟ್ ಆಗಿದ್ದರು. ನೀತೂ ಶೆಟ್ಟಿ, ಅನುಪಮಾ,ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪ ಈ ಬಾರಿ ನಾಮಿನೇಟ್ ಆದ ಸದಸ್ಯರು. ಗುರು ಪ್ರಸಾದ್ ಹಾಗೂ ಅಕುಲ್ ಬಾಲಾಜಿ ಅವರು ನಾಮಿನೇಟ್ ಆಗದ ಕಾರಣ ಬಹುತೇಕ ಗ್ರ್ಯಾಂಡ್ ಫಿನಾಲೆ ತನಕ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಅನುಪಮಾ ಅವರು ಈವರೆಗೂ ಕ್ಯಾಪ್ಟನ್ ಆಗಿಲ್ಲ
  

ಅನುಪಮಾ ಅವರು ಈವರೆಗೂ ಕ್ಯಾಪ್ಟನ್ ಆಗಿಲ್ಲ

ಅನುಪಮಾ ಭಟ್ ಹಾಗೂ ನೀತೂ ಅವರು ಮಂಗಳೂರು ಮೂಲದವರಾಗಿದ್ದು, ಅವರಿಬ್ಬರಲ್ಲಿ ಒಬ್ಬರು ಮಾತ್ರ ಕೊನೆ ವಾರದ ತನಕ ಉಳಿಯುವ ಸಾಧ್ಯತೆಯಿತ್ತು ಅನುಪಮಾ ಅವರು ಈವರೆಗೂ ಕ್ಯಾಪ್ಟನ್ ಆಗಿಲ್ಲ. ಅಲ್ಲದೆ, ಇತರೆ ಸ್ಪರ್ಧಿಗಳಿಂದ ಇನ್ನೂ ಅಶಕ್ತ ಸ್ಪರ್ಧಿ ಎಂದು ಕರೆಸಿಕೊಂಡಿರುವುದು ಅವರಿಗೆ ವರವಾಯಿತು.

ಇಮೇಲ್ ಪ್ರಶ್ನೆಗೆ ಉತ್ತರಿಸಿದ ಅನುಪಮಾ, ಈ ಹಿಂದೆ ಸಂತೋಷ್ ಹಾಗೂ ಇನ್ನಿತರ ಸದಸ್ಯರು ತನ್ನನ್ನು ಕ್ಯಾಪ್ಟನ್ Un Fit ಎಂದು ಮೂದಲಿಸಿದರು. ಇದು ನೋವಾದರೂ ನನ್ನನ್ನು ನಾನು ಸಂತೈಸಿಕೊಂಡೆ ಎಂದರು. ಅನುಪಮಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡದೇ ಕೊನೆ ಹಂತ ತಲುಪಿದರೆ ಅದು ಕೂಡಾ ಸಾಧನೆಯಾಗಲಿದೆ.

 

ಉಳಿದವರಲ್ಲಿ ಯಾರು ಮುಂದಿನ ಹಂತಕ್ಕೆ
  

ಉಳಿದವರಲ್ಲಿ ಯಾರು ಮುಂದಿನ ಹಂತಕ್ಕೆ

ಉಳಿದವರಲ್ಲಿ ಯಾರು ಮುಂದಿನ ಹಂತಕ್ಕೆ ಹೋಗಬಹುದು ಎಂಬ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಗುರು ಪ್ರಸಾದ್, ಅಕುಲ್ ಬಾಲಾಜಿ ಹಾಗೂ ಸೃಜನ್ ಲೋಕೇಶ್ ಗ್ರ್ಯಾಂಡ್ ಫಿನಾಲೆಗೆ ಬಹುತೇಕ ಖಚಿತ ಎನ್ನಬಹುದು. ಮುಂದಿನವಾರಗಳಲ್ಲಿ ದೀಪಿಕಾ ಹಾಗೂ ಶ್ವೇತಾ ನಡುವೆ ಸ್ಪರ್ಧೆ ಬೀಳಲಿದ್ದು, ಮುಂದಿನ ವಾರದಲ್ಲಿ ದೀಪಿಕಾ ಮನೆ ಹಾದಿ ಹಿಡಿಯುವ ಸಾಧ್ಯತೆಯಿದೆ. ಕೊನೆಯ ಹಂತಕ್ಕೆ ಕೊಡಗು, ಮಂಗಳೂರು, ಬೆಂಗಳೂರು, ಕನಕಪುರ, ಹೊರನಾಡು ಕನ್ನಡಿಗ ಕಾಣಿಸಿಕೊಳ್ಳುವುದು ನಿಚ್ಚಳವಾಗಿದೆ.

ಮನೆಯಿಂದ ಹೊರಬೀಳುವ ಮುನ್ನ ನೀತೂ ಅವರು ಬಿಗ್ ಬಾಸ್ ಆದೇಶದಂತೆ ಅನುಪಮಾ ಅವರಿಗೆ ಟಾಸ್ಕ್ ನೀಡಿದರು, ಇದರಂತೆ ಅನುಪಮಾ ಅವರು ಇತರೆ ಸ್ಪರ್ಧಿಗಳು ಎದುರಾದಾಗ ಸೆಲ್ಯೂಟ್ ಹೊಡೆದು ನಮಸ್ಕಾರ ಮಾಡಬೇಕಾಗುತ್ತದೆ.

 

English summary
Bigg Boss Kannada 2: Why Actress Neethu Shetty got eliminated. This week all the house mates except Guruprasad and Akul Balaji were nominated for elimination. Finally among the rest of the inmates, Neethu has been eliminated.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada