For Quick Alerts
  ALLOW NOTIFICATIONS  
  For Daily Alerts

  ನಂಬರ್ ಒನ್ ಪಟ್ಟಕ್ಕೆ ಜಿಗಿದ ಸುವರ್ಣ ವಾಹಿನಿ

  By Rajendra
  |

  ಕನ್ನಡದ ಎಲ್ಲಾ ಮನರಂಜನಾ ವಾಹಿನಿಗಳನ್ನೂ ಹಿಂದಿಕ್ಕಿರುವ ಸುವರ್ಣ ವಾಹಿನಿ ಈಗ ರಾಜ್ಯದಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಕನ್ನಡ ಕಿರುತೆರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದೆ.

  ಕಳೆದ 19 ವರ್ಷಗಳಿಂದ ನಂಬರ್ ಒನ್ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದ್ದ ಉದಯ ವಾಹಿನಿ ಎರಡನೇ ಸ್ಥಾನಕ್ಕೆ ಸರಿದಿದೆ. ಸುವರ್ಣ ವಾಹಿನಿ ಈಗ 498 Gross rating point (GRP) ಪಡೆದು ನಾನೇ ಮಹಾರಾಜ ಎಂದು ಬೀಗುವಂತಾಗಿದೆ.

  ಕಳೆದ ಕೆಲದಿನಗಳಿಂದ ಕನ್ನಡ ಕಿರುತೆರೆ ವಾಹಿನಿಗಳ ನಡುವಿನ ಟಿಆರ್ ಪಿ ಸಮರ ನಿಜಕ್ಕೂ ರೋಚಕವಾಗಿತ್ತು. ಈ ಸಮರದಲ್ಲಿ ನಾನಾ ನೀನಾ ಎಂಬಂತೆ ಪೈಪೋಟಿ ಬೆಳೆದಿತ್ತು. ಈ ಎಲ್ಲಾ ಸಾಧಕ ಬಾಧಕಗಳ ನಡುವೆಯೂ ಸುವರ್ಣ ವಾಹಿನಿಗೆ ಗೆಲುವಿನ ಮಾಲೆ ಬಿದ್ದಿದೆ.

  ಕನ್ನಡದ ಕೋಟ್ಯಾಧಿಪತಿಯ ಗ್ರ್ಯಾಂಡ್ ಫಿನಾಲೆ (ರಾಜ್ ಮಕ್ಕಳ ಎಪಿಸೋಡ್) 9.6 ರೇಟಿಂಗ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಹೆಚ್ಚಿನ ಎಲ್ಲಾ ಸೀರಿಯಲ್ ಗಳೂ ಮುಂದಿದ್ದು, ಸುವರ್ಣ ಸೂಪರ್ ಜೋಡಿಯ ರವಿಚಂದ್ರನ್ ಎಪಿಸೋಡ್ 6.2 trp ರೀಚ್ ಆಗಿದೆ!

  ಕರ್ನಾಟಕದ ನಂಬರ್ ಒನ್ ಪ್ರೈಮ್ ಟೈಮ್ ಚಾನಲ್ (243 GRP) ಆಗಿಯೂ ಸುವರ್ಣ ಹೊರಹೊಮ್ಮಿದೆ. ಹಾಗೆಯೇ 322 GRPಗಳೊಂದಿಗೆ ಬೆಂಗಳೂರಿನ ನಂಬರ್ ಒನ್ ಮನರಂಜನಾ ವಾಹಿನಿಯಾಗಿಯೂ ಸುವರ್ಣ ಸ್ಥಾನ ಸಂಪಾದಿಸಿಕೊಂಡಿದೆ. [ಸುಧೀಂದ್ರ ಕಂಚಿತೋಟ : ಸುವರ್ಣ ಟಿವಿ ಪ್ರೊಗ್ರಾಂ ಹೆಡ್]

  ಇದರ ಜೊತೆಗೆ 18:00, 19:30, 20:00, 20:30, 21:00, 21:30, 22:00 & 22:30 ಈ ಎಂಟು ಪ್ರೈಮ್ ಟೈಮ್ ಸ್ಲಾಟ್ ಗಳಲ್ಲಿ ಸುವರ್ಣ ಮುಂದಿದೆ. ಕನ್ನಡದ ಕೋಟ್ಯಾಧಿಪತಿ ಫಿನಾಲೆ ವೀಕ್ ನ ಸರಾಸರಿ TVR 7.2 (Television Viewer Ratings), ಸೀಸನ್ 1 ಹಾಗೂ 2ಕ್ಕೆ ಹೋಲಿಸಿದರೆ ಇದು ಅತ್ಯಧಿಕ ದಾಖಲೆ.

  ಕನ್ನಡದ ಕೋಟ್ಯಾಧಿಪತಿ ಗ್ರ್ಯಾಂಡ್ ಫಿನಾಲೆ (ಜುಲೈ 24ರಂದು ಪ್ರಸಾರ) ಶಿವರಾಜ್ ಕುಮಾರ್ ಎಪಿಸೋಡ್ 9.6 TVR ಗಳಿಸಿದೆ. ಈ ಮೂಲಕ ಆರು ವರ್ಷಗಳ ಕನಸು ನನಸಾಗಿದೆ. ತಪಸ್ಸಿಗೆ ವರ ಸಿಕ್ಕಿದೆ. ಶ್ರಮ ಫಲ ನೀಡಿದೆ ಎಂದು ವಾಹಿನಿ ಹೆಮ್ಮೆಯಿಂದ ಹೇಳಿಕೊಂಡಿದೆ. (ಒನ್ಇಂಡಿಯಾ ಕನ್ನಡ)

  English summary
  Suvarna channel acquired No.1 position in Karnataka general entertainment channels sector. The channel sources proudly announced, Suvarna is the NO.1 channel of Karnataka with 498 GRP’s. The 19 years rule of Udaya TV has come to an end with Suvarna being crowned as the king of Kannada entertainment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X