For Quick Alerts
  ALLOW NOTIFICATIONS  
  For Daily Alerts

  ರೋಚಕ ಘಟ್ಟದಲ್ಲಿ ಸುವರ್ಣ 'ಪುಟಾಣಿ ಪಂಟ್ರು'

  By Rajendra
  |

  ಮಕ್ಕಳ ಆಟ, ತುಂಟಾಟ, ಅವರ ಪ್ರತಿಭೆ ಏನೇ ಇರಲಿ ನೋಡಲು ಬಲು ಸೊಗಸು. ಈ ರೀತಿಯ ಸೊಗಸಾದ ಕಾರ್ಯಕ್ರಮವನ್ನು ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನೋರಂಜನಾ ವಾಹಿನಿ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ. ಆ ಜನಪ್ರಿಯ ಕಾರ್ಯಕ್ರಮವೇ "ಪುಟಾಣಿ ಪಂಟ್ರು". ಈಗ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ.

  ಪುಟಾಣಿಗಳಲ್ಲಿ ಪ್ರಚಂಡರನ್ನು ಗುರುತಿಸಿ, ಆ ಪ್ರತಿಭೆಗಳನ್ನು ಪುರಸ್ಕರಿಸಲು ಮಾಡಿದ ಒಂದು ಬೃಹತ್ ಯತ್ನ 'ಪುಟಾಣಿ ಪಂಟ್ರು' ಕಾರ್ಯಕ್ರಮ. ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಇದೇ ಡಿಸೆಂಬರ್ 15ರ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

  6 ರಿಂದ 13 ವರ್ಷದೊಳಗಿನ 14 ಮಕ್ಕಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿದವರು 6 ಮಕ್ಕಳು. ದೀಯಾ, ಹೇಮಂತ್, ಮಧು, ಶಿವಮಣಿ, ಪ್ರದೀಶ್, ಲಿಪಿಕಾ. ಈ 6 ಪುಟಾಣಿಗಳಲ್ಲಿ ಒಬ್ಬ ಪಂಟ್ರನ್ನು ಆರಿಸುವುದು ತೀರ್ಪುಗಾರರಾದ ನೆನಪಿರಲಿ ಪ್ರೇಮ್ ಮತ್ತು ಶ್ವೇತಾ ಶ್ರೀವತ್ಸವ ಅವರುಗಳ ಗುರುತರ ಜವಾಬ್ದಾರಿಯಾಗಿತ್ತು.

  ಆರು ಮಕ್ಕಳ ನಡುವೆ ಮೂರು ಸುತ್ತಿನ ಸ್ಪರ್ಧೆ

  ಆರು ಮಕ್ಕಳ ನಡುವೆ ಮೂರು ಸುತ್ತಿನ ಸ್ಪರ್ಧೆ

  ಫೈನಲ್ ಹಂತವನ್ನು ತಲುಪಿದ ಈ 6 ಮಕ್ಕಳ ಮಧ್ಯೆ 3 ಸುತ್ತಿನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಮೊದಲು ಸಿಂಗಲ್ ಪ್ರಾಪರ್ಟಿ ರೌಂಡ್, ಎರಡನೆಯದು ಆಲ್ ಇನ್ ಒನ್ ರೌಂಡ್+ ಇನ್ನೋವೆಟಿವ್ ರೌಂಡ್ ಮತ್ತು ಕೊನೆಯದಾಗಿ ಥೀಮ್ ಬೇಸ್ಡ್ ಗ್ರೂಪ್ ಡಾನ್ಸ್.

  ಸೆಲೆಬ್ರಿಟಿಗಳ ಡಾನ್ಸ್ ಮತ್ತಷ್ಟು ಮೆರಗು

  ಸೆಲೆಬ್ರಿಟಿಗಳ ಡಾನ್ಸ್ ಮತ್ತಷ್ಟು ಮೆರಗು

  ಇವೆಲ್ಲವುಗಳು ಗ್ರ್ಯಾಂಡ್ ಫಿನಾಲೆಯ ಸ್ಪರ್ಧಿಗಳ ವಿಶೇಷ ಪರ್ಫಾಮನ್ಸ್ ಗಳಾದರೆ. ಸೆಲೆಬ್ರಿಟಿಗಳ ಡಾನ್ಸ್ ಗ್ರ್ಯಾಂಡ್ ಫಿನಾಲೆಗೆ ಮತ್ತಷ್ಟು ಮೆರಗು ನೀಡಿತು. ಕಾರ್ಯಕ್ರಮದ ತೀರ್ಪುಗಾರರಾಗಿರುವ ಶ್ವೇತಾ ಶ್ರೀವತ್ಸವ, ವಿಜಯಲಕ್ಷ್ಮೀ ಸಿಂಗ್ ಮತ್ತು ಆದಿತ್ಯ, 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ'ಯ ರಕ್ಷಿತ್ ಶೆಟ್ಟಿ ಕೂಡಾ ಹೆಜ್ಜೆ ಹಾಕಿ ಗ್ರ್ಯಾಂಡ್ ಫಿನಾಲೆಗೆ ವಿಶೇಷ ಮೆರಗು ತುಂಬಿದ್ದಾರೆ.

  ರಿಯಾಲಿಟಿ ಶೋಗಳಲ್ಲೇ ವಿಶೇಷ

  ರಿಯಾಲಿಟಿ ಶೋಗಳಲ್ಲೇ ವಿಶೇಷ

  ಇಷ್ಟೇ ಅಲ್ಲದೇ ಪುಟಾಣಿ ಪಂಟ್ರು ಬೇರೆಲ್ಲಾ ರಿಯಾಲಿಟಿ ಶೋಗಳಿಗೆ ಹೋಲಿಸಿದರೆ ವಿಶೇಷವಾದ ಕಾರ್ಯಕ್ರಮ. ಏಕೆಂದರೆ ಒಂದೊಂದು ಶೋಗಳಿಂದ ಒಬ್ಬ ಹಾಡುಗಾರ, ಒಬ್ಬ ಡ್ಯಾನ್ಸರ್, ಇಲ್ಲವೇ ಒಂದೊಂದು ಪ್ರತ್ಯೇಕ ಪ್ರತಿಭೆಗೆ ವಿಜಯದ ಮುಕುಟ ನೀಡಲಾಗುತ್ತದೆ.

  ಯಾರಾಗಲಿದ್ದಾರೆ ಆ 'ಪುಟಾಣಿ ಪಂಟ್ರು'

  ಯಾರಾಗಲಿದ್ದಾರೆ ಆ 'ಪುಟಾಣಿ ಪಂಟ್ರು'

  ಆದರೆ ಪುಟಾಣಿ ಪಂಟ್ರು ಗ್ರ್ಯಾಂಡ್ ಫಿನಾಲೆಯಲ್ಲಿ ಮಾತ್ರ ಈ ಎಲ್ಲಾ ಆಯಾಮಗಳಲ್ಲೂ ನಿಸ್ಸೀಮರಾಗಿರೋ ಒಬ್ಬ ಪಂಟ್ರು ನಮಗೆ ಸಿಗಲಿದ್ದಾರೆ.

  ಎಲ್ಲರ ಕುತೂಹಲಕ್ಕೆ ಭಾನುವಾರ ತೆರೆ

  ಎಲ್ಲರ ಕುತೂಹಲಕ್ಕೆ ಭಾನುವಾರ ತೆರೆ

  ಆ ಒಂದು ಪ್ರತಿಭೆ/ಪಂಟ್ರು ಯಾರಾಗಬಹುದೆಂಬುದೇ ಎಲ್ಲರೂ ಕಾತುರದಿಂದ ಕಾಯಬೇಕಾಗಿದೆ. ಹಾಗಾದರೆ ನೀವೂ ತಪ್ಪದೇ ನೋಡ್ತೀರಲ್ಲಾ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ.

  English summary
  Star Network's General Entertainment Channel Suvarna Reality show "Putani Pantru" Grand finale. The show will telecast on December 15 th Sunday 6 PM. A talent hunt based reality show for kids, age group between 6- 13yrs. Kannada film star Prem Kumar and Shweta Srivatsa are the judges of the programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X