»   » ಡಬಲ್ ಮೀನಿಂಗ್ ನಲ್ಲೇ ಮುನ್ನುಗ್ಗಿದ ಪೋಂ ಪೋಂ

ಡಬಲ್ ಮೀನಿಂಗ್ ನಲ್ಲೇ ಮುನ್ನುಗ್ಗಿದ ಪೋಂ ಪೋಂ

Posted By:
Subscribe to Filmibeat Kannada
Pancharangi Pom pom
ಪೃಥ್ವಿ ಕುಲಕರ್ಣಿ ನಿರ್ದೇಶನದ ಹಾಸ್ಯ ಧಾರಾವಾಹಿ 'ಪಂಚರಂಗಿ ಪೋಂ ಪೋಂ' ಸಾಕಷ್ಟು ವಿವಾದಗಳ ನಡುವೆಯೂ ಮುನ್ನುಗ್ಗುತ್ತಿದೆ. ಸುವರ್ಣ ವಾಹಿನಿಯ ವೀಕ್ಷಕ ಬಳಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿ ಇಂದಿಗೆ (ಮಾ.23) 232 ಸಂಚಿಕೆಗಳನ್ನು ಪೂರೈಸಿ 250ನೇ ಸಂಚಿಕೆಯತ್ತ ದಾಪುಗಾಲು ಹಾಕಿದೆ.

ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಡಬಲ್ ಮೀನಿಂಗ್, ಅಶ್ಲೀಲ ಸಂಭಾಷಣೆ ಇದೆ ಎಂಬ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. ಆದರೂ ಧಾರಾವಾಹಿ ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ನಗರ ಪ್ರದೇಶಕ್ಕೆ ಹೋಲಿಸಿದರೆ ಈ ಧಾರಾವಾಹಿ ಹೆಚ್ಚಿನ ವೀಕ್ಷಕರನ್ನು ಹೊಂದಿರುವುದು ಗ್ರಾಮೀಣ ಭಾಗದಲ್ಲಿ. ಆರಂಭದಲ್ಲಿ ಬಳಸಿಕೊಂಡಿದ್ದ ವಠಾರದ ಸೆಟ್ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ.

ಈಗ ವಠಾರದ ಸೆಟ್ ಕೈಬಿಟ್ಟು ದಿನಕ್ಕೊಂದು ಹೊಸ ಕಥೆ ಹೇಳಲಾಗುತ್ತಿದೆ. ವೀಕ್ಷಕ ವರ್ಗವೂ ಇದಕ್ಕೆ ಮನಸೋತಿದೆ ಎನ್ನುತ್ತಾರೆ ಧಾರಾವಾಹಿ ನಿರ್ದೇಶಕರು. ಗುರುರಾಜ್ ಕುಲಕರ್ಣಿ ಈ ಧಾರಾವಾಹಿ ನಿರ್ಮಾಪಕರು.

ಛಾಯಾಗ್ರಹಣ ಪವನ್, ಸಂಕಲನ ಮಹೇಶ್ ಅವರದು. ಪಾತ್ರವರ್ಗದಲ್ಲಿ ದಾನಪ್ಪ, ಶೀತಲ್, ರಾಘವೇಂದ್ರ ರೈ, ಮೀನಾ ಕುಮಾರಿ, ಪದ್ಮನಾಭ, ಬಸವರಾಜ ಕಟ್ಟಿ, ಮಂದಾಕಿನಿ ಮುಂತಾದ ಕಲಾವಿದರಿದ್ದಾರೆ.

ಪಂಚರಂಗಿ ಪೋಂ ಪೋಂ ಧಾರಾವಾಹಿ ಪ್ರಸಾರವಾಗುವ ಸಮಯ ಸೋಮವಾರದಿಂದ ಶನಿವಾರದತನಕ ಪ್ರತಿ ರಾತ್ರಿ 10.30ರಿಂದ 11ರವರೆಗೆ. ಹಲವು ಸಾಂಸ್ಕೃತಿಕ ಹಿನ್ನೆಲೆಗಳುಳ್ಳ ಒಂದು ವಠಾರದಲ್ಲಿ ನಡೆಯುವ ಕಥೆಯೇ ಪಂಚರಂಗಿ ಪೋಂ ಪೋಂ.

ಈ ಧಾರಾವಾಹಿಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಧಾರಾವಾಡ ಶೈಲಿಯ ಕನ್ನಡ ಭಾಷೆಯನ್ನು ಕೇಳಬಹುದು. ವಠಾರದ ಮನೆಯ ಮಾಲೀಕ ಹಾಗೂ ಇಲ್ಲಿನ ಕುಟುಂಬಗಳ ಸದಸ್ಯರ ನಡುವಿನ ರಸಮಯ ಸನ್ನಿವೇಶಗಳು ಪ್ರೇಕ್ಷಕರನ್ನು ನಕ್ಕು ನಲಿಸಲಿವೆ. (ಒನ್ಇಂಡಿಯಾ ಕನ್ನಡ)

English summary
Suvarna channels comedy serial 'Pancharangi Pom Pom' soon completes 250 episodes. The story revolves around families from different regions of Karnataka who together deal with their common land lord. The show air from Monday to Friday 10.30 pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada