For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಬರೆದ 'ಕ್ರೇಜಿಸ್ಟಾರ್' ರವಿಚಂದ್ರನ್

  By Rajendra
  |

  ಕನ್ನಡ ಚಿತ್ರರಂಗದ ಕನಸುಗಾರ, ರಸಿಕ ರವಿಚಂದ್ರನ್ ಅವರು ಹೊಸ ದಾಖಲೆಗೆ ಸಿದ್ಧವಾಗಿದ್ದಾರೆ. ಅವರ ಅಭಿನಯದ ಲೇಟೆಸ್ಟ್ 'ಕ್ರೇಜಿಸ್ಟಾರ್' ಚಿತ್ರ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬರುತ್ತಿದೆ.

  ಫೆಬ್ರವರಿ 14ರ ಪ್ರೇಮಿಗಳ ದಿನ ಬಿಡುಗಡೆಯಾದ 'ಕ್ರೇಜಿಸ್ಟಾರ್' ಚಿತ್ರ ಕೇವಲ ಒಂದೂವರೆ ತಿಂಗಳಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ. ಇದೇ ಯುಗಾದಿ ಹಬ್ಬದ ಪ್ರಯುಕ್ತ ನಿಮ್ಮ ನೆಚ್ಚಿನ ವಾಹಿನಿ ಸುವರ್ಣದಲ್ಲಿ 'ಕ್ರೇಜಿಸ್ಟಾರ್' ಚಿತ್ರ ಮಾರ್ಚ್ 30ರಂದು ಪ್ರಸಾರವಾಗಲಿದೆ. [ಕ್ರೇಜಿಸ್ಟಾರ್ ಚಿತ್ರವಿಮರ್ಶೆ]

  ಭಾನುವಾರ (ಮಾ.30) ಸಂಜೆ 'ಕ್ರೇಜಿಸ್ಟಾರ್' ಚಿತ್ರವನ್ನು ಸುವರ್ಣ ವಾಹಿನಿಯಲ್ಲಿ ಸಂಜೆ 6ಕ್ಕೆ ಕಣ್ತುಂಬಿಕೊಳ್ಳಬಹುದು. ಈ ಚಿತ್ರ ವಿಮರ್ಶಕರಿಂದ, ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೂ ಚಿತ್ರ ಮೂರೇ ವಾರಕ್ಕೆ ಪ್ರಮುಖ ಚಿತ್ರಮಂದಿರ ತ್ರಿವೇಣಿಯಿಂದ ಎತ್ತಂಗಡಿಯಾಗಿದ್ದು ಅಭಿಮಾನಿಗಳ ಪಾಲಿಗೆ ದುರಂತ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ದಿಲ್ ರಂಗೀಲಾ' ಚಿತ್ರ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕ್ರೇಜಿಸ್ಟಾರ್ ಅಭಿಮಾನಿಗಳು ಪ್ರಮುಖ ಚಿತ್ರಮಂದಿರದಲ್ಲಿ ಚಿತ್ರ ಮಿಸ್ ಆಗಿದ್ದರು. ಇದೀಗ ಸುವರ್ಣ ವಾಹಿನಿಯಲ್ಲಿ ಚಿತ್ರ ಪ್ರಸಾರ ಭಾಗ್ಯ ಕಾಣುತ್ತಿದೆ.

  'ಮಲ್ಲ' ಚಿತ್ರದ ಬಳಿಕ ಪ್ರಿಯಾಂಕಾ ಉಪೇಂದ್ರ ಹಾಗೂ ಕ್ರೇಜಿಸ್ಟಾರ್ ಒಟ್ಟಿಗೆ ಅಭಿನಯದ ಚಿತ್ರವಿದು. ಮಲಯಾಳಂನ 'ಟ್ರಾಫಿಕ್' ಚಿತ್ರದ ರೀಮೇಕ್ ಆದರೂ ರವಿ ಅವರು ಈ ಚಿತ್ರವನ್ನು ತಮ್ಮದೇ ಶೈಲಿಯಲ್ಲಿ ತೆರೆಗೆ ತಂದಿದ್ದಾರೆ.

  ಕ್ಯಾಮೆರಾ, ಲೈಟ್ಸ್, ಆಕ್ಷನ್ ಕಟ್ ನಲ್ಲೇ ಕಳೆದುಹೋಗುವ ಒಬ್ಬ ಕಲಾವಿದನ ಪರ್ಸನಲ್ ಲೈಫ್ ಹೇಗಿರುತ್ತದೆ. ಹೆಂಡತಿ, ಮಗಳ ಕಡೆಗೆ ಗಮನಕೊಡಲಾಗದೆ ಹೇಗೆಲ್ಲಾ ಹಪಿಹಪಿಸುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಕಡೆಗೆ ಸಾವು ಬದುಕಿನ ನಡುವೆ ಹೋರಾಡುವ ತನ್ನ ಮಗಳ ಮುಂದೆ ಕ್ರೇಜಿಸ್ಟಾರ್ ಅಸಲಿ ಬಣ್ಣ ಕಳಚಿಕೊಳ್ಳುತ್ತಾನೆ. (ಒನ್ಇಂಡಿಯಾ ಕನ್ನಡ)

  English summary
  Don't miss Suvarna premiere movie Krazy Star starring Ravichandaran & Priyanka Upendra on 30th March from 6 pm! This is a fascinating movie which will totally shake you up. Cast: V Ravichandran, Priyanka Upendra, Vikram Ravichandran etc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X