»   » ಐಪಿಎಲ್ ಮ್ಯಾಚ್ ನಲ್ಲಿ ಸುವರ್ಣ ವಾಹಿನಿ ಮಾಧವ

ಐಪಿಎಲ್ ಮ್ಯಾಚ್ ನಲ್ಲಿ ಸುವರ್ಣ ವಾಹಿನಿ ಮಾಧವ

Posted By:
Subscribe to Filmibeat Kannada

ಐ.ಪಿ.ಎಲ್ ಮ್ಯಾಚ್ ಅಂದ್ರೆ ಎಲ್ಲರಿಗೂ ಕುತೂಹಲ ಜೊತೆಗೆ ಕುಳಿತು ನೋಡುವ ಆತುರ. ಅದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮ್ಯಾಚ್ ಎಂದರೆ ಕನ್ನಡಿಗರಿಗೊಂದು ಮೈನವಿರೇಳಿಸುವ ಕ್ಷಣ. ಮೇ 4 ರ ಭಾನುವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಸೆಣಸಾಟದಲ್ಲಿ ಕೊನೆಯ ಕ್ಷಣದ ಹೋರಾಟ ರೋಚಕವಾಗಿತ್ತು.

ಅಂತಿಮ ಕ್ಷಣದಲ್ಲಿ ಹೋರಾಡಿ ಗೆದ್ದ ವಿಜಯಶಾಲಿಗಳಿಗೆ ಪ್ರಶಸ್ತಿ ನೀಡುವ ಕ್ಷಣದಲ್ಲಿ ಸಾಕ್ಷಿಯಾದವರು ಸುವರ್ಣ ವಾಹಿನಿಯ "ಮೀರಾ ಮಾಧವ" ಧಾರಾವಾಹಿಯ ಮುಖ್ಯ ಪಾತ್ರಧಾರಿ ಮಾಧವ. [ಕಡೆಗೂ ಸಪ್ತಪದಿ ತುಳಿದ 'ಮೀರಾ ಮಾಧವ' ಜೋಡಿ]

Suvarna Special Guest in IPL 7 Match Bangalore

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ 7ನೇ ಆವೃತ್ತಿ ಐ.ಪಿ.ಎಲ್ ಟಿ-20 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ನಡೆದ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂದರೆ ಆರ್.ಸಿ.ಬಿ. ತಂಡದ ಮಿಚೆಲ್ ಸ್ಟಾರ್ಕ್ ಗೆ, ಸುವರ್ಣ ವಾಹಿನಿಯ ವಿಶೇಷ ಅತಿಥಿಯಾಗಿ ಭಾಗವಹಿಸಿ "ಕಣ್ಣಾ ಕೀಪ್ ಕಾಮ್ ಅವಾರ್ಡ್" ನ್ನು ನೀಡಿದರು.

ಅಂದರೆ ಪಂದ್ಯದ ಕೊನೆಯವರೆಗೂ ತಂಡವನ್ನು ಸಾವಧಾನವಾಗಿರಿಸಿ ಗೆಲುವಿನ ತಿರುವನ್ನು ಪಡೆಯಲು ಪ್ರಮುಖವಾಗಿರುವ ವ್ಯಕ್ತಿಗೆ ನೀಡುವ ಪ್ರಶಸ್ತಿ ಇದಾಗಿತ್ತು. ಐ.ಪಿ.ಎಲ್. ಪಂದ್ಯದ ಪ್ರಶಸ್ತಿಗಳನ್ನು ವಿತರಿಸಲು ಭಾಗವಹಿಸಿದ ಕನ್ನಡ ಕಿರುತೆರೆ ಪ್ರಪ್ರಂಚದ ಪ್ರಥಮ ವ್ಯಕ್ತಿ ನಮ್ಮ ಮಾಧವ ಎಂದರೂ ಅತಿಶಯೋಕ್ತಿಯಾಗಲಾರದು. 'ಮೀರಾಮಾಧವ' ಧಾರಾವಾಹಿ ಇತ್ತೀಚೆಗಷ್ಟೇ ಮಹತ್ತರ ತಿರುವನ್ನು ಪಡೆದು ಮದುವೆಯ ಶುಭಗಳಿಗೆಯನ್ನು ಸಂಭ್ರಮಿಸಿತ್ತು.

ನಮ್ಮ ಸುವರ್ಣ ವಾಹಿನಿಯ ಸೂಪರ್ ಹಿರೋ ಎಂದೇ ಈ ಮಾಧವನನ್ನು ಗುರುತಿಸಬಹುದು!! ಇಂತಹ ಐ.ಪಿ.ಎಲ್ ಮ್ಯಾಚ್ ನಲ್ಲಿ ನಮ್ಮ ಸುವರ್ಣ ವಾಹಿನಿಯ ತಾರೆ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. (ಏಜೆನ್ಸ್ಸೀಸ್)

English summary
Suvarna Channel one of serial lead actors, Madhava from 'Meera Madhava' was the special guest of IPL T-20 match which was held on 4th May in Bangalore. This is the first time in Kannada industry someone from Suvarna TV has taken part in IPL match.
Please Wait while comments are loading...