»   » ಸುವರ್ಣ ವಾಹಿನಿಯಲ್ಲಿ ಮತ್ತೊಂದು ರಿಯಾಲಿಟಿ ಶೋ

ಸುವರ್ಣ ವಾಹಿನಿಯಲ್ಲಿ ಮತ್ತೊಂದು ರಿಯಾಲಿಟಿ ಶೋ

Posted By:
Subscribe to Filmibeat Kannada

ಕರ್ನಾಟಕದ ಹೆಮ್ಮೆಯ ಸುವರ್ಣ ವಾಹಿನಿಯು ವೀಕ್ಷಕರಿಗೆ ಸದಾ ವಿನೂತನ ಕಾರ್ಯಕ್ರಮಗಳನ್ನು ಉಣಬಡಿಸುತ್ತಲೇ ಬರುತ್ತಿದೆ. ಹಳ್ಳಿ ಹೈದ ಪ್ಯಾಟೇಗ್ ಬಂದ, ನೀನಾ ನಾನಾ, ಕನ್ನಡದ ಕೋಟ್ಯಾಧಿಪತಿ ಅದೆಷ್ಟೋ ರಿಯಾಲಿಟಿ ಶೋಗಳು ಸುವರ್ಣ ವಾಹಿನಿಯ ಸವಾಲಿನ ಶೋಗಳಾಗಿರುತ್ತವೆ.

ಈಗ ಅದೇ ರೀತಿಯ ಇನ್ನೊಂದು ರಿಯಾಲಿಟಿ ಶೋ 'ಸುವರ್ಣ ಸೂಪರ್ ಜೋಡಿ' ಕಾರ್ಯಕ್ರಮವು ಇದೇ ಜೂನ್ 14ರಿಂದ ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ರಾತ್ರಿ 8ಗಂಟೆಗೆ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.

ಏನಿದು ಸುವರ್ಣ ಸೂಪರ್ ಜೋಡಿ? ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೆಚ್ಚಿನ ಸೀರಿಯಲ್ ಗಳು ಸೂಪರ್ ಹಿಟ್. ಅಮೃತ ವರ್ಷಿಣಿಯಿಂದ ಹಿಡಿದು ಆಕಾಶದೀಪ, ಪಲ್ಲವಿ ಅನುಪಲ್ಲವಿ, ಚುಕ್ಕಿ, ಪಂಚರಂಗಿ ಪೋಂ ಪೋಂ ಮೊದಲಾದ ಹಿಟ್ ಸೀರಿಯಲ್ ಗಳನ್ನು ನೀವು ನೋಡುತ್ತಲೇ ಬಂದಿದ್ದೀರಿ.

Suvarna super jodi

ಅದೇ ಸುವರ್ಣ ಸೀರಿಯಲ್ ಪ್ರಪಂಚದ ಸೂಪರ್ ಜೋಡಿಗಳನ್ನೆಲ್ಲಾ ಒಂದೇ ವೇದಿಕೆ ಮೇಲೆ ಕರೆಸಿ, ಅವರಿಂದ ಭಿನ್ನ-ವಿಭಿನ್ನ ಆಟ ಆಡಿಸುವ ವಿನೂತನ ಪ್ರಯತ್ನವೇ 'ಸುವರ್ಣ ಸೂಪರ್ ಜೋಡಿ'. ಸುವರ್ಣ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಒಟ್ಟು 10 ಜೋಡಿಗಳು ಭಾಗವಹಿಸುತ್ತಿದ್ದಾರೆ.

ಲಕ್ಷ್ಮೀ - ವಿಕ್ರಮ್ : ಸೈಲೆಂಟ್ ಜೋಡಿ (ಸರಸ್ವತಿ), ಅವಿನಾಶ್-ಮೀನಾಕ್ಷಿ : ಕಿಲಾಡಿ ಜೋಡಿ (ಆಕಾಶದೀಪ), ಪ್ರಿಯಾ - ಪಾರ್ಥ: ವೈಯಲೆಂಟ್ ಜೋಡಿ (ಪಲ್ಲವಿ ಅನುಪಲ್ಲವಿ), ಅಮೃತ - ವಿಜಯ್ : ಅಪರೂಪದ ಜೋಡಿ (ಅಮೃತವರ್ಷಿಣಿ), ವಿನಯ್ - ವರ್ಷ : ಕ್ರೇಜಿ ಜೋಡಿ (ಅಮೃತವರ್ಷಿಣಿ), ರಾಹುಲ್ ಅಪರ್ಣಾ : ರೆಬೆಲ್ ಜೋಡಿ (ಚುಕ್ಕಿ), ಮಂದಾ-ಪಾರ್ಥ : ಖತರನಾಕ್ ಜೋಡಿ (ಚುಕ್ಕಿ), ಮೀನಾನಾಥ-ಮೀರಾಕುಮಾರಿ: ಭಲೇಜೋಡಿ (ಪಂಚರಂಗಿ ಪೊಂ ಪೊಂ), ಮೈಲಾರಿ ರೇಣುಕಾ : ರುಸ್ತುಂ ಜೋಡಿ (ಪಂಚರಂಗಿ ಪೊಂ ಪೊಂ).

ಹೀಗೆ ವಿಭಿನ್ನ ಜೋಡಿಗಳ ಮಧ್ಯೆ ಮನರಂಜನೆಯಿಂದ ಕೂಡಿದ ಸ್ಪರ್ಧೆ ನಡೆಯಲಿದ್ದು ಯಾವ ಜೋಡಿಗಳು ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅಂಕ ಗಳಿಸುತ್ತವೆಯೋ ಅವರು ಆಟದಲ್ಲಿ ಮುಂದುವರೆದು ಅತ್ಯುತ್ತಮ ಅಂಕಗಳಿಸಿದ ಜೋಡಿಗೆ ಸುವರ್ಣ ಸೂಪರ್ ಜೋಡಿ ಪಟ್ಟ ನೀಡಲಾಗುತ್ತದೆ.

ದಿನೇ ದಿನೇ ನೋಡುವ ಧಾರಾವಾಹಿಗಳ ಪಾತ್ರಧಾರಿಗಳೇ ನಮ್ಮ ಮುಂದೆ ಆಟ ಆಡಿ ರಂಜಿಸುವತ್ತಾರೆಂಬುದೇ ಒಂದು ಆಹ್ಲಾದಕರ ಸಂಗತಿ. ಅಲ್ಲದೇ ಈ ಜೋಡಿಗಳ ಆಟಕ್ಕೆ ಮತ್ತಷ್ಟು ಮೆರಗು ಕೊಡಲು ಸಿಹಿಕಸಿ ಚಂದ್ರು ಮತ್ತು ಗೀತಾ ಕಾರ್ಯಕ್ರಮದ ತೀರ್ಪುಗಾರರಾಗಿ ಮತ್ತು ನಿರೂಪಕರಾಗಿ ಪ್ರಕಾಶ -ಚೂಡ (ಪಲ್ಲವಿ ಅನುಪಲ್ಲವಿ) ಹೊಣೆ ಹೊತ್ತಿರುವುದು ಮತ್ತಷ್ಟು ವಿಶೇಷ.

ಒಟ್ಟಿನಲ್ಲಿ ನಗೆಯ ಹೊನಲನ್ನು ಹರಿಸಲು ನಿಮ್ಮೆಲ್ಲರ ಮುಂದೆ ಬರ್ತಾ ಇದೆ 'ಸುವರ್ಣ ಸೂಪರ್ ಜೋಡಿ'. ಈ ಎಲ್ಲ ಜೋಡಿಗಳು ಹೇಗೆ ಆಟ ಆಡುತ್ತಾರೆ? ಯಾವ ಜೋಡಿ ಸುವರ್ಣ ಸೂಪರ್ ಜೋಡಿ ಆಗುತ್ತದೆ? ಎಂಬುದನ್ನು ಮಿಸ್ ಮಾಡದೇ ನೋಡಿ. (ಒನ್ಇಂಡಿಯಾ ಕನ್ನಡ)

English summary
Suvarna Channel all set to air new kind of reality show 'Suvarna Super Jodi' on 14th June. This reality show invites like-minded couples, who go through the toughest challenges to test their strengths, weaknesses, and emotional bond.
Please Wait while comments are loading...