»   » ಕನ್ನಡದ ಕೋಟ್ಯಧಿಪತಿಗೆ ಗೋಲ್ಡನ್ ವಿಂಡೊ

ಕನ್ನಡದ ಕೋಟ್ಯಧಿಪತಿಗೆ ಗೋಲ್ಡನ್ ವಿಂಡೊ

Posted By:
Subscribe to Filmibeat Kannada
Suvarna TV Kannadada Kotyadhipati Airtel Golden Window
ಸುವರ್ಣ ಟಿವಿ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ದಿನಗಳೆದಂತೆ ಭಾರೀ ಪ್ರತಿಕ್ರಿಯೆ ಕಂಡುಬರುತ್ತಿದೆ. ಮೊದಮೊದಲು "ಅಯ್ಯೊ ಬಿಡ್ರಿ, ಇದು ಸ್ಟಾರ್ ಟಿವಿ ಕಾರ್ಯಕ್ರಮ, ಅದನ್ನೇ ಕಾಪಿ ಹೊಡೆದಿದ್ದಾರೆ" ಎಂದು ಅಭಿಪ್ರಾಯ ನೀಡುತ್ತಿದ್ದವರು ಈಗ ನಾನೂ ಕೋಟ್ಯಧಿಪತಿಯಾಗಬೇಕು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹಂಬಲಿಸುತ್ತಿದ್ದಾರೆ.

ಕೋಟ್ಯಧಿಪತಿ ಆಗಬೇಕು ಎಂದು ಆಶಿಸುತ್ತಿರುವವರ ಗಮನಕ್ಕೆ ಈ ಕೆಳಗಿನ ಟಿಪ್ಪಣಿಗಳನ್ನು ನೀಡಲಾಗಿದೆ.

* ಒಟ್ಟು ಮೂರು ಹಂತಗಳಲ್ಲಿ ಎಸ್ಸೆಂಎಸ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
* ಮೂರೂ ಹಂತಗಳಿಗೆ ಎಸ್ಸೆಂಎಸ್ ಮತ್ತು ಪ್ರಶ್ನೋತ್ತರ ಮೂಲಕ ನಡೆಯುವ ಆಯ್ಕೆ ವಿಧಾನ ಈಗಾಗಲೇ ಪೂರ್ಣಗೊಂಡಿದೆ.
* ದಿನಕ್ಕೊಂದರಂತೆ ಐದು ಪ್ರಶ್ನೆಗಳ ಮೂಲಕ ಮೇ 3ರಿಂದ 7 ರವರೆಗೆ ಎಸ್ಸೆಂಎಸ್ ಮೂರನೇ ಹಾಗೂ ಕೊನೆ ಹಂತದ ಆಯ್ಕೆ ನಡೆಯಿತು.

ಮೂರನೇ ಹಂತದಲ್ಲಿ ಆಯ್ಕೆಗೊಂಡವರಿಗೆ ದೂರವಾಣಿ ಕರೆ ಮೂಲಕ ಆಡಿಷನನ್ನಿಗಾಗಿ ಕರೆ ಬರುತ್ತದೆ. ಕರೆ ಬಂದವರು ಆಡಿಷನ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಹುಬ್ಬಳ್ಳಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಆಡಿಷನ್ ಸ್ಥಳಗಳಾಗಿರುತ್ತವೆ. ಇಲ್ಲಿ ಸೆಲೆಕ್ಟ್ ಆದವರು ಚೆನ್ನೈಗೆ ಹೋಗಬೇಕಾಗುತ್ತದೆ. ಸ್ಟುಡಿಯೋದಲ್ಲಿ ಕುಳಿತು ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸ್ಪರ್ಧೆಯಲ್ಲಿ ಗೆದ್ದನಂತರ ಪುನೀತ್ ರಾಜ್ ಕುಮಾರ್ ಎದುರುಗಡೆ ಕುಳಿತು ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಗೆಲ್ಲುವ ಅದೃಷ್ಟಕ್ಕೆ ಮುಖಾಮುಖಿ ಆಗಬೇಕಾಗುತ್ತದೆ.

ಈ ಮಧ್ಯೆ ಸೋಮವಾರದಿಂದ ಗುರುವಾರ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ವಿಶೇಷ ಸ್ಪರ್ಧೆ ಇರುತ್ತದೆ. ಅದರ ಹೆಸರು "ಮನೆಗೆ ಮಹಾಲಕ್ಷ್ಮಿ". ಇಲ್ಲಿ ಪ್ರತಿದಿನ ಒಂದು ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಸರಿ ಉತ್ತರ ಟೈಪ್ ಮಾಡಿ ಎಸ್ಸೆಂಎಸ್ ಕಳಿಸಿದವರಿಗೆ 25 ಸಾವಿರ ಬಹುಮಾನ ಸಿಗುತ್ತದೆ. KOTI ಎಂದು ಬರೆದು ಒಂದು ಸ್ಪೇಸ್ ಕೊಟ್ಟು A/B/C/D ಸಮೂದಿಸಿ, ನಂ. 57827 ಎಸ್ಸೆಂಎಸ್ ಕಳಿಸಿ. ವಿಧಾನ (KOTI space option A/B/C/D)

ಇನ್ನೊಂದು ಸಮಾಚಾರವೆಂದರೆ, ಏರ್ ಟೆಲ್ ತನ್ನ ಚಂದಾದಾರರಿಗೆಂದೇ ಒಂದು ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿದೆ. ಅದರ ಹೆಸರು Golden Window. 50123 ಗೆ KK (space option A/B/C/D) SMS ಮಾಡಿ ಅಲ್ಲಿ ಮೂಡಿಬರುವ ಪ್ರಶ್ನೆಗೆ ಸರಿ ಉತ್ತರ ಕಳಿಸಿದರೆ, ಗೆದ್ದರೆ, ಅಂದರೆ ನಿಮ್ಮ ಲಕ್ಕಿ ನಂಬರ್ ಬಂದರೆ ನೀವು ಸೀದಾ ಹೋಗಿ ಪುನೀತ್ ಎದುರಿಗೆ ಕುಳಿತು ಕೋಟ್ಯಧಿಪತಿಯಾಗುವ ಅವಕಾಶ ಸಿಕ್ಕತ್ತೆ. ಆಲ್ ದಿ ಬೆಸ್ಟ್.

English summary
Entry through sms to Suvarna TV Kannadada kotyadhipati is closed. However you can still try using Golden Window opportunity, exclusive for Airtel Subscribers. Plus, an opportunity to win 25K through Manege Mahalakshmi is open. For more info, Check Suvarna TV channel.
Please Wait while comments are loading...