»   » 'ಮಹರ್ಷಿ ದರ್ಪಣ' ನಿರೂಪಕರಾಗಿ ಸರ್ ಎಂವಿ ಮರಿಮಗ

'ಮಹರ್ಷಿ ದರ್ಪಣ' ನಿರೂಪಕರಾಗಿ ಸರ್ ಎಂವಿ ಮರಿಮಗ

Posted By:
Subscribe to Filmibeat Kannada

ಮುಂಜಾನೆ ಎದ್ದಾಗ ಮುಂದಿನ ದಿನಗಳು ಹೇಗಿರಬಹುದು ಎಂದು ತಿಳಿಯುವ ಕುತೂಹಲದ ಮನಸ್ಸುಗಳಿಗೆ ಸುವರ್ಣ ವಾಹಿನಿಯು ಪ್ರಸ್ತುತ ಪಡಿಸುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮ 'ಮಹರ್ಷಿ ದರ್ಪಣ' ಇದೇ ಮೇ 17ರಿಂದ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ಆರಂಭವಾಗಲಿದೆ.

ಜ್ಯೋತಿಷ್ಯ ಎನ್ನುವುದು ಯಾವುದೇ ಸಮಸ್ಯೆಗಳಿಗೆ ಉತ್ತರ ಅಲ್ಲ, ಅದು ಉತ್ತರ ಹುಡುಕುವ ಮಾರ್ಗದರ್ಶಿ. ಇದರಲ್ಲಿ ಯಾವ ಡಂಬಾಚಾರಿಕೆಯೂ ಇಲ್ಲದ ವೈಜ್ಞಾನಿಕ ಲೇಪ ನೀಡುವ ಕಾರ್ಯಕ್ರಮ 'ಮಹರ್ಷಿ ದರ್ಪಣ'. [ಪಾಕಪ್ರವೀಣರಾಗಬೇಕೆ, ತಪ್ಪದೆ ನೋಡಿ 'ಪಾಕಶಾಲೆ']

Maharshi Darpana

ಸ್ಫಟಿಕ ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಮುಖ ಭವಿಷ್ಯ ಇನ್ನು ಮುಂತಾದ ಜ್ಯೋತಿಷ್ಯ ವಿಜ್ಞಾನದ ಮೂಲಕ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ ಎಂ ವಿಶ್ವೇಶ್ವರಯ್ಯನವರ ಮರಿಮಗನಾದ ಶ್ರೀ ರಾಘವೇಂದ್ರ ಮೋಕ್ಷಗೊಂಡಂ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿರುತ್ತಾರೆ.

ಸುವರ್ಣವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ಶ್ರೀ ರಾಘವೇಂದ್ರ ವೈಭವ ಖ್ಯಾತಿಯ ಸ್ವಾಮಿ ಪಾತ್ರಧಾರಿ ಪರಿಕ್ಷಿತ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ಇವರ ನಿರೂಪಣೆ ವಿಭಿನ್ನವಾಗಿದ್ದು ವೈವಿಧ್ಯಮಯವಾಗಿರುತ್ತದೆ.

ಅಲ್ಲದೇ ದಿನಭವಿಷ್ಯ ಪ್ರಶ್ನೋತ್ತರದೊಂದಿಗೆ ನಾವೆಂದೂ ನೋಡಿರದ ಅಪರೂಪದ ಪುಣ್ಯಕ್ಷೇತ್ರಗಳ ಅನಾವರಣ ಹಾಗೂ ಪರಿಚಯವನ್ನೂ ಮಾಡಿಸಿಕೊಡಲಿದ್ದಾರೆ. ಒಟ್ಟಿನಲ್ಲಿ ಮುಂಜಾನೆಯ ಭವಿಷ್ಯದೊಂದಿಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಅವಕಾಶ ಮಹರ್ಷಿ ದರ್ಪಣದಲ್ಲಿದೆ ತಪ್ಪದೇ ನೋಡಿ. (ಫಿಲ್ಮಿಬೀಟ್ ಕನ್ನಡ)

English summary
The Star Network's Kannada General Entertainment Channel Suvarna announces the launch of its new astrology show 'Maharshi Darpana' from May 17th 2015. The soap will go on air from Monday to Saturday 8 AM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada