»   » ಸುವರ್ಣ ವಾಹಿನಿಯಲ್ಲಿ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ'!

ಸುವರ್ಣ ವಾಹಿನಿಯಲ್ಲಿ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ'!

Posted By:
Subscribe to Filmibeat Kannada

ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿರುವ ಕಾರ್ಯಕ್ರಮಗಳಲ್ಲಿ ರಿಯಾಲಿಟಿ ಶೋಗಳ ಪಾಲು ಸ್ವಲ್ಪ ಚಾಸ್ತಿಯೇ ಇದೆ. ಈ ನಿಟ್ಟಿನಲ್ಲಿ ಸ್ಟಾರ್ ನೆಟ್ ವರ್ಕ್ ಒಡೆತನದ ಸುವರ್ಣ ವಾಹಿನಿಯೂ ಒಂದು ಹೆಜ್ಜೆ ಮುಂದಿದೆ.

ಸುವರ್ಣ ವಾಹಿನಿಯು ಇದೀಗ ಒಂದು ವಿನೂತನ ರಿಯಾಲಿಟಿ ಶೋ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಎಂಬ ಕಾರ್ಯಕ್ರಮವನ್ನು ಇದೇ ಡಿಸೆಂಬರ್ 28,2014 ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಪ್ರಾರಂಭಿಸುತ್ತಿದೆ. [ಸುವರ್ಣ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಲಿಮ್ಕಾ ದಾಖಲೆ]

ಈ ರಿಯಾಟಿ ಶೋ ಸೆಲೆಬ್ರಿಟಿಗಳ ಗೇಮ್ ಶೋ ಆಗಿದ್ದು, ಇದರಲ್ಲಿ ಕನ್ನಡ ಚಲನಚಿತ್ರ ರಂಗದ ತಾರೆಯರು ಹಾಗೂ ಧಾರಾವಾಹಿಗಳ ಮೂಲಕ ಎಲ್ಲರ ಮನೆಮಾತಾಗಿರುವ ಕಿರುತೆರೆಯ ತಾರೆಯರು ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿರುವ ಆಸಕ್ತಿದಾಯಕ ಸುತ್ತುಗಳು ನೋಡುಗರ ಕುತೂಹಲವನ್ನು ಹೆಚ್ಚಿಸುತ್ತಾ ಸಾಗುತ್ತದೆ.

Swalpa Adjust Madkolli

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದಲ್ಲಿ ಕೈ ಕಟ್ ಬಾಯಿ ಮುಚ್ಚು, ಕತೆ ಕೇಳ್ರಪ್ಪ ಕತೆ, ಆ ಕಚಕ್ ಮತ್ತು ಫೈನಲ್ ರೌಂಡ್ ಎಂಬ 4 ಸುತ್ತುಗಳಿರುತ್ತವೆ. ಇವೆಲ್ಲಾ ಆಟಗಳನ್ನು ಇದೇ ಡಿಸೆಂಬರ್ 28 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಕಾರ್ಯಕ್ರಮದಲ್ಲಿ ನೋಡಿ ಆನಂದಿಸಬಹುದು.

ಈ ಸೆಲೆಬ್ರಿಟಿ ಗೇಮ್ ಶೋವನ್ನು ರಸವತ್ತಾಗಿ ನಿರೂಪಣೆ ಮಾಡಿ ವೀಕ್ಷಕರ ಮನಸೆಳೆಯುವ ಜವಾಬ್ದಾರಿ ಹೊತ್ತಿರುವ ನಿರೂಪಕರು ಶೈನ್ ಶೆಟ್ಟಿ ಹಾಗೂ ಅನುಶ್ರೀ. ಪ್ರತಿ ಸುತ್ತಿನಲ್ಲೂ ಸ್ವಲ್ಪ ಮಾಹಿತಿ, ಹೆಚ್ಚು ಮೋಜು, ಮನರಂಜನೆಗಳ ಮಹಾಪೂರವೇ ತುಂಬಿದ ವಾರಾಂತ್ಯದ ಗೇಮ್ ಶೋ ಇದು. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ದೀಪಿಕಾ ಕಾಮಯ್ಯ, ಸಂತೋಷ್, ಆದಿ ಲೋಕೆಶ್ ಹಾಗೂ ಅನಿತಾ ಭಟ್.

ವಾರಾಂತ್ಯವನ್ನು ನಕ್ಕು ನಲಿಯುತ್ತಾ ,ಕುಟುಂಬ ಸಮೇತರಾಗಿ ಕುಳಿತು ನೋಡುವ ಕಾರ್ಯಕ್ರಮ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ. ಕರ್ನಾಟಕದ ವೀಕ್ಷಕರ ಮನೆಮಾತಾಗಿರುವ ಸುವರ್ಣವಾಹಿನಿಯು ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಮೂಡಿಬರುತ್ತಿರುವ ಅಮೃತವರ್ಷಿಣಿ, ಅವನು ಮತ್ತೆ ಶ್ರಾವಣಿ, ಮಧುಬಾಲ, ಮಿಲನ, ಅರಗಿಣಿ, ಪರಿಣೀತ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಹಾಗೂ ಪಂಚರಂಗಿ ಪೋಂ ಪೋಂ ಅದೇ ಹಾದಿಯಲ್ಲಿವೆ. (ಫಿಲ್ಮಿಬೀಟ್ ಕನ್ನಡ)

English summary
Star Network`s Kannada General Entertainment Suvarna has announced the launch of its new reality show “Swalpa Adjust Madkolli”. The celebrity game show goes on December 21st 2014 . The show contains 4 rounds i.e KAI KAT BAI MUCH; KATHE KELRAPPA KATHE; AAA KACHACK; FINAL Round.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada