'ಬಿಗ್ ಬಾಸ್ ಸೀಸನ್ 2' ಅಧಿಕೃತ ಲಾಂಛನ ಬಿಡುಗಡೆ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಬಿಗ್ ಬಾಸ್ ಸೀಸನ್ 2' ತನ್ನ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದ್ದು, ಇದು ಈ ವರ್ಷದ ಬೃಹತ್ ರಿಯಾಲಿಟಿ ಶೋ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಬಿಗ್ ಬಾಸ್ ಮನೆ ಸೇರಲಿರುವವರ ಹೆಸರುಗಳ ಕುರಿತು ಈಗಾಗಲೇ ಬಹು ಕುತೂಹಲವನ್ನು ಕೆರಳಿಸಿರುವ ಈ ಆವೃತ್ತಿಯು ಸಾಕಷ್ಟು ಪ್ರಥಮಗಳಿಗೆ ಮುನ್ನುಡಿ ಬರೆಯಲಿದೆ.
ಮನರಂಜನೆಯ ಮಹಾಪೂರವನ್ನೇ ಹರಿಸಲಿರುವ 'ಬಿಗ್ ಬಾಸ್ ಸೀಸನ್ 2' ಕಾರ್ಯಕ್ರಮ ಪೂರ್ತಿ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ 'ಕಿಚ್ಚ ಸುದೀಪ್' ಈ ಕಾರ್ಯಕ್ರಮದ ನಿರೂಪಕರಾಗಿದ್ದು ತಮ್ಮ ಆಕರ್ಷಕ ಶೈಲಿ ಹಾಗೂ ತಮ್ಮ ಪ್ರಭಾವಿ ವ್ಯಕ್ತಿತ್ವದಿಂದ ಮನರಂಜನೆಗೆ ಮತ್ತೊಂದು ಆಯಾಮವನ್ನು ಸೃಷ್ಟಿಸಲಿದ್ದಾರೆ. ['ಬಿಗ್ ಬಾಸ್ 2' ಫಸ್ಟ್ ಲುಕ್ ಔಟ್, ಸುದೀಪ್ ರಾಕ್ಸ್]

ಈ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆ ಸೇರಲಿರುವವರ ಹೆಸರುಗಳ ಪಟ್ಟಿ ಅನಾವರಣಗೊಳ್ಳಬೇಕಿದೆ. ಆದರೂ ಈ ಕುರಿತು ಊಹಾಪೋಹಗಳ ವ್ಯಾಪಕ ಅಲೆ ಸೃಷ್ಟಿಯಾಗಿರುವುದು ಪ್ರೇಕ್ಷಕರಲ್ಲಿ ಮತ್ತಷ್ಟು ಆಸಕ್ತಿಯನ್ನು ಹುಟ್ಟಿಸಿದೆ. (ಒನ್ಇಂಡಿಯಾ ಕನ್ನಡ)
<center><iframe width="6೦0" height="360" src="//www.youtube.com/embed/2Oxu-u13-x8?feature=player_embedded" frameborder="0" allowfullscreen></iframe></center>


Click it and Unblock the Notifications











