For Quick Alerts
  ALLOW NOTIFICATIONS  
  For Daily Alerts

  'ಡ್ರಾಮಾ ಜೂನಿಯರ್ಸ್ 3' ಫೈನಲ್ ಗೆದ್ದ ಬೆಳಗಾವಿ ಹುಡುಗಿ ಸ್ವಾತಿ

  |

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಡ್ರಾಮಾ ಜೂನಿಯರ್ಸ್' ಪ್ರಮುಖವಾಗಿದ್ದದು. ಈ ಕಾರ್ಯಕ್ರಮ ಈಗ ಯಶಸ್ವಿಯಾಗಿ ತನ್ನ ಮೂರು ಸೀಸನ್ ಗಳನ್ನು ಮುಗಿಸಿದೆ.

  'ಡ್ರಾಮಾ ಜೂನಿಯರ್ಸ್ 3' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಕಾರ್ಯಕ್ರಮ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿತ್ತು. ಫೈನಲ್ ಹಂತ ತಲುಪಿದ್ದ ಮಕ್ಕಳಿಗೆ ಸೋಲೋ ರೌಂಡ್, ಗ್ರೂಪ್ ಆಕ್ಟ್ ಹಾಗೂ ಜುಗಲ್ ಬಂದಿ ಹೀಗೆ ಮೂರು ಹಂತಗಳಲ್ಲಿ ಸ್ಪರ್ಧೆ ಮಾಡಲಾಯಿತು.

  'ಡ್ರಾಮಾ ಜೂನಿಯರ್ಸ್' ಸ್ಪರ್ಧಿ 'ವಂಶಿ'ಯ ಅಭಿನಯ ಯಾನ

  ದಕ್ಷಯಜ್ಞ, ಕಾಳಿದಾಸ- ಭೋಜರಾಜ, ನಕ್ಷತ್ರಿಕ, ಕಿಸಾ ಗೌತಮಿ, ಕಿಂಗ್ ಲಿಯರ್, ಒಡಲಾಳದ ಸಾಕವ್ವ ಹಾಗೂ ಸಿನಿಮಾ ವರ್ಸಸ್ ಧಾರಾವಾಹಿ ಈ ಸ್ಕಿಟ್ ಗಳಲ್ಲಿ ನಟಿಸಿ ಮಕ್ಕಳು ರಂಜಿಸಿದರು. ಮುಂದೆ ಓದಿ...

  ಮೊದಲ ಸ್ಥಾನ ಪಡೆದ ಸ್ವಾತಿ

  ಮೊದಲ ಸ್ಥಾನ ಪಡೆದ ಸ್ವಾತಿ

  ಬೆಳಗಾವಿ ಹುಡುಗಿ ಸ್ವಾತಿ 'ಡ್ರಾಮಾ ಜೂನಿಯರ್ಸ್ ಸೀಸನ್ 3' ಕಾರ್ಯಕ್ರಮದ ವಿಜೇತಳಾಗಿದ್ದಾರೆ. ಈ ಬಾರಿ ಗೆಲುವಿನ ಪಟ್ಟ ಈ ಪುಟಾಣಿಗೆ ಹೋಗಿದೆ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಿ ಅಭಿನಯ ಮಾಡುತ್ತಿದ್ದ ಸ್ವಾತಿ ದೊಡ್ಡ ಪ್ರತಿಭೆ ಹೊಂದಿದ್ದ ಹುಡುಗಿ. 13 ವರ್ಷದ ಈ ಹುಡುಗಿ ಟ್ರೋಫಿ ಪಡೆದುಕೊಂಡಿದ್ದಾಳೆ.

  ಇಬ್ಬರು ರನ್ನರ್ ಅಪ್

  ಇಬ್ಬರು ರನ್ನರ್ ಅಪ್

  'ಡ್ರಾಮಾ ಜೂನಿಯರ್ಸ್ ಸೀಸನ್ 3' ಕಾರ್ಯಕ್ರಮದಲ್ಲಿ ಇಬ್ಬರು ಸ್ಪರ್ಧಿಗಳು ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೊಪ್ಪಳದ 11 ವರ್ಷದ ಹುಡುಗ ಮಂಜು ಹಾಗೂ ಹಾಸನದ ಡಿಂಪನಾ ರನ್ನರ್ ಅಪ್ ಆಗಿದ್ದಾರೆ. ಕೇವಲ 5 ವರ್ಷದ ಹುಡುಗಿಯಾಗಿರುವ ಡಿಂಪನಾ ಫೈನಲ್ ನಲ್ಲಿ ಸಾಕವ್ವನ ಪಾತ್ರ ಮಾಡಿದ್ದರು. ಅವರ ಅದ್ಭುತ ನಟನೆಗೆ ನಟಿ ಲಕ್ಷ್ಮಿ ಭಾವುಕರಾಗಿದ್ದರು.

  ಡ್ರಾಮಾ ಜೂನಿಯರ್ಸ್-2 ಗೆದ್ದ 'ಜೂನಿಯರ್ ಲಕ್ಷ್ಮಿ' ಮತ್ತು ಅಮಿತ್

  ಫೈನಲ್ ನಲ್ಲಿ ಸರಿಗಮಪ ಹಾಡು

  ಫೈನಲ್ ನಲ್ಲಿ ಸರಿಗಮಪ ಹಾಡು

  ಕಾರ್ಯಕ್ರಮದ ಫೈನಲ್ ವೇದಿಕೆ ಮೇಲೆ ಕಳೆದ ಬಾರಿಯ ಸರಿಗಮಪ ಕಾರ್ಯಕ್ರಮದ ವಿಜೇತ ಕೀರ್ತನ್ ಹೊಳ್ಳ ಹಾಗೂ ರನ್ನರ್ ಅಪ್ ಹನುಮಂತ ಹಾಡು ಹಾಡಿದರು. ಹನುಮಂತನ ಹಾಡಿನ ಜೊತೆಗೆ ಕಾಮಿಡಿಯನ್ನು ತುಮಕೂರಿನ ಜನ ಎಂಜಾಯ್ ಮಾಡಿದರು.

  ನಿನ್ನೆ ಪ್ರಸಾರ ಆಗಿದೆ

  ನಿನ್ನೆ ಪ್ರಸಾರ ಆಗಿದೆ

  'ಡ್ರಾಮಾ ಜೂನಿಯರ್ ಸೀಸನ್ 3' ಕಾರ್ಯಕ್ರಮದ ಫೈನಲ್ ಸಂಚಿಕೆಯ ಚಿತ್ರೀಕರಣ ಕೆಲ ದಿನಗಳ ಹಿಂದೆ ನಡೆದಿದ್ದು, ವಿನ್ನರ್ ಯಾರು ಎನ್ನುವ ಕುತೂಹಲ ಹಾಗೇಯೇ ಇತ್ತು. ಜೀ ಕನ್ನಡ ವಾಹಿನಿಯಲ್ಲಿ ನಿನ್ನೆ ಸಂಜೆ ಆರು ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಿದ್ದು, ವಿಜೇತರ ಹೆಸರು ತಿಳಿದಿದೆ. ವಿಜಯ ರಾಘವೇಂದ್ರ, ಲಕ್ಷ್ಮಿ ಹಾಗೂ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಆನಂದ್ ನಿರೂಪಣೆ ಇತ್ತು.

  English summary
  Swathi a 13 years old Belagavi girl is the winner of Zee Kannada channel's popular reality show 'Drama Juniors Season 3' grand finale. Manju and Dimpana are the runner up of the this season.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X