For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ಅಮ್ಮಂದಿರಿಗಾಗಿ 'ಸೈ ಟು ಡ್ಯಾನ್ಸ್'

  By Harshitha
  |

  ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸುವರ್ಣ ವಾಹಿನಿ ಅಮ್ಮಂದಿರಿಗಾಗಿ ಡ್ಯಾನ್ಸ್ ರಿಯಾಲಿಟಿ ಶೋ 'ಸೈ ಟು ಡ್ಯಾನ್ಸ್' ನಡೆಸುತ್ತಿದೆ. ಸಂಸಾರದ ನಿತ್ಯ ಜೀವನದ ನೃತ್ಯ ನೈಪುಣ್ಯತೆಯನ್ನು ಹೊಂದಿರುವ ಸ್ತ್ರೀಯರಿಗೆ ಈ ಶೋ ಉಪಯುಕ್ತವಾಗಿದೆ.

  10 ಜನ ತಾಯಂದಿರು ಇದರಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಆಟ, ಮನರಂಜನೆ ಜೊತೆಗೆ ಕುಟುಂಬಕ್ಕೆ ಸಂಬಂಧಪಟ್ಟ ಟಾಸ್ಕ್ ಗಳು ಇರುತ್ತವೆ. ದೇಶವಿದೇಶ ಸಂಸ್ಕೃತಿಯ ಜೊತೆಗೆ ಸಂಸಾರಕ್ಕೆ ಅನುಗುಣವಾಗಿ ನೃತ್ಯ ವಿಷಯಗಳು ಇರುತ್ತದೆ.

  ಮೊದಲೆರಡು ಸಂಚಿಕೆಯಲ್ಲಿ ನಟಿ ಶೃತಿ, ಶರ್ಮಿಳಾ ಮಾಂಡ್ರೆ ಮತ್ತು ಐಂದ್ರಿತಾ ರೇ ನಿರ್ಣಾಯಕರಾಗಿ 10 ಜನ ತಾಯಂದಿರನ್ನು ಆಯ್ಕೆ ಮಾಡುತ್ತಾರೆ. 'ಸೈ ಟು ಡ್ಯಾನ್ಸ್' ವಿಶೇಷ ಏನಪ್ಪಾ ಅಂದ್ರೆ, ಚಿತ್ರರಂಗದ ದಿಗ್ಗಜ ಜಗ್ಗೇಶ್ ನಿರ್ಣಾಯಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿರಂಜನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. [ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

  ಪ್ರತಿ ವಾರವೂ ಒಂದು ಎಲಿಮಿನೇಷನ್ ರೌಂಡ್ ಇದ್ದು ಒಬ್ಬೊಬ್ಬರು ಎಲಿಮಿನೇಟ್ ಆಗುತ್ತಾರೆ. ಸುವರ್ಣ ವಾಹಿನಿಯೂ 'ಸೈ ಟು ಡ್ಯಾನ್ಸ್' ಮೂಲಕ ನಾಡಿನ ವೀಕ್ಷಕರಿಗೆ ಅಮ್ಮಂದಿರ ಅಭಿಲಾಷೆಯನ್ನು ಪೊರೈಸುವಲ್ಲಿ ಪ್ರಯತ್ನಿಸುತ್ತದೆ. ಅಂತಹ ಮಹಾನ್ ತಾಯಂದಿರ ಮೊದಲ ಹೆಜ್ಜೆ ಅಕ್ಟೋಬರ್ 24 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

  English summary
  Kannada Entertainment Channel Suvarna has come up with a new dance reality show called 'Sye to Dance' exclusively for mothers. The show will telecast from October 24th, Saturday and Sunday 8pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X