For Quick Alerts
  ALLOW NOTIFICATIONS  
  For Daily Alerts

  23 ವರ್ಷಗಳ ನಂತರ ಟಿ ಎನ್ ಸೀತಾರಾಂ ಧಾರಾವಾಹಿ 'ಮತ್ತೆ ಮಾಯಾಮೃಗ'!

  |

  'ಮಾಯಾಮೃಗ' ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಈ ಧಾರಾವಾಹಿಗೇ ಒಂದು ಫ್ಯಾನ್ ಫಾಲೋವಿಂಗ್ ಇದೆ. ಮತ್ತೆ ಈ ಧಾರಾವಾಹಿ ಟಿವಿ ಪ್ರಸಾರ ಆದರೂ ತಪ್ಪದೆ ನೋಡುವಂತಹ ಒಂದು ವರ್ಗ ಇದೇ ಇದೆ. ಟಿ ಎನ್ ಸೀತಾರಾಂ, ಪಿ.ಶೇಷಾದ್ರಿ, ನಾಗೇಂದ್ರ ಶಾರಂತಹ ದಿಗ್ಗಜರೇ ಸೇರಿಕೊಂಡಿದ್ದ ಧಾರಾವಾಹಿ ಇದು.

  1998ರ ವೇಳೆಯಲ್ಲಿ 'ಮಾಯಾಮೃಗ' ಆರಂಭ ಆಗಿತ್ತು. ಈ ಧಾರಾವಾಹಿ ಕೊನೆಗೊಳ್ಳುವವರೆಗೂ ಓಡುತ್ತಲೇ ಇತ್ತು. ಹೀಗಾಗಿ 90 ರ ದಶಕದ ಕೊನೆಯಲ್ಲಿ ಕಿರುತೆರೆಯಲ್ಲಿ ಹೊಸ ಕ್ರಾಂತಿ ಮಾಡಿದ ಹೆಗ್ಗಳಿಕೆ 'ಮಾಯಾಮೃಗ' ಧಾರಾವಾಹಿಗೆ ಸಲ್ಲಲೇ ಬೇಕು. ಈಗ ಮತ್ತೆ ಇದೇ ತಂಡ ಈ ಮಾಯಾಮೃಗವನ್ನು ಕಿರುತೆರೆಗೆ ಪರಿಚಯಿಸೋಕೆ ಮುಂದಾಗಿದೆ.

  'ರಾಜಿ'ಯನ್ನು ಕಾಪಾಡಲು ಕರ್ಣನಿಂದ ಮಾತ್ರ ಸಾಧ್ಯ..!'ರಾಜಿ'ಯನ್ನು ಕಾಪಾಡಲು ಕರ್ಣನಿಂದ ಮಾತ್ರ ಸಾಧ್ಯ..!

  ಕಿರುತೆರೆಯಲ್ಲಿ ಮತ್ತೆ 'ಮಾಯಾಮೃಗ'

  23 ವರ್ಷಗಳ ಬಳಿಕ 'ಮತ್ತೆ ಮಾಯಾಮೃಗ'ದ ಸದ್ದು ಕೇಳಿಸುತ್ತಿದೆ. ಅದೇ ತಂಡ ಮತ್ತೆ ಒಂದಾಗುತ್ತಿದೆ. 'ಮಾಯಾಮೃಗ' ಧಾರಾವಾಹಿಯನ್ನು ಮತ್ತೆ ನೋಡಬೇಕು ಅನ್ನುವ ವೀಕ್ಷಕರಿಗಾಗಿಯೇ ಈ ತಲೆಮಾರಿಗೂ ಅನ್ವಯವಾಗುವತಂಹ ಕಥೆಯನ್ನು ಹೆಣೆದು ಕಿರುತೆರೆಗೆ ತರುವ ಪ್ರಯತ್ನ ಅದೇ ತಂಡ ಮುಂದಾಗಿದೆ.

  ಹಾಗೇ ನೋಡಿದರೆ ಇದು ಕಿರುತೆರೆಯಲ್ಲಿ ಇದೊಂದು ಪ್ರಯೋಗವೇ ಸರಿ. 'ಮಾಯಾಮೃಗ' ಅಂದಿನ ಕಾಲ ಘಟ್ಟಕ್ಕೆ ವಿಶಿಷ್ಟ ಪ್ರಯತ್ನ. ಈಗ ಮತ್ತೆ ಅದೇ ಕಥೆಯನ್ನೇ ಹೇಳಲು ಹೊರಟರೆ ಜನರು ನೋಡುತ್ತಾರೆಯೇ? ಅನ್ನೋ ಪ್ರಶ್ನೆ ಮೂಡುವುದಂತೂ ಸತ್ಯ. ಆದರೆ, ತಮ್ಮ ಎದುರಾಗಬಹುದಾದಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕೊಂಡೇ ಮತ್ತೆ 'ಮತ್ತೆ ಮಾಯಾಮೃಗ' ಜೊತೆ ಟಿ ಎನ್ ಸೀತಾರಾಮ್ ಬರುತ್ತಿದ್ದಾರೆ.

  ಮುಂದಿನ ತಲೆ ಮಾರಿನ ಕಥೆ 'ಮತ್ತೆ ಮಾಯಾಮೃಗ'

  ಹೆಚ್ಚು ಕಡಿಮೆ 20 ವರ್ಷಗಳ ಬಳಿಕ ಟಿ.ಎನ್ ಸೀತಾರಂ 'ಮತ್ತೆ ಮಯಾಮೃಗ'ವನ್ನು ಕಿರುತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಹಾಗಾಗಿ ಎರಡು ದಶಕಗಳಲ್ಲಿ ಬದಲಾದ ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆಯೋ ಅದನ್ನು ಸೂಕ್ಷ್ಮವಾಗಿ ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.

  ನೈತಿಕತೆ ಇಲ್ಲದ ಸಮಾಜದಲ್ಲಿ ಎರಡು ತಲೆಮಾರಿನ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಹೊರಟಿದೆ. ಜನ-ಜೀವನ, ಹಣ, ಜನರ ಆಲೋಚನೆಗಳು ಇವೆಲ್ಲವೂ ಕಥೆಯ ಮುಖ್ಯ ಭಾಗವಾಗಿರುತ್ತವೆ. ಹೀಗಾಗಿ 'ಮತ್ತೆ ಮಾಯಾಮೃಗ' ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ.

  T N Seetharam Directing Matte Mayamruga Serial For Siri Kannada

  ಮೂಲ ಧಾರಾವಾಹಿಯ ಪಾತ್ರಧಾರಿಗಳು ಇರುತ್ತಾರಾ?

  'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಎರಡೂ ತಲೆಮಾರಿನ ನಟ-ನಟಿಯರೂ ಇರುತ್ತಾರೆ. ಎರಡು ದಶಕಗಳ ಹಿಂದೆ ಬಂದಿದ್ದ ಧಾರಾವಾಹಿಯಲ್ಲಿ ಮಾಳವಿಕ, ಅವಿನಾಶ್, ರಾಜೇಶ್ ನಟರಂಗ, ವೀಣಾ ಸುಂದರ್, ಎಂ ಡಿ ಪಲ್ಲವಿ ಸೇರಿದಂತೆ ಹಲವರು ದಿಗ್ಗಜರು ನಟಿಸಿದ್ದರು. ಈಗ ನಿರ್ಮಾಣಗೊಳ್ಳುತ್ತಿರುವ ಧಾರಾವಾಹಿಯಲ್ಲಿ ಅವರೆಲ್ಲರೂ ಇರುತ್ತಾರಂತೆ.

  ಹಿರಿಯರೊಂದಿಗೆ ಇಂದಿನ ತಲೆಮಾರಿನ ಕಿರುತೆರೆ ಕಲಾವಿದರೂ ಕೂಡ ನಟಿಸಲಿದ್ದಾರೆ. ಸಿರಿ ರವಿಕುಮಾರ್, ಮೇಘಾ ಈಗಾಗಲೇ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂದ್ಹಾಗೆ ಈಗಾಗಲೇ 'ಮತ್ತೆ ಮಾಯಾಮೃಗ' ಧಾರಾವಾಹಿ ಚಿತ್ರೀಕರಣ ಆರಂಭ ಆಗಿದ್ದು, ಅಕ್ಟೋಬರ್ 19 ರಿಂದ ರಾತ್ರಿ 9 ಗಂಟೆಗೆ ಸಿರಿ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

  English summary
  T N Seetharam Directing Matte Mayamruga Serial For Siri Kannada, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X