»   » ಈ ಬಾರಿಯ 'ಬಿಗ್ ಬಾಸ್ 4' ಅರಮನೆಯಲ್ಲಿ ಏನುಂಟು, ಏನಿಲ್ಲ?

ಈ ಬಾರಿಯ 'ಬಿಗ್ ಬಾಸ್ 4' ಅರಮನೆಯಲ್ಲಿ ಏನುಂಟು, ಏನಿಲ್ಲ?

Posted By:
Subscribe to Filmibeat Kannada

ಅಂದುಕೊಂಡಂತೆ 'ಬಿಗ್ ಬಾಸ್ ಕನ್ನಡ 4' ಸುಲಲಿತವಾಗಿ ಆರಂಭವಾಗಿದೆ. ಈಗಾಗಲೇ 15 ಸ್ಪರ್ಧಿಗಳು ಮನೆ ಒಳಗೆ ಕಾಲಿಟ್ಟಿದ್ದಾರೆ. ಎಲ್ಲರೂ ಪರಿಚಯ ಕೂಡ ಮಾಡಿಕೊಂಡಿದ್ದಾರೆ.

ಈ ಬಾರಿ ಬಿಡದಿ ಬಳಿ ಕಲರ್ ಫುಲ್ ಬಿಗ್ ಬಾಸ್ ಮನೆಯನ್ನು ರೆಡಿ ಮಾಡಲಾಗಿದೆ. ಈ ಅರಮನೆಗೆ 15 ಸ್ಪರ್ಧಿಗಳಲ್ಲಿ ನಿರ್ದೇಶಕ ಪ್ರಥಮ್ ಅವರು ಮೊದಲನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ತದನಂತರ ಶೀತಲ್ ಶೆಟ್ಟಿ, ಶಾಲಿನಿ, ಕಿರಿಕ್ ಕೀರ್ತಿ ಸೇರಿದಂತೆ ಉಳಿದವರು ಒಬ್ಬೊಬ್ಬರಾಗಿ ಮನೆ ಒಳಗೆ ಬಲಗಾಲಿಟ್ಟು ಒಳ ಹೋಗಿದ್ದಾರೆ.['ಬಿಗ್ ಬಾಸ್ ಕನ್ನಡ-4' ಶೋನ ಎಲ್ಲಾ ಸ್ಪರ್ಧಿಗಳ ಪರಿಚಯ]

'ಕಂಡಿರೋ ಮುಖಗಳ ಕಾಣದೇ ಇರೋ ಮುಖ', 'ಬಿಗ್ ಬಾಸ್ ಕನ್ನಡ 4' ಇನ್ಮುಂದೆ ಪ್ರತೀ ದಿನ ರಾತ್ರಿ 9 ಗಂಟೆಗೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಇನ್ನು ಈ ಸಲದ ಬಿಗ್ ಬಾಸ್ ಮನೆ ಅಲ್ಪ-ಸ್ವಲ್ಪ ಬದಲಾವಣೆ ಆಗಿದೆ. ಪೈಟಿಂಗ್ ಕಲರ್ ಬದಲಾವಣೆ ಆಗಿದೆ. ಜೊತೆಗೆ ಕಳೆದ ಬಾರಿ ಇಲ್ಲದ ಕೆಲವು ಸೌಲಭ್ಯಗಳನ್ನು ಈ ಬಾರಿ ಸ್ಪರ್ಧಿಗಳಿಗೆ ನೀಡಲಾಗಿದೆ. ಅದೇನದು ಹೊಸ ಸೌಲಭ್ಯ ನೋಡಲು ಮುಂದೆ ಓದಿ.....

ಹೊಸ ಮನೆಯಲ್ಲಿ ಏನಿದೆ-ಏನಿಲ್ಲ?

ಬಿಡದಿ ಬಳಿ ತಯಾರಾಗಿರುವ ಈ ಬಾರಿಯ ಬಿಗ್‌ ಬಾಸ್ ಮನೆಯಲ್ಲಿ ಕೊಂಚ ಬದಲಾವಣೆ ಆಗಿದೆ. ಮನೆಯಲ್ಲಾದ ಬದಲಾವಣೆಯನ್ನು ಖುದ್ದು ಕಿಚ್ಚ ಸುದೀಪ್ ಅವರು, ಸ್ಪರ್ಧಿಗಳು ಹೋಗುವ ಮುನ್ನ ತಾವೇ ಹೋಗಿ ನೋಡಿ, ವೀಕ್ಷಕರಿಗೆ ವಿವರಿಸಿದ್ದಾರೆ.[ನಿರ್ಮಾಪಕರ ಪ್ರತಿಭಟನೆ: 'ಬಿಗ್ ಬಾಸ್ ಕನ್ನಡ-4'ಗೆ ಆತಂಕ ಇಲ್ಲ.!]

ಗೇಟ್ ತೆಗೆದ್ರೆ ಗಾರ್ಡನ್

ಮನೆಯ ಒಳಹೊಕ್ಕ ತಕ್ಷಣ, ಕಾಂಪೌಂಡ್ ಗೇಟ್ ತೆಗೆದ್ರೆ ಕಂಡು ಬರೋದು ಸುಂದರವಾದ ಹಸಿರು ಗಾರ್ಡನ್. ಗಾರ್ಡನ್ ನಲ್ಲಿ ಸ್ವಿಮ್ಮಿಂಗ್ ಫೂಲ್, ಎದುರುಗಡೆ ಜಿಮ್ ಸೆಂಟರ್.[ಬಿಗ್ ಬಾಸ್ ಕನ್ನಡ 4 : ಇವರೇ ಕಣ್ರಿ 15 ಸ್ಪರ್ಧಿಗಳು]

ಒಳಗಡೆ ಏನಿದೆ?

ಒಳಗಡೆ ಬಂದ್ರೆ ವಿಶಾಲವಾದ ಹಾಲ್, ಕುಳಿತುಕೊಳ್ಳಲು ಕಲಾತ್ಮಕವಾದ ಎಕ್ಸಾಡ್ರನರಿ ಪಿಂಕ್ ಕಲರ್ ಸೋಫಾ. ತುಂಬಾ ಸುಂದರವಾಗಿದೆ.

ಪಂಚಾಯತಿ ಕಟ್ಟೆ

ಪ್ರತೀ ಶನಿವಾರ ಸುದೀಪ್ ಸ್ಪರ್ಧಿಗಳ ಜೊತೆ ಪಂಚಾಯತಿ ನಡೆಸಲು ಬಳಸುವ ಟೆಲಿವಿಷನ್. ಅಂದಹಾಗೆ ಇದರಲ್ಲಿ ಕಿಚ್ಚ ಅವರು ಮಾತ್ರ ಕಾಣಿಸಿಕೊಳ್ಳುತ್ತಾರೆ, ಬಿಟ್ರೆ ಬೇರೆ ಯಾರೂ ಕೂಡ ಬರೋದಿಕ್ಕೂ ಸಾಧ್ಯ ಇಲ್ಲ.

ಬಿಗ್ ಬಾಸ್ ಮನೆಯನ್ನು ಕಾಪಾಡೋ ದೇವಿ

'ಬಿಗ್ ಬಾಸ್' ಮನೆಯಲ್ಲಿ ಕಾಪಾಡೋ ದೇವಿ, ಅಮ್ನೋರು. ಅಮ್ಮಾ ನಮ್ಮನ್ನು ಕಾಪಾಡಿ. ಪ್ರತೀ ಶನಿವಾರ ಇಲ್ಲಿ ಸಾಕಷ್ಟು ನಮಸ್ಕಾರ-ಪೂಜೆಗಳು ನಡೆಯೋದಂತೂ ಖಡಾ-ಖಂಡಿತ, ಗ್ಯಾರೆಂಟಿ.-ಸುದೀಪ್

ಬಿಗ್ ಮನೆಯಲ್ಲಿನ ಅಡುಗೆ ಮನೆ

ಸುಂದರವಾದ ಅಡುಗೆ ಮನೆ/ಕಿಚನ್. ಕಾಫಿ ಬೇರೆ ರೆಡಿ ಇಟ್ಟಿದ್ದೀರಾ?, ಎಷ್ಟು ದೊಡ್ಡ ಮನಸ್ಸು ನಿಮ್ಮದು. ಕಾಫಿ ಮಾಡ್ಕೊಂಡು ಕುಡಿತೀನಿ. ಡಿಕಾಕ್ಷನ್, ಸಕ್ಕರೆ ಇದೆ. ಹಾಲು ಫ್ರಿಡ್ಜ್ ನಲ್ಲಿ ಇರಬೇಕು. (ಆವಾಗ ಸೈಡಿನಿಂದ ದನ 'ಅಂಬಾ' ಅನ್ನೋ ಸದ್ದು) ಹಾಲು ಬೇಡ ನಾನು ಬ್ಲ್ಯಾಕ್ ಕಾಫಿನೇ ಕುಡಿತೀನಿ ಅಂತ ಸುದೀಪ್ ವಾಪಸಾಗುತ್ತಾರೆ. ಅಂದ್ರೆ ಈ ಬಾರಿ ಸ್ಪರ್ಧಿಗಳು ತಮಗೆ ಹಾಲು ಬೇಕು ಅಂದ್ರೆ, ಬಿಗ್ ಬಾಸ್ ಮನೆಯಲ್ಲಿ ಕಟ್ಟೋ ದನದ ಹಾಲು ಕರೆಯಲು ಇರಬಹುದೇನೋ.

ವಿಶಾಲವಾದ ಡೈನಿಂಗ್ ಹಾಲ್

ವಿಶಾಲವಾದ ಡೈನಿಂಗ್ ಹಾಲ್ ಇದೆ. ಇಲ್ಲಿ 15 ಜನ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಇಲ್ಲಿ ಎಲ್ಲರೂ ಕುತ್ಕೊಂಡು-ತಿನ್ಕೊಂಡು-ಹರಟೆ ಹೊಡ್ಕೊಂಡು-ಜಗಳ ಮಾಡ್ಕೊಂಡು ಇತ್ಯಾದಿ...ಇತ್ಯಾದಿ.....-ಸುದೀಪ್.

ಕಲರ್ ಫುಲ್ ಬೆಡ್ ರೂಮ್

'ಬೆಡ್ ರೂಮ್....ನೀವು ನೋಡಿದ ಹಾಗೆ ಬೆಡ್ ರೂಮ್ ತುಂಬಾನೇ ಕಲರ್ ಫುಲ್ ಮತ್ತು ಹೊಸದಾಗಿದೆ. ಎಂದಿನಂತೆ ಇಲ್ಲಿ ಈ ಬಾರಿ ಮಲಗೋದು ಮಾತ್ರ ಅಲ್ಲ, ಕುತ್ಕೊಂಡು ಹರಟೆ ಹೊಡೆಯಬಹುದು. ಮಾತಾಡಬಹುದು, ಜಗಳ ಕೂಡ ಇಲ್ಲೇ ಕುತ್ಕೊಂಡು ಮಾಡಬಹುದು. ಹುಡುಗರಿಗೆ ಮತ್ತು ಹುಡುಗಿಯರಿಗೆ ಬೇರೆ-ಬೇರೆ ಬೆಡ್ ಗಳು. ನೈಸ್ ನನಗಂತೂ ತುಂಬಾನೇ ಇಷ್ಟ ಆಯ್ತು ಬೆಡ್ ರೂಮ್.'-ಸುದೀಪ್.

ಬಿಗ್ ಬಾಸ್ ಮನೆಯಲ್ಲಿ ಟೆಲಿಫೋನ್ ಬೂತ್

ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಫೋನ್. ಈಗ ನಿಮ್ಮ ತಲೆ ವೇಗವಾಗಿ ಓಡ್ತಾ ಇರ್ಬೋದು. ಇಲ್ಲಿ ಯಾರು ಫೋನ್ ಮಾಡ್ಬೋದು, ಯಾರ ಫೋನ್ ಬರಬಹುದು?. ಫೋನ್ ಇರುತ್ತೆ ಆದ್ರೆ ಬಿಗ್ ಬಾಸ್ ಮಾತಾಡೋದು ಡೌಟ್. ನೋಡೋಣ ಮುಂದೇನಾಗುತ್ತೆ ಅಂತ'.-ಸುದೀಪ್

ಬಿಗ್ ಮನೆಯಲ್ಲಿ ವಿಶೇಷ ವಾಹನ

'ಇದೇನಿದು ಮನೆಯ ಒಳಗೊಂದು ವಾಹನ. ಬಿಗ್ ಬಾಸ್ ಮನೆಯಲ್ಲಿ ಫಸ್ಟ್ ಟೈಮ್ ಒಂದು ವಾಹನ ಇದೆ. ಟ್ರಾವೆಲ್ ಮಾಡೋಕ್ಕಂತೂ ಆಗಲ್ಲ, ಯಾಕೆಂದರೆ ಒಂದ್ಸಾರಿ ಒಳಗೆ ಬಂದ ಮೇಲೆ ಹೊರಗೆ ಹೋಗೋಕ್ಕಾಗಲ್ಲ. ಏನಿರಬಹುದು?, ಹಾಂ ಇದು ಸ್ಪರ್ಧಾರ್ಥಿಗಳ ಕನ್ ಫೆಶನ್ ರೂಮ್. ನಾನು ಹೋಗಲ್ಲ ಸ್ಪರ್ಧಿಗಳು ಒಳಗೆ ಹೋದ ಮೇಲೆ ನೀವೇ ನೋಡಿ, ಒಳಗೆ ಹೇಗಿದೆ ಅಂತ. ಅಂದಹಾಗೆ ಈ ಬಾರಿ ಕನ್ ಫೆಶನ್ ಜಾಸ್ತಿ ಇರಬಹುದು ಅಂತ ನನಗನ್ನಿಸುತ್ತಿದೆ'.-ಸುದೀಪ್.

ರೂಬಿ ಕ್ಯೂಬ್

'ಬಿಗ್ ಬಾಸ್ ಮನೆ ಅಂದ ಮೇಲೆ ಏನೂ ಇರಬಾರದು. ಆದ್ರೆ ಒಂದು ರೂಬಿ ಕ್ಯೂಬ್ ಇದೆ. ಇಲ್ಯಾಕಿದೆ ನೋಡೋಣ ಬಿಗ್ ಬಾಸ್ ಸ್ಪರ್ಧಿಗಳು ಬಂದ ಮೇಲೆ ಗೊತ್ತಾಗುತ್ತೆ'-ಸುದೀಪ್.

ವಾಶ್ ರೂಮ್

'ಬೆಳಗ್ಗಿನ ಸಮಾಚಾರದ ಕಥೆ ಏನು?, ಇದು ವಾಶ್ ರೂಮ್ ಸಿಕ್ಕಾಪಟ್ಟೆ ದೊಡ್ಡದಿದೆ. ಒಳ್ಳೆ ಹಾಲ್ ತರ ಇದೆ. ಇಲ್ಲೂ ಕೂಡ ಕುತ್ಕೊಂಡು ಮಾತಾಡೋ ವ್ಯವಸ್ಥೆ ಮಾಡಿದ್ದಾರೆ. ಅದ್ಭುತವಾದ ಲಕ್ಷುರಿಯಸ್ ವಾಶ್ ರೂಮ್'.-ಸುದೀಪ್

English summary
Bigg Boss is back on small screen again. 'Bigg Boss Kannada-4' reality show will be aired in Colors Kannada Channel from Yesterday (October 9th). Take a tour of the bigg boss Kannada 4 new house.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X