For Quick Alerts
  ALLOW NOTIFICATIONS  
  For Daily Alerts

  ಗೆಳೆಯ ದರ್ಶನ್ ಕಾರಿನ ಮೇಲೆ ಕಣ್ಣು ಹಾಕಿದ ತರುಣ್ ಸುಧೀರ್

  By Naveen
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ಲಂಬೋರ್ಗಿನಿ ಕಾರು ಕೊಂಡುಕೊಂಡಿದ್ದರು. ದರ್ಶನ್ ಅವರ ಹೊಸ ಕಾರನ್ನು ನೋಡಿ ಎಲ್ಲರೂ ಫಿದಾ ಆಗಿದ್ದರು. ದರ್ಶನ್ ತಮ್ಮ ಚಿತ್ರರಂಗದ ಸ್ನೇಹಿತರಿಗೂ ಹೊಸ ಕಾರು ತೋರಿಸಿದ್ದರು. ಆದರೆ ಈಗ ಈ ಕಾರನ್ನು ದರ್ಶನ್ ಸ್ನೇಹಿತ, ನಿರ್ದೇಶಕ ತರುಣ್ ಸುಧೀರ್ ಕದಿಯುತ್ತಾರಂತೆ.

  ಶಿವರಾಜ್ ಕುಮಾರ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಎರಡನೇ ಸಂಚಿಕೆಗೆ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಆಗಮಿಸಿದ್ದರು. ಈ ವೇಳೆ ಶಿವಣ್ಣ ಕೇಳಿದ ತರ್ಲೆ ಪ್ರಶ್ನೆಗಳಿಗೆ ತರುಣ್ ಸುಧೀರ್ ಅದೇ ರೀತಿ ಸಖತ್ ತಮಾಷೆಯಾಗಿ ಉತ್ತರಿಸಿದರು. ''ನೀವು ಕಳ್ಳ ಆದರೆ ಯಾವ ನಟರ ಮನೆಯಿಂದ ಏನು ಕದೀಯುತ್ತೀರ?'' ಎಂದು ಕೇಳಿದ ಶಿವರಾಜ್ ಕುಮಾರ್ ಗೆ ತರುಣ್ ಈ ರೀತಿ ಉತ್ತರಿಸಿದರು. ಮುಂದೆ ಓದಿ...

  ದರ್ಶನ್ 'ಕಾರು'

  ದರ್ಶನ್ 'ಕಾರು'

  ತರುಣ್ ಕಳ್ಳ ಆದರೆ ನಟ ದರ್ಶನ್ ಮನೆಯಿಂದ ಅವರ ಕಾರನ್ನು ಕದೀಯುತ್ತಾರಂತೆ. ದರ್ಶನ್ ಅವರ ಬಳಿ ತುಂಬ ಕಾರುಗಳಿದ್ದು, ಕಾರು ಕದ್ದರು ಅವರಿಗೆ ತುಂಬ ದಿನ ಆದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿ ನಕ್ಕರು ತರುಣ್.

  'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

  ಉಪೇಂದ್ರ ಬರೆದ 'ಸ್ಕ್ರಿಪ್ಟ್'

  ಉಪೇಂದ್ರ ಬರೆದ 'ಸ್ಕ್ರಿಪ್ಟ್'

  ನಟ, ರಿಯಲ್ ಸ್ಟಾರ್ ಉಪೇಂದ್ರ ಬರೆದು ಸಿನಿಮಾ ಮಾಡದೆ ಇಟ್ಟಿರುವ ಸ್ಕ್ರಿಪ್ಟ್ ಅನ್ನು ತರುಣ್ ಉಪ್ಪಿ ಮನೆಯಿಂದ ಕದಿಯುತ್ತಾರಂತೆ.

  ರಕ್ಷಿತಾ 'ಫೋನ್'

  ರಕ್ಷಿತಾ 'ಫೋನ್'

  ರಕ್ಷಿತಾ ಮೇಡಂ ನನಗೆ ಆಗಿನಿಂದ ಕ್ರಶ್ ಎಂದು ಹೇಳಿದ ತರುಣ್ ಅವರ ಮನೆಗೆ ಹೋದರೆ ರಕ್ಷಿತಾ ಅವರ ಫೋನ್ ಕದ್ದು ಕೊಂಡು ಬರುತ್ತಾರಂತೆ. ಯಾಕಾಂದ್ರೆ, ಆ ಫೋನ್ ಹುಡುಕಿಕೊಂಡು ರಕ್ಷಿತಾ ಬರುತ್ತಾರೆ ಅಂತ್ತಾರೆ ತರುಣ್.

  ತಂದೆಯ ಸುಧೀರ್ ನೆನೆದು ಶಿವಣ್ಣನ ಮುಂದೆ ಕಣ್ಣೀರಿಟ್ಟ ತರುಣ್ ಸುಧೀರ್

  ಸುದೀಪ್ 'ಗೆಜೆಟ್ಸ್'

  ಸುದೀಪ್ 'ಗೆಜೆಟ್ಸ್'

  ನಟ ಸುದೀಪ್ ಅವರ ಮನೆಯಲ್ಲಿ ತರಣ್ ನೋಡೆ ಇಲ್ಲದ ಎಷ್ಟೋ ಮಾರ್ಡನ್ ಗೆಜೆಟ್ಸ್ ಗಳು ಇದೆಯಂತೆ. ಸೋ, ಕಿಚ್ಚನ ನಿವಾಸದಿಂದ ತರುಣ್ ಅದನ್ನೇ ಕದಿಯುತ್ತಾರಂತೆ.

  ಪ್ರೇಮ್ ಮನೆಯ 'ರಾಜ್ ಕುಮಾರ್ ಫೋಟೋ'

  ಪ್ರೇಮ್ ಮನೆಯ 'ರಾಜ್ ಕುಮಾರ್ ಫೋಟೋ'

  ನೆನಪಿರಲಿ ಪ್ರೇಮ್ ಮನೆಯಲ್ಲಿ ರಾಜ್ ಕುಮಾರ್ ಅವರ ಒಂದು ಒಳ್ಳೆಯ ಫೋಟೋ ಇದೆಯಂತೆ. ತರುಣ್ ಯಾವಾಗ ಪ್ರೇಮ್ ಮನೆಗೆ ಹೋದರು ಅವರ ಕಣ್ಣು ಅದರ ಮೇಲೆ ಬೀಳುತಂತೆ. ಹೀಗಾಗಿ ತರುಣ್ ಕಳ್ಳ ಆದರೆ ಆ ಫೋಟೋ ಕಳುವಾಗುವುದು ಗ್ಯಾರೆಂಟಿ.

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಬರಲೇಬೇಕು!

  ಶಿವಣ್ಣ ಮನೆಯ 'ಎನರ್ಜಿ ಡಿಕ್ಸ್'

  ಶಿವಣ್ಣ ಮನೆಯ 'ಎನರ್ಜಿ ಡಿಕ್ಸ್'

  ಒಬ್ಬೊಬ್ಬ ನಟರ ಹೆಸರನ್ನು ಹೇಳುತ್ತ ಶಿವಣ್ಣ ''ನಮ್ಮ ಮನೆಯಿಂದ ಏನ್ ಕದಿಯುತ್ತೀರ?'' ಅಂದರು. ಆಗ ತರುಣ್, ''ಅಣ್ಣ ನಿಮ್ಮ ಎನರ್ಜಿ ಸೂಪರ್. ನಿಮಗೆ ಗೀತಕ್ಕ ಏನಾದರೂ ಏನರ್ಜಿ ಡಿಕ್ಸ್ ಮಾಡಿದ್ದರೆ ಅದನ್ನು ಹುಡುಕಿ ತರುತ್ತೇನೆ'' ಎಂದರು.

  ಶರಣ್ ಮನೆಯಿಂದ ಏನು ತರಲ್ಲ

  ಶರಣ್ ಮನೆಯಿಂದ ಏನು ತರಲ್ಲ

  ಈ ಪ್ರಶ್ನೆಯಲ್ಲಿ ಶಿವಣ್ಣ ಪಕ್ಕದಲ್ಲಿಯೇ ಇದ್ದ ಶರಣ್ ನೋಡಿ ''ಹಾಗಾದರೆ ಶರಣ್ ಅವರ ಮನೆಯಿಂದ ಏನು ಕದಿಯುತ್ತೀರಾ?'' ಎಂದು ಕೇಳಿದರು. ಆಗ ತರುಣ್ ಜೋರಾಗಿ ನಗುತ್ತಾ ''ಶರಣ್ ಮನೆಯಿಂದ ಏನು ಕದಿಯುವುದಿಲ್ಲ. ನಾನೇ ಹೋಗಿ ಬಟ್ಟೆ ಇಟ್ಟು ಬರುತ್ತೇನೆ'' ಅಂತ ಹೇಳಿದರು. ತರುಣ್ ಉತ್ತರ ಕೇಳಿ ಶರಣ್ ಕೂಡ ಬಿದ್ದು ಬಿದ್ದು ನಕ್ಕರು.

  English summary
  Director Tarun Sudheer spoke about Darshan in Star Suvarna's new show 'No1 yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X