For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಟ್ರೋಫಿ ಗೆದ್ದ ನಟಿ ಶಿಲ್ಪಾ ಶಿಂಧೆ

  By Pavithra
  |

  ಕಿರುತೆರೆಯ ನಟಿ ಶಿಲ್ಪಾ ಶಿಂಧೆ ಈ ಬಾರಿಯ ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಆಗಿದ್ದಾರೆ. 'ಭಾಬಿ ಜಿ ಘರ್ ಪರ್ ಹೈ' ಧಾರಾವಾಹಿಯಲ್ಲಿ ಅಭಿನಯಿಸಿದ ಖ್ಯಾತಿ ಹೊಂದಿದ್ದ ಶಿಲ್ಪಾ ಹಿಂದಿ ಬಿಗ್ ಬಾಸ್ ನ ವಿಜೇತೆ ಎಂದು ಘೋಷಣೆ ಮಾಡಲಾಗಿದೆ.

  ಬಿಗ್ ಬಾಸ್ ಟ್ರೋಫಿ ಜೊತೆಯಲ್ಲಿ 44 ಲಕ್ಷ ಬಹುಮಾನವನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಶಿಲ್ಪಾ ಶಿಂಧೆ. ಶಿಲ್ಪಾ ಜೊತೆಯಲ್ಲಿ ಹಿನಾ ಖಾನ್, ವಿಕಾಸ್ ಗುಪ್ತಾ, ಪುನೀಶ್ ಶರ್ಮಾ ಫೈನಲ್ ನಲ್ಲಿದ್ದರು.

  ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ 'ಬಿಗ್ ಬಾಸ್' ಫೈನಲಿಸ್ಟ್ ಶಿಲ್ಪಾ: ಯಾರೀಕೆ.?

  ಫಿನಾಲೆಯಲ್ಲಿ ಲೈವ್ ಆಗಿ ಆಡಿಯನ್ಸ್ ಓಟಿಂಗ್ ಅನ್ನು ತೆಗೆದುಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಶಿಲ್ಪಾ ಶಿಂಧೆ ಅವರಿಗೆ ಹೆಚ್ಚಿನ ಮತಗಳು ಬಂದಿತ್ತು. ಸುಮಾರು 15 ವರ್ಷಗಳಿಂದ ಕಿರುತೆರೆಯಲ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಶಿಲ್ಪಾ ಅನೇಕ ಅಭಿಮಾನಿಗಳನ್ನೂ ಹೊಂದಿದ್ದಾರೆ. ಹಿನಾ ಖಾನ್ ಮತ್ತು ಶಿಲ್ಪಾ ಶಿಂಧೆ ಮಧ್ಯೆ ಟಫ್ ಕಾಂಪಿಟೇಷನ್ ಇತ್ತು.

  ಶಿಲ್ಪಾ ಶಿಂಧೆ ಅವರನ್ನ ವಿನ್ನರ್ ಎಂದು ಘೋಷಣೆ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವೀಕ್ಷಕರ ಪ್ರಕಾರ ಹಿನಾ ಖಾನ್ ಬಗ್ ಬಾಸ್ ಟ್ರೋಪಿಯನ್ನ ಪಡೆದುಕೊಳ್ಳುತ್ತಾರೆ ಎನ್ನುವ ಊಹೆ ಮಾಡಿದ್ದರು. ಆದರೆ ಬಿಗ್ ಬಾಸ್ ಪ್ರೇಕ್ಷಕರ ಊಹೆಯನ್ನ ತಲೆಕೆಳಗೆ ಮಾಡಿದರು.

  English summary
  Television actress Shilpa Shinde is the winner of Hindi Bigg Boss 11. Shilpa Shinde has acted in 'Bhabhi Ghi Par Parvadi' serial. and she Having a lot of fans also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X