For Quick Alerts
  ALLOW NOTIFICATIONS  
  For Daily Alerts

  ಮಹಿಳೆಯರು ಬೆಡ್ ರೂಮ್, ಬಾತ್ ರೂಮ್‌ನಲ್ಲಿ ಹಾಗೆ...ಹೊರಗೆ ಹೀಗೆ!

  By ರವೀಂದ್ರ ಕೊಟಕಿ
  |

  ತೆಲುಗಿನ ಅತ್ಯಂತ ಜನಪ್ರಿಯ ಕಾಮಿಡಿ ಶೋ 'ಜಬರ್ದಸ್ತ್' ನೋಡುವವರಿಗೆ ಈಕೆಯನ್ನು ಪರಿಚಯ ಮಾಡಿಸುವ ಅಗತ್ಯವಿಲ್ಲ. ಈಕೆಯ ಶೋ ನಿರೂಪಣೆ, ತೊಡುವ ಬಟ್ಟೆ, ಬಿನ್ನಾಣದ ಹಾವಭಾವಗಳು ಎಲ್ಲವೂ ಆ ಶೋ ನೋಡುವವರ ಎದೆಯಲ್ಲಿ ತಣ್ಣಗೆ ಹಲವು ತರದ ಭಾವನೆಗಳನ್ನು ಪ್ರಚೋದಿಸುತ್ತದೆ. ವಯಸ್ಸು ಈಗಷ್ಟೇ 36 ದಾಟಿದೆ, ಇಬ್ಬರು ಮಕ್ಕಳ ತಾಯಿ ಕೂಡ ಆಗಿದ್ದಾಳೆ. ದಿನ ಕಳೆದಂತೆ ತನ್ನ ಗ್ಲಾಮರ್ ಡೋಸ್ ಹೆಚ್ಚಿಸಿಕೊಳ್ಳುತ್ತಲೇ ಯುವಕರ ಹೃದಯಗಳಿಗೆ ಲಗ್ಗೆ ಹಾಕುತ್ತಿರುವ ಈಕೆಯೇ ಅನುಸೂಯ ಭಾರದ್ವಾಜ್.

  ಎಚ್ಆರ್ ಕೆಲಸದಿಂದ ಟಿವಿ ಶೋ ನಿರೂಪಣೆ ಕಡೆಗೆ

  ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸೇರಿದ ಅನುಸೂಯಾ ಎಂಬಿಎ ಪದವಿಧರೆ. ಈಕೆಯ ಚೆಲುವು, ಬೋಲ್ಡ್ ಆದ ಮಾತುಗಳು ಗಮನಿಸಿದ ಅನೇಕ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಈಕೆಗೆ ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಆಫರ್ ಕೂಡ ನೀಡಿದ್ದರು. ಆದರೆ ಸಿನಿಮಾಗಳಲ್ಲಿ ನಟಿಸಲು ಯಾವುದೇ ಒಲವನ್ನು ಹೊಂದಿಲ್ಲದ ಅನುಸೂಯ ಎಂಎನ್‌ಸಿ ಒಂದರಲ್ಲಿ ಎಚ್ ಆರ್ ಮ್ಯಾನೇಜರ್ ಕೆಲಸಕ್ಕೆ ಸೇರಿಕೊಂಡರು. ಎಲ್ಲಿ ಗ್ಲಾಮರ್ ಇರುತ್ತದೋ ಅಲ್ಲಿ ಸಿನಿಮಾ ಮಂದಿ ಇದ್ದೇ ಇರುತ್ತಾರೆ ಎಂಬಂತೆ ಈಕೆಗೆ ಅವಕಾಶಗಳನ್ನು ಬೇರೊಂದು ರೂಪದಲ್ಲಿ ನೀಡಲು ಮುಂದಾದರು. ಅದೇ ಟಿವಿಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳಿಗೆ ನಿರೂಪಕಿಯ ಪಾತ್ರ!. ಮುಂದೆ ಓದಿ....

  ಜಬರ್ದಸ್ತ್ ಮೈನ್ ಅಟ್ರಾಕ್ಷನ್

  ಜಬರ್ದಸ್ತ್ ಮೈನ್ ಅಟ್ರಾಕ್ಷನ್

  ಅಷ್ಟೇ ಕೆಲವೇ ತಿಂಗಳುಗಳಲ್ಲಿ ಆಕೆ ನಿರೂಪಕಿಯಾಗಿ ಜನಪ್ರಿಯತೆಯನ್ನು ನೋಡನೋಡುತ್ತಲೇ ಪಡೆದು ಬಿಟ್ಟಳು. ಸಾಕ್ಷಿ ಟಿವಿಯಿಂದ ಮೊದಲುಗೊಂಡು ಈಟಿವಿ ತೆಲುಗುವರೆಗೆ ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಸೈ ಎನಿಸಿಕೊಂಡಳು. ಅದರಲ್ಲೂ ವಿಶೇಷವಾಗಿ ಜಬರ್ದಸ್ತ್ ಮೂಲಕ ದೊಡ್ಡ ಹೆಸರುಗಳಿಸಿದಳು. ಈಗಲೂ ಪ್ರತಿ ಗುರುವಾರ ಮತ್ತು ಶುಕ್ರವಾರ ಪ್ರಸಾರವಾಗುವ ಜಬರ್ದಸ್ತ್ ಕಾರ್ಯಕ್ರಮದ ಮೈನ್ ಅಟ್ರಾಕ್ಷನ್ ಅಂದರೆ ಅದರ ನಿರೂಪಕಿಯರಾದ ಅನುಸೂಯ ಮತ್ತು ರಶ್ಮಿ!

  ಮೆಗಾ ಕಾರ್ಯಕ್ರಮಗಳತ್ತ 'ಸಿರಿಕನ್ನಡ' ವಾಹಿನಿಯ ಚಿತ್ತಮೆಗಾ ಕಾರ್ಯಕ್ರಮಗಳತ್ತ 'ಸಿರಿಕನ್ನಡ' ವಾಹಿನಿಯ ಚಿತ್ತ

  ಕೈಬೀಸಿ ಕರೆದ ಸಿನಿಮಾರಂಗ

  ಕೈಬೀಸಿ ಕರೆದ ಸಿನಿಮಾರಂಗ

  ಯಾವ ಸಿನಿಮಾರಂಗವನ್ನು ತನ್ನ ಹದಿಹರೆಯದಲ್ಲಿ ನಯವಾಗಿ ನಿರಾಕರಿಸಿದ್ದಳು ಅದೇ ಸಿನಿಮಾರಂಗ ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೆ ಮತ್ತೆ ಕರೆಯಿತು. ನಾಗಾರ್ಜುನ 'ಸೋಗ್ಗಾಡೆ ಚಿನ್ನಿ ನಾಯನ' ಚಿತ್ರದಲ್ಲಿ ಈಕೆಯೊಂದಿಗೆ ಕುಣಿದಿದ್ದು ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಕೇವಲ ಗ್ಲಾಮರ್ ಮಾತ್ರವಲ್ಲದೆ 'ಕ್ಷಣಂ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆಯುವ ಪಾತ್ರವನ್ನೇ ಮಾಡಿದಳು. ಆದರೆ ಆಕೆಗೆ ಸಿನಿಮಾರಂಗದಲ್ಲಿ ದೊಡ್ಡ ತಿರುವು ಕೊಟ್ಟಿದ್ದು ಮಾತ್ರ ಖ್ಯಾತ ನಿರ್ದೇಶಕ ಸುಕುಮಾರ್ ಅವರ ನಿರ್ದೇಶನದ 'ರಂಗಸ್ಥಲಂ' ಚಿತ್ರದಲ್ಲಿನ ಮಂಗಮ್ಮ ಅತ್ತೆಯ ಡಿ ಗ್ಲಾಮರಸ್ ಪಾತ್ರ. ಈಕೆಯನ್ನು ಈ ಪಾತ್ರ ಅತಿ ಹೆಚ್ಚು ಪಾಪ್ಯುಲರ್ ಮಾಡಿಬಿಟ್ಟಿತು. ಸಹಜ ಹಾಗೂ ನೈಜ ಅಭಿನಯವನ್ನು ಆ ಪಾತ್ರದಲ್ಲಿ ಅನುಸೂಯಾ ನೀಡಿದ್ದಾರೆ.

  ಮಹಿಳೆಯರ ಭಾವನೆಗಳ ಬಗ್ಗೆ

  ಮಹಿಳೆಯರ ಭಾವನೆಗಳ ಬಗ್ಗೆ

  ಪ್ರಸ್ತುತ ತನ್ನ ನಿರೂಪಕಿಯ ಪಾತ್ರದ ಜೊತೆ ಜೊತೆಗೆ ಸಿನಿಮಾಗಳಲ್ಲಿ ಕೂಡ ಸಕ್ರಿಯರಾಗಿದ್ದಾಳೆ ಅನುಸೂಯ. ತಾನು ಧರಿಸುವ ಉಡುಗೆ ಬಗ್ಗೆ, ತನ್ನ ನೈಟ್ ಪಾರ್ಟಿಗಳ ಬಗ್ಗೆ ಯಾವುದೇ ವಿಚಾರವಾಗಿ ಬೇಕಾದರೂ ಮುಕ್ತವಾಗಿ, ಬೋಲ್ಡಾಗಿ ಮಾತನಾಡುವ ಅನಸೂಯಾ ಇತ್ತೀಚೆಗೆ ಮಹಿಳೆಯರ ಅಂತರಂಗದ ಭಾವನೆಗಳಿಗೆ ಸಂಬಂಧಿಸಿದಂತೆ ಒಂದು ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ.

  ಹೊಸ ರಿಯಾಲಿಟಿ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿಹೊಸ ರಿಯಾಲಿಟಿ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿ

  ಮಹಿಳೆಯರು ತುಂಬಾ ಸೆನ್ಸಿಟಿವ್

  ಮಹಿಳೆಯರು ತುಂಬಾ ಸೆನ್ಸಿಟಿವ್

  'ಮಹಿಳೆಯರು ತುಂಬಾ ಸೆನ್ಸಿಟಿವ್. ತಮ್ಮ ನೋವನ್ನ ಏಕಾಂಗಿಯಾಗಿ ಬೆಡ್ ರೂಮ್, ಬಾತ್ ರೂಂನಲ್ಲಿ ಅಥವಾ ಕಾರಿನಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ಹೊರಗೆ ನಾಲ್ಕು ಜನರ ಮಧ್ಯೆ ನಗು ಮುಖವನ್ನು ಹೊತ್ತು ಮಾತನಾಡುತ್ತಾರೆ. ತಮ್ಮ ನೋವು ಮತ್ತು ಭಾವನೆಗಳನ್ನು ಅವರೆಂದೂ ನಾಲ್ಕು ಜನರ ಮುಂದೆ ಅಭಿವ್ಯಕ್ತಗೊಳಿಸುವುದಿಲ್ಲ' ಮಹಿಳೆಯರ ಭಾವನೆಗಳ ಬಗ್ಗೆ ಹೀಗೆ ಬರೆಯುವಾಗ ಎಲ್ಲೋ ಒಂದೆಡೆ ತನ್ನ ಬಗ್ಗೆ ವಿನಾಕಾರಣ ಕಾಮೆಂಟ್ ಮಾಡುವ ವ್ಯಕ್ತಿಗಳಿಗೂ ತನ್ನ ಸಂದೇಶ ರವಾನಿಸಿದಂತಿದೆ.

  English summary
  Telugu Anchor Anasuya Bharadwaj Successful Journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X