For Quick Alerts
  ALLOW NOTIFICATIONS  
  For Daily Alerts

  ಮತ್ತೆಂದು ನನ್ನ ಜೀವನದಲ್ಲಿ ಬರಬೇಡ: ಬಿಗ್ ಬಾಸ್ ಸ್ಪರ್ಧಿ, ಮಂಗಳಮುಖಿ ಪ್ರಿಯಾಂಕಾರ ದುರಂತ ಪ್ರೇಮಕಥೆ

  By ರವೀಂದ್ರ ಕೊಟಕಿ
  |

  ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಷಾದದ ಎಪಿಸೋಡ್ ಅಂತ ಇದ್ದೆ ಇರುತ್ತದೆ. ಆದರೆ ಅದು ಅವರಲ್ಲಿ ಅಡಗಿರುವವರೆಗೂ ಅದು ಅವರ ಖಾಸಗಿ ವಿಷಯ, ಒಂದು ಸಲ ಅವರ ಖಾಸಗಿ ವಿಷಯ ಜಗತ್ತಿನ ಮುಂದೆ ಅನಾವರಣಗೊಂಡ ಮೇಲೆ 'ಅಯ್ಯೋ ಪಾಪ! ವಿಷಯ ಹೀಗಾ' ಅಂತೇಳಿ ಮೇಲ್ನೋಟಕ್ಕೆ ಕಾಣುವುದೇ ಸತ್ಯವಲ್ಲ, ಒಳಗಿರುವ ಯಾತನೆಗಳ ಮಧ್ಯೆ ಕೂಡ ಅವರು ಸಂತೋಷವಾಗಿ ಬದುಕುತ್ತಿದ್ದಾರೆ ಅಂತ ಆಗ ಅನಿಸುತ್ತದೆ.

  ಅವರ ಬಗ್ಗೆ ತಿಳಿದಿರುವ ರೀತಿಗೂ, ಅವರ ನಿಜವಾದ ನೋವಿಗೂ ಮಧ್ಯೆ ಅಗಾಧವಾದ ವ್ಯತ್ಯಾಸವಿರುತ್ತದೆ. ಅದರಲ್ಲೂ ಸೆಲೆಬ್ರೆಟಿ ಸ್ಟೇಟಸ್ ಬಂದ ಮೇಲೆ ಅವರ ಬಗ್ಗೆ ತಿಳಿದಾಗ ಅದು ಮತ್ತಷ್ಟು ರೋಚಕ ಕತೆ ಎನಿಸುತ್ತದೆ. ಈಗ ಅಂತಹದೇ ವಿಷಾದ ತುಂಬಿದ ಕಥೆಯೊಂದು ತೆಲುಗು ಬಿಗ್ ಬಾಸ್ ಮನೆಯಿಂದ ಹೊರ ಬಂದಿದೆ. ತನ್ನ ನೋವಿನ ಕಥೆಯನ್ನುಹಾಕಿರುವುದು ಬೇರೆ ಯಾರು ಅಲ್ಲ 'ನಾನು ಅವನಲ್ಲ ಅವಳು' ಪ್ರಿಯಾಂಕಾ ಸಿಂಗ್. ಮುಂದೆ ಓದಿ..

  ಮೊದಲ ಪ್ರೀತಿ ತೆರೆದಿಟ್ಟ ಪಿಂಕಿ

  ಮೊದಲ ಪ್ರೀತಿ ತೆರೆದಿಟ್ಟ ಪಿಂಕಿ

  ಮೊನ್ನೆ ಗುರುವಾರ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳು ತಮ್ಮ, ತಮ್ಮ ಮೊದಲ ಪ್ರೀತಿಯನ್ನು, ಅದರ ನೆನಪುಗಳನ್ನು ಇತರ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುವಂತೆ ಬಿಗ್ ಬಾಸ್ ಆಜ್ಞೆ ಮಾಡುತ್ತಾರೆ. ಆಗ ತನ್ನ ಮೊದಲ ಪ್ರೀತಿಯ ಬಗ್ಗೆ ಮಾತನಾಡುತ್ತಾ ಟ್ರಾನ್ಸ್ಜೆಂಡರ್ ಆಗಿರುವ ಪ್ರಿಯಾ ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾಳೆ. ಅವಳ ಮೊದಲ ಪ್ರೇಮದ, ಅದರ ದುರಂತ ಕ್ಲೈಮ್ಯಾಕ್ಸ್ ಬಗ್ಗೆ ಅವಳು ಹೇಳಿದ ಕಥೆಯನ್ನು ಅವಳದೇ ಮಾತುಗಳಲ್ಲಿ ಕೇಳಿ.

  ಅವನ ಹೆಸರು ರವಿ....

  ಅವನ ಹೆಸರು ರವಿ....

  ಅವನ ಹೆಸರು ರವಿ, ಹಾಗೆ ಕರೆಯುವುದಕ್ಕೆ ನನಗೆ ಇಷ್ಟವಿಲ್ಲದೆ

  ಪ್ರೀತಿಯಿಂದ ಮುದ್ದಾಗಿ ಹುಡುಗ... ಹುಡುಗ...ಅಂತ ಕರೆಯುತ್ತಿರುತ್ತೇನೆ. ಮೊದಲ ಸಲ ಸಮಾರಂಭ ವೊಂದರಲ್ಲಿ ನಾನು ಅವನನ್ನು ನೋಡಿದೆ. ನೋಡಲು ಮುದ್ದು ಮುದ್ದಾಗಿ ಕಂಡ. ಮೊದಲ ನೋಟದಲ್ಲೇ ನನ್ನನ್ನು ಆಕರ್ಷಿಸಿದ. ಅಲ್ಲೇ ಅವನ ಜೊತೆ ಪರಿಚಯವೂ ಏರ್ಪಟ್ಟಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಇಬ್ಬರ ಮಧ್ಯೆ ಏರ್ಪಟ್ಟ ಸ್ನೇಹ ಒಬ್ಬರನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ನಾನು ಧೈರ್ಯವಾಗಿ ಯಾರ ಜೊತೆಯಲ್ಲಿ ಬೆರೆಯುತ್ತಿರಲಿಲ್ಲ, ಧೈರ್ಯವಾಗಿ ಮಾತನಾಡುತ್ತಿರಲಿಲ್ಲ. ಅವನು ನನ್ನಲ್ಲಿದ್ದ ಭಯವನ್ನು ತೆಗೆದುಹಾಕಿದ. ಎಲ್ಲರ ಜೊತೆ ನಾನು ಹೇಗೆ ಬೆರೆಯಬೇಕು, ಹೇಗೆ ಬದುಕಬೇಕು ಅಂತ ತಿಳಿಹೇಳಿದ ಜೊತೆಗೆ ಧೈರ್ಯವನ್ನು ತುಂಬಿದ. ಅವನು ಕೊಟ್ಟ ಧೈರ್ಯದಿಂದಲೇ ನಾನು ಬದಲಾದೆ.

  ಅವನೆಂದರೆ ನನಗೆ ಇಷ್ಟ ಆದರೆ...

  ಅವನೆಂದರೆ ನನಗೆ ಇಷ್ಟ ಆದರೆ...

  ಹುಡುಗ (ರವಿ)ಅಂದರೆ ನನಗೆ ಇಷ್ಟ. ಹಾಗಂತ ನಾನು ಅವನಿಗೆ ಅದನ್ನು ಧೈರ್ಯವಾಗಿ ಹೇಳುವ ಸ್ಥಿತಿಯಲ್ಲಿರಲಿಲ್ಲ. ಹೇಳದೆ ಇರುವುದ್ಧಕ್ಕೂ ಆಗುತ್ತಿರಲಿಲ್ಲ. ಏಕೆಂದರೆ 'ನಾನು ಅವನಲ್ಲ... ಅವಳು' ಎಂಬುವುದು ನನಗೆ ಗೊತ್ತಿತ್ತು. ಆದರೆ ಇದನ್ನು ತಿಳಿದ ಅವನು ನನ್ನನ್ನು ಸ್ವೀಕರಿಸುತ್ತಾನಾ? ಎಂಬ ಪ್ರಶ್ನೆಯೂ ಸುಳಿದಾಡಿತು. ಇದರ ನಡುವೆ ತಂಗಿಯ ಮದುವೆಯಾಯಿತು. ಜೊತೆಗೆ ಈಗ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ ಎಂಬ ಸ್ಥಿತಿಗೆ ಬಂದು ತಲುಪಿದೆ. ಅದೇ ಧೈರ್ಯದ ಮೇಲೆ ನಾನು ಲಿಂಗಪರಿವರ್ತನೆ ಮಾಡಿಕೊಂಡು ಹೆಣ್ಣಾದೆ. ಆದರೆ ನಾನು ಜೆಂಡರ್ ಬದಲಾಯಿಸಿಕೊಂಡ ಮೇಲೆ ಅವನ ಕಣ್ಣಿಗೆ ಬೀಳದಂತೆ ಕೆಲಕಾಲ ದೂರವಿದ್ದೆ.

  ನೀನಂದ್ರೆ ನನಗಿಷ್ಟ...

  ನೀನಂದ್ರೆ ನನಗಿಷ್ಟ...

  ಆನಂತರ ಧೈರ್ಯವಾಗಿ ಒಂದು ದಿನ ಅವನನ್ನು ಭೇಟಿಯಾದೆ. ಮನಸ್ಸಿನಲ್ಲಿರುವ ವಿಷಯ ಹೇಳಿಬಿಟ್ಟೆ. ನೀನಂದ್ರೆ ನನಗಿಷ್ಟ...'ನೀನು ನೋಡಲು ಸುಂದರವಾಗಿದ್ದೀಯ, ನನಗೆ ಯಾವುದೇ ಪ್ರಾಬ್ಲಮ್ ಇಲ್ಲ. ನಾವು ರಿಲೇಷನ್ಶಿಪ್ ಲ್ಲಿ ಇರೋಣ' ಅಂತ ಅವನು ಹೇಳಿದ. ಹೊಸದೊಂದು ಜಗತ್ತು ನನಗೆ ಅವನಿಂದ ದೊರೆಯಿತು. ಒಂದಲ್ಲಾ..ಎರಡಲ್ಲಾ.. ಬರೋಬ್ಬರಿ ಆರು ವರ್ಷ ನಮ್ಮಿಬ್ಬರ ಒಡನಾಟ, ರಿಲೇಷನ್ಶಿಪ್ ಮುಂದುವರೆದಿತ್ತು.

  ಆದರೆ ಅದೊಂದು ದಿನ...

  ಆದರೆ ಅದೊಂದು ದಿನ...

  ನೀನಲ್ಲದೆ ನನಗೆ ಬೇರೆ ಪ್ರಪಂಚ ವಿಲ್ಲ.ನಾವಿಬ್ಬರು ಮದುವೆಯಾಗೋಣವೇ? ಅಂತ ಅವನನ್ನು ಕೇಳಿದೆ. ಅದಕ್ಕೆ ಅವನು ಕೂಡ ಸಮ್ಮತಿ ಸೂಚಿಸಿದ.ನನಗೆ ನನ್ನದೇ ಆದ ಒಂದು ಕುಟುಂಬ ಏರ್ಪಟ್ಟಿತು ಅಂತ ಸಂಭ್ರಮಿಸಿದೆ. ಆದರೆ ಅದೊಂದು ದಿನ ಅವನು ನನ್ನ ಬಳಿ 'ನನಗೆ ಮನೆಯಲ್ಲಿ ಸಂಬಂಧಗಳನ್ನು ನೋಡುತ್ತಿದ್ದಾರೆ. ನಾನು ಮನೆಯವರು ತೋರಿಸುವ ಹುಡುಗಿಯನ್ನು ಮದುವೆ ಆಗಬೇಕು' ಅಂದ. ಆಗಲೂ ನಾನು 'ನಿನಗೆ ಮದುವೆಯಾದರೆ, ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವಳು ನಾನು. ಆದರೆ ನೀನು ನನ್ನನ್ನು ಮದುವೆಯಾಗ್ತೀನಿ ಅಂತ ಹೇಳಿದ್ದೀಯ ಅಲ್ವಾ ಹುಡುಗ' ಅಂತ ಕೇಳಿದೆ.

  ಅವನ ಮಾತು ಹೃದಯ ಒಡೆಯಿತು

  ಅವನ ಮಾತು ಹೃದಯ ಒಡೆಯಿತು

  ಅದಕ್ಕೆ ಅವನು ನೀಡಿದ ಉತ್ತರ ಮಾತ್ರ ಅಕ್ಷರಶಃ ನನ್ನ ಹೃದಯವನ್ನು ಒಡೆದು ನುಚ್ಚುನೂರು ಮಾಡಿತು. 'ನೀನೇನಾದರೂ ಹುಡುಗಿನಾ? ನಿನಗೆ ಮಕ್ಕಳು ಹುಟ್ಟುತ್ತಾರಾ? ಇಂತಹ ನಿನಗೆ ಮದುವೆ ಯಾಕೆ?. ''ನಿಜ ನಾನು ತಾಯಿಯಾಗಲು ಸಾಧ್ಯವಿಲ್ಲ. ಆದರೆ ನಿನಗೊಂದು ವಿಷಯ ಗೊತ್ತಾ. ಈಗ ನಾನು ಒಂದು ಹೆಣ್ಣಾಗಿ ಪರಿವರ್ತನೆಯಾಗಿದ್ದೀನಿ. ನಾನು ಕೂಡ ಮಗುವಿಗೆ ತಾಯಿಯಾಗಬೇಕು ಅಂತ ಬಯಸಿ ಈಗಾಗಲೇ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೀನಿ. ಅಂತದರಲ್ಲಿ ನೀನು ಹೀಗೆ ನನಗೆ ಕೈ ಕೊಟ್ಟರೆ ಹೇಗೆ?' ಅಂತ ಕೇಳಿದೆ. ನನ್ನ ಮಾತುಗಳನ್ನು ಕೇಳಿದ ಅವನಿಗೆ ಕಸಿವಿಸಿಯಾಗಿ ಮನೆಯಿಂದ ಹೊರಡಲು ಮುಂದಾದ.

  ಕಾಲು ಹಿಡಿದು ಬೇಡಿಕೊಂಡೆ

  ಕಾಲು ಹಿಡಿದು ಬೇಡಿಕೊಂಡೆ

  ಅವನ ಕಾಲು ಹಿಡಿದು 'ನನ್ನ ಬಿಟ್ಟು ಹೋಗಬೇಡ' ಅಂತ ಬೇಡಿಕೊಂಡೆ. ಮನೆಯಿಂದ ಹೊರಗೆ ಬಂದ ಅವನು ಬೈಕು ತೆಗೆದುಕೊಂಡು ಹೊರಡಲು ಮುಂದಾದ ಆಗಲೂ ಅವನ ಕಾಲು ಹಿಡಿದು ನನ್ನ ಬಿಟ್ಟು ಹೋಗಬೇಡ ಅಂತ ರೋಧಿಸಿದೆ. ಆದರೂ ಅವನು ಹೊರಟುಬಿಟ್ಟ ನನ್ನ ಹುಡುಗ

  ಹುಡುಗನಿಗೆ ಮೆಸೇಜ್ ಮಾಡಿ ಮನೆಗೆ ಕರೆದ ಪಿಂಕಿ

  ಹುಡುಗನಿಗೆ ಮೆಸೇಜ್ ಮಾಡಿ ಮನೆಗೆ ಕರೆದ ಪಿಂಕಿ

  ಹುಡುಗ ನನ್ನ ಮನೆ ತೊರೆದು ಹೋದಮೇಲೆ ನನ್ನ ಸಂಕಟ ಹೇಳಲಾಗದಾಯಿತು. ಎಷ್ಟಾದರೂ ಅವನು, ನಾನು ಪ್ರೀತಿಸಿದ ಹುಡುಗ. ಮನಸ್ಸು ತಡೆಯಲಾರದೆ ಒಂದು ದಿನ 'ನಿನ್ನೊಂದಿಗೆ ಮಾತನಾಡಬೇಕಿದೆ ಒಂದು ಸಲ ಮನೆಗೆ ಬಾ' ಅಂತ ಮೆಸೇಜ್ ಮಾಡಿದೆ. ಅವನು ಒಂದು ದಿನ ಮನೆಗೆ ಬಂದ.

  ಹುಡುಗನ ಬಳಿ ನೋವು ಹೇಳಿಕೊಂಡ ಪಿಂಕಿ

  ಹುಡುಗನ ಬಳಿ ನೋವು ಹೇಳಿಕೊಂಡ ಪಿಂಕಿ

  'ನನಗೆ 10 ದಿನದಿಂದ ನಿದ್ದೆನೇ ಬರ್ತಾ ಇಲ್ಲ. ನೀನಿಲ್ಲದೆ ನನ್ನ ಕೈಯಲ್ಲಿ ಬದುಕಲು ಆಗುವುದಿಲ್ಲ. ಶೂಟಿಂಗ್ ಗಳಿಗೆ ಹೋಗ್ತಾಯಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡ್ಕೊಂಡ್ ದ್ದೀನಿ' ಅಂತೇಳಿ ಅವನ ಮುಂದೆ ನನ್ನ ನೋವೆಲ್ಲಾ ಹೇಳಿಕೊಂಡೆ.

  ಅದಕ್ಕೆ ಅವನು ಕೋಪದಿಂದ 'ನಿನಗೆ ಮೊದಲೇ ಹೇಳಿದ್ದೀನಿ ತಾನೆ, ನಾನು ಬೇರೆ ಹುಡುಗಿಯೊಂದಿಗೆ ಮದುವೆ ಹಾಕ್ತೀನಿ ಅಂತ. ಮತ್ತೆ ಯಾಕೆ ಹೀಗೆ ಮಾತಾಡ್ತೀಯ. ಅಸಲಿಗೆ ನೀನು ಯಾರು ಗೊತ್ತಾ?' ಒಂದಲ್ಲಾ...ಎರಡಲ್ಲಾ ಅನೇಕ ಬಾರಿ ಹೀಗೆ ಕೇಳಿದ.

  ಅಸಲಿಗೆ ನೀನು ಯಾರು ಗೊತ್ತಾ....

  ಅಸಲಿಗೆ ನೀನು ಯಾರು ಗೊತ್ತಾ....

  ಸಣ್ಣ ವಯಸ್ಸಿನಿಂದಲ್ಲೇ ಇದೇ ಮಾತನ್ನು ಅನೇಕರು ಪದೇಪದೇ ನನಗೆ ಚುಚ್ಚಿ ಚುಚ್ಚಿ ಕೇಳಿ ಅವಮಾನಿಸಿ ನನ್ನ ಕೈಯಲ್ಲಿ ಕಣ್ಣೀರು ಹಾಕಿಸಿದ್ದಾರೆ. ಅದನ್ನೇ ನನ್ನ ಹುಡುಗ ಚುಚ್ಚಿ ಚುಚ್ಚಿ ಕೇಳಿದ. ಅಸಲಿಗೆ ಬೇರೆ ಯಾರು ಆ ಮಾತನ್ನು ಕೇಳಿದಾಗಲೂ ನನಗೆ ಅಷ್ಟೊಂದು ನೋವು ಆಗಿರಲಿಲ್ಲ. ನನ್ನ ಹುಡುಗ ಕೇಳಿದಾಗ ಹೃದಯ ಒಡೆದು ಹೋಯಿತು. ಅಂತಹ ನೋವು ಜೀವನದಲ್ಲಿ ನಾನೆಂದೂ ಕಂಡಿರಲಿಲ್ಲ. ಆಕಾಶವೇ ಕಳಚಿ ಮೈ ಮೇಲೆ ಬಿದ್ದಂತಾಯಿತು.

  ಐ ಲವ್ ಯು...ಐ ಮಿಸ್ ಯು

  ಐ ಲವ್ ಯು...ಐ ಮಿಸ್ ಯು

  ನೀನು ನನ್ನ ಇಷ್ಟ ಪಟ್ಟರೂ..ಪಡದೇ ಹೋದರೂ...ನಾನು ನಿನ್ನನ್ನು ಪ್ರೀತಿಸ್ತಾದ್ದೀನಿ. ಸೋ ನೀನು ಎಲ್ಲಿದ್ದರೂ ಸಂತೋಷವಾಗಿರಬೇಕು. ನಾನು ನಿನ್ನನ್ನು ಪೂರ್ಣ ಹೃದಯದಿಂದ ಇಷ್ಟಪಡುತ್ತೇನೆ. ನಿನಗೆ ಯಾವತ್ತೂ ಯಾವುದೇ ಕಷ್ಟ ಬಂದರೂ ಈ ಪಿಂಕಿ ನಿನ್ನೊಂದಿಗೆ ಇರುತ್ತಾಳೆ. I love you forever. ನಾನು ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ, ಐ ಲವ್ ಯು, ಐ ಮಿಸ್ ಯು ಆದರೆ ಮತ್ತೆಂದು ನನ್ನ ಜೀವನದಲ್ಲಿ ಬರಬೇಡ 'ಅಂತ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ ಪಿಂಕಿ.

  English summary
  Telugu Bigg Boss contestant transgender Priyanka Singh reveals her first love and breakup.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X