Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗು ಬಿಗ್‌ಬಾಸ್ ಗೆದ್ದ ಅಭಿಜೀತ್‌ಗೆ ಬಹುಮಾನಕ್ಕಿಂತ ಸಂಭಾವನೆಯೇ ಹೆಚ್ಚು!
ಕೊರೊನಾ ಭೀತಿಯ ನಡುವೆಯೂ ತೆಲುಗಿನಲ್ಲಿ ಬಿಗ್ ಬಾಸ್ ಆರಂಭಿಸಿದ್ದರು. ನಾಲ್ಕನೇ ಆವೃತ್ತಿಯ ಬಿಗ್ ಬಾಸ್ ಯಶಸ್ವಿಯಾಗಿ ಮುಗಿದಿದೆ. ಬಿಗ್ ಬಾಸ್ ಸೀಸನ್ ನಾಲ್ಕರ್ ವಿನ್ನರ್ ಆಗಿ ಅಭಿಜೀತ್ ದುಡ್ಡಲಾ ಹೊರಹೊಮ್ಮಿದ್ದಾರೆ.
ಡಿಸೆಂಬರ್ 20, ಕಳೆದ ರಾತ್ರಿ ತೆಲುಗು ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ನಡೆದಿದ್ದು, ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿರು ಕೈಯಿಂದ ಬಿಗ್ ಬಾಸ್ ಟ್ರೋಫಿ ಪಡೆದ ಅಭಿಜೀತ್ ಭರ್ಜರಿ ನಗದು ಬಹುಮಾನ ಸಹ ಪಡೆದುಕೊಂಡರು. ಫಿನಾಲೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಅಖಿಲ್ ಸಾರ್ಥಕ್ ಸ್ಥಾನ ಪಡೆದರು. ಅಂದ್ಹಾಗೆ, ಬಿಗ್ ಬಾಸ್ ವಿನ್ ಆದ ಅಭಿಜೀತ್‌ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಮುಂದೆ ಓದಿ...
Bigg
Boss
Telugu
4;
ಈ
ಬಾರಿ
'ಬಿಗ್
ಬಾಸ್'
ಗೆದ್ದು
ಬೀಗಿದ
ನಟ
ಅಭಿಜಿತ್

ಬಹುಮಾನದಿಂದ ಸಿಕ್ಕ ಹಣ 25 ಲಕ್ಷ
ತೆಲುಗು ಬಿಗ್ ಬಾಸ್ ನಾಲ್ಕನೇ ಆವೃತ್ತಿಯ ಫಿನಾಲೆಯಲ್ಲಿ ಗೆದ್ದ ಸ್ಪರ್ಧಿಗೆ 50 ಲಕ್ಷ ನಗದು ಬಹುಮಾನ ನಿಗದಿಯಾಗಿತ್ತು. ಆದ್ರೆ, ಅಂತಿಮವಾಗಿ ಫೈನಲ್ ಗೆದ್ದ ಅಭಿಜೀತ್‌ಗೆ ಸಿಕ್ಕ ಹಣ ಬರಿ 25 ಲಕ್ಷ. ಉಳಿದ 25 ಲಕ್ಷ ಎರಡನೇ ರನ್ನರ್ ಅಪ್ ಸ್ಪರ್ಧಿಗೆ ನೀಡಲಾಯಿತು. (ಫಿನಾಲೆಯಿಂದ ಹಿಂದೆ ಸರಿದ ಕಾರಣ ಒಪ್ಪದಂತೆ ನೀಡಿದ ಹಣ)

ಒಂದು ವಾರಕ್ಕೆ ಎಷ್ಟು ಸಂಭಾವನೆ?
'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಭಿಜೀತ್ ಬಿಗ್ ಬಾಸ್ ಮನೆಯಲ್ಲಿ ಆಟವಾಡಲು ಒಂದು ವಾರಕ್ಕೆ ನಾಲ್ಕು ಲಕ್ಷ ಸಂಭಾವನೆ ನಿಗದಿ ಮಾಡಲಾಗಿತ್ತು ಎಂದು ವರದಿಯಾಗಿದೆ. ಬಿಗ್ ಬಾಸ್ ಅಂತಿಮ ಘಟ್ಟದವರೆಗೂ ಅಭಿಜೀತ್ ಇದ್ದ ಕಾರಣ ಭಾರಿ ಸಂಭಾವನೆ ಪಡೆದಿದ್ದಾರೆ.

ಒಟ್ಟು ಸಂಭಾವನೆ ಎಷ್ಟು?
ಒಂದು ವಾರಕ್ಕೆ ನಾಲ್ಕು ಲಕ್ಷ ಸಂಭಾವನೆ ಪಡೆದ ಅಭಿಜೀತ್‌ಗೆ ಬಿಗ್ ಬಾಸ್ ಕಾರ್ಯಕ್ರಮದಿಂದ ಒಟ್ಟಾರೆ ಬಂದ ಹಣ 60 ಲಕ್ಷ ಎಂದು ಹೇಳಲಾಗಿದೆ. ಹಾಗ್ನೋಡಿದ್ರೆ, ಬಹುಮಾನದಿಂದ ಬಂದ ಹಣ 25 ಲಕ್ಷ. ಸಂಭಾವನೆ ರೂಪದಲ್ಲಿ ಸಿಕ್ಕಿದ ಹಣ 60 ಲಕ್ಷ. ಒಟ್ಟು 85 ಲಕ್ಷ ಅಭಿಜೀತ್‌ಗೆ ಕೈ ಸೇರಿದೆ.
Recommended Video

ಎರಡನೇ ಇನ್ನಿಂಗ್ಸ್ ಆರಂಭಿಸುವ ಆಸೆ
ಬಿಗ್ ಬಾಸ್ ಗೆದ್ದ ಬಳಿಕ ಸಂತಸ ಹಂಚಿಕೊಂಡ ನಟ ಅಭಿಜೀತ್, ನನ್ನ ಮೊದಲ ಸಿನಿಮಾ 'ಲೈಫ್ ಈಸ್ ಬ್ಯೂಟಿಫುಲ್' ತೆರೆಕಂಡು ಏಂಟು ವರ್ಷ ಕಳೆದಿದೆ. ಕ್ರಿಕೆಟ್ ಆಟದಲ್ಲಿ ಎರಡು ಇನ್ನಿಂಗ್ಸ್ ಇರುತ್ತದೆ. ನನ್ನ ಕೆರಿಯರ್‌ನಲ್ಲೂ ಎರಡು ಇನ್ನಿಂಗ್ಸ್ ಇದೆ ಎಂದು ನಂಬಿದ್ದೇನೆ. ಈಗ ಎರಡನೇ ಇನ್ನಿಂಗ್ಸ್ ಶುರು ಮಾಡುವ ನಂಬಿಕೆ ಇದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.