For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-6': ಈ ಬಾರಿ ದೊಡ್ಮನೆ ಸೇರುವವರ ಸಂಭಾವ್ಯ ಪಟ್ಟಿ ಇಲ್ಲಿದೆ

  By Harshitha
  |
  Big Boss Kannada Season 6 : ಬಿಗ್ ಮನೆಯಲ್ಲಿ ಈ ಬಾರಿ ಇವರಿರಲಿದ್ದಾರಂತೆ..!! | Filmibeat Kannada

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ನಿನ್ನೆ ಮೊನ್ನೆ ಮುಗಿದ ಹಾಗಿದೆ. ಕಣ್ಮುಚ್ಚಿ ಕಣ್ತೆರೆಯುವುದರ ಒಳಗೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೀ ಪ್ರೊಡಕ್ಷನ್ ವರ್ಕ್ ಗೆ ಚಾಲನೆ ಸಿಕ್ಕಿದೆ.

  ಈಗಾಗಲೇ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೋಮೋ ಪ್ರಸಾರ ಆಗುತ್ತಿದೆ. ಅಷ್ಟೇ ಅಲ್ಲ, 'ಬಿಗ್ ಬಾಸ್' ಮನೆ ಸೇರಬೇಕು ಎಂಬ ಆಸೆ ಹೊತ್ತ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆಗೂ ಕಿಕ್ ಸ್ಟಾರ್ಟ್ ಕೊಡಲಾಗಿದೆ.

  'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಿ, ಕನ್ನಡಿಗರ ಮನ ಗೆಲ್ಲಬೇಕು ಎಂಬ ಇಚ್ಛೆ ಇರುವವರು ತಮ್ಮ ವಿವರವನ್ನ ವೂಟ್ ನಲ್ಲಿ ಸಲ್ಲಿಸಬಹುದು. ಅರ್ಜಿ ಹಾಗೂ ವಿಡಿಯೋ ಇಂಟ್ರೆಸ್ಟಿಂಗ್ ಆಗಿದ್ರೆ, 'ಬಿಗ್ ಬಾಸ್' ಬಾಗಿಲು ಶ್ರೀಸಾಮಾನ್ಯರಿಗೆ ತೆಗೆಯಲಿದೆ.

  ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಶ್ರೀಸಾಮಾನ್ಯರಿಗೆ ಸ್ಪರ್ಧಿಸುವ ಅವಕಾಶ ಇದೆ ಎಂಬುದಿನ್ನೂ ಕನ್ಫರ್ಮ್ ಆಗಿಲ್ಲ. ಆದ್ರೆ, ಕಾಮನ್ ಮ್ಯಾನ್ ಜೊತೆಗೆ ಸೆಲೆಬ್ರಿಟಿಗಳೂ ಕೂಡ ಕಣಕ್ಕೆ ಇಳಿಯುವುದು ಪಕ್ಕಾ. ಹಾಗೆ, ಈ ಬಾರಿ 'ಬಿಗ್ ಬಾಸ್' ಕದ ತಟ್ಟಲಿರುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ, ನೋಡಿ....

  ಪ್ರೇಮ ಕುಮಾರಿ

  ಪ್ರೇಮ ಕುಮಾರಿ

  ಪ್ರೇಮ ಕುಮಾರಿ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.. ಪ್ರೇಮ ಕುಮಾರಿ ಎಂದ ಕೂಡಲೆ ಎಲ್ಲರಿಗೂ ಥಟ್ ಅಂತ ನೆನಪಾಗುವ ಹೆಸರು ಬಿಜೆಪಿ ಪಕ್ಷದ ನಾಯಕ ಎಸ್.ಎ.ರಾಮದಾಸ್. ಪ್ರೇಮ ಕುಮಾರ್-ರಾಮದಾಸ್ ಪ್ರೇಮ ಪ್ರಕರಣ, ರಂಪಾಟ, ರಾದ್ಧಾಂತ ಕರ್ನಾಟಕದ ಮೂಲೆ ಮೂಲೆಯಲ್ಲೂ ಸದ್ದು ಮಾಡಿದೆ. ವಿವಾದದಿಂದಲೇ ಗುರುತಿಸಿಕೊಂಡಿರುವ ಪ್ರೇಮ ಕುಮಾರಿ ಹೆಸರು 'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಪಟ್ಟಿಯಲ್ಲಿ ಇದ್ಯಂತೆ.

  ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!

  ಕುರಿ ಪ್ರತಾಪ್

  ಕುರಿ ಪ್ರತಾಪ್

  'ಬಿಗ್ ಬಾಸ್' ಮನೆ ಅಂದ್ಮೇಲೆ, ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೇಬೇಕು ಅಲ್ವೇ.? ಹೀಗಾಗಿ, ಈ ಬಾರಿ ಕುರಿ ಪ್ರತಾಪ್ ರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸುವ ಯೋಚನೆ ಕಲರ್ಸ್ ಕನ್ನಡ ವಾಹಿನಿಯವರಿಗೆ ಇದ್ಯಂತೆ. ಹೇಳಿ ಕೇಳಿ, 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಎಲ್ಲರನ್ನ ನಕ್ಕು-ನಲಿಸುವುದರಲ್ಲಿ ಕುರಿ ಪ್ರತಾಪ್ ಎತ್ತಿದ ಕೈ. 'ಬಿಗ್ ಬಾಸ್' ಶೋನಲ್ಲೂ ಕುರಿ ಪ್ರತಾಪ್ ಹಾಸ್ಯದ ಹೊನಲನ್ನು ಹರಿಸುತ್ತಾರಾ.? ನೋಡಬೇಕು.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?

  ಶುಭ ಪೂಂಜಾ

  ಶುಭ ಪೂಂಜಾ

  ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಶುಭಾ ಪೂಂಜಾ ಹೆಸರು 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸಂಭಾವ್ಯ ಪಟ್ಟಿಯಲ್ಲಿ ಇದ್ಯಂತೆ. 'ಬಿಗ್ ಬಾಸ್' ಮನೆಯೊಳಗೆ ಹೋಗಲು ಶುಭಾ ಪೂಂಜಾ ಒಪ್ಪಿಕೊಳ್ತಾರಾ.?

  ತುಳಸಿ ಪ್ರಸಾದ್

  ತುಳಸಿ ಪ್ರಸಾದ್

  ಶ್ರುತಿ ಇಲ್ಲದೆ ಕನ್ನಡ ಹಾಡುಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಗಂದ್ರೆ ಹಾಗೆ ಹಾಡಿ, ಫೇಮಸ್ ಆಗಿ ಕಡೆಗೆ ಇನ್ಮುಂದೆ ಹಾಡುಗಳನ್ನ ಕೆಟ್ಟದಾಗಿ ಹಾಡಲ್ಲ ಎಂದು ಕ್ಷಮೆ ಕೇಳಿದ್ದ ತುಳಸಿ ಪ್ರಸಾದ್ ಈ ಬಾರಿ 'ಬಿಗ್ ಬಾಸ್' ಮನೆಗೆ ಬರುವ ಸಾಧ್ಯತೆ ಇದೆ.

  ಶಾಲಿನಿ ಗೌಡ

  ಶಾಲಿನಿ ಗೌಡ

  ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ 'ಟಕಿಲ' ಹಾಡಲ್ಲಿ ಸೊಂಟ ಬಳುಕಿಸಿರುವ ಚೆಲುವೆ ಶಾಲಿನಿ ಗೌಡ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಬಂದರೆ ಅಚ್ಚರಿ ಇಲ್ಲ.

  ಟೆನ್ನಿಸ್ ಕೃಷ್ಣ

  ಟೆನ್ನಿಸ್ ಕೃಷ್ಣ

  ಸದ್ಯಕ್ಕೆ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ರಿಯಾಲಿಟಿ ಶೋನಲ್ಲಿ ಬಿಜಿಯಾಗಿರುವ ಟೆನ್ನಿಸ್ ಕೃಷ್ಣ ಹೆಸರು 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿಗಳ ಪಟ್ಟಿಯಲ್ಲಿ ಇದೆ ಎನ್ನಲಾಗಿದೆ.

  ಸುಮನ್ ರಂಗನಾಥ್

  ಸುಮನ್ ರಂಗನಾಥ್

  ಆಗೊಮ್ಮೆ ಈಗೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುವ ಸುಮನ್ ರಂಗನಾಥ್ 'ಬಿಗ್ ಬಾಸ್' ಮನೆಗೆ ಹೋಗ್ತಾರಾ.? ಇನ್ನೂ ಪಕ್ಕಾ ಆಗಿಲ್ಲ. ಆದ್ರೆ, ಅವರ ಹೆಸರು ಕೇಳಿ ಬರ್ತಿರೋದು ನಿಜ.

  ಶಂಕರೇ ಗೌಡ

  ಶಂಕರೇ ಗೌಡ

  ಐದು ರೂಪಾಯಿ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಮಂಡ್ಯದ ಶಂಕರೇ ಗೌಡ 'ಬಿಗ್ ಬಾಸ್' ಮನೆಯೊಳಗೆ ಬರ್ತಾರಾ.? ಕಾದು ನೋಡಬೇಕು.

  ಹೇಮಲತಾ

  ಹೇಮಲತಾ

  ಉದಯ ಟಿವಿಯಲ್ಲಿ ವಿ.ಜೆ ಆಗಿ, ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿರುವ ಹೇಮಲತಾ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಕಂಪೀಟ್ ಮಾಡ್ತಾರೆ ಎನ್ನಲಾಗಿದೆ.

  ಪದೇ ಪದೇ ಕೇಳಿ ಬರುತ್ತಿರುವ ಹೆಸರುಗಳು...

  ಪದೇ ಪದೇ ಕೇಳಿ ಬರುತ್ತಿರುವ ಹೆಸರುಗಳು...

  ಗಡ್ಡಪ್ಪ, ವಿಜಯಲಕ್ಷ್ಮಿ, ಒಗ್ಗರಣೆ ಡಬ್ಬಿ ಮುರಳಿ ಹಾಗೂ ನಟಿ ಪ್ರೇಮ 'ಬಿಗ್ ಬಾಸ್' ಶೋನಲ್ಲಿ ಪಾಲ್ಗೊಳ್ತಾರೆ ಅಂತ ಕಳೆದ ಎರಡ್ಮೂರು ಸೀಸನ್ ಗಳಿಂದಲೂ ಸುದ್ದಿ ಆಗುತ್ತಿದೆ. ಈ ಬಾರಿ ಇದು ನಿಜ ಆಗುತ್ತಾ.?

  ಯಾವುದೂ ಗ್ಯಾರೆಂಟಿ ಇಲ್ಲ.!

  ಯಾವುದೂ ಗ್ಯಾರೆಂಟಿ ಇಲ್ಲ.!

  ಇವರೆಲ್ಲರ ಜೊತೆಗೆ ನಟ ಅನಿರುದ್ಧ್, ಶಿವರಾಜ್ ಕೆ.ಆರ್.ಪೇಟೆ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ಹೆಸರುಗಳೂ ಕೇಳಿಬರುತ್ತಿವೆ. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಹೋಗುವವರೆಗೂ ಯಾವುದೂ ಗ್ಯಾರೆಂಟಿ ಇಲ್ಲ. ಯಾಕಂದ್ರೆ, 'ಇವರೇ' ಹೋಗ್ತಾರೆ ಅಂತ ಚಾನೆಲ್ ನವರೂ ಹೇಳಲ್ಲ. ಸ್ಪರ್ಧಿಗಳು ಕೂಡ ಹೇಳುವ ಹಾಗಿಲ್ಲ.

  ಕಾಮೆಂಟ್ ಮಾಡಿ...

  ಕಾಮೆಂಟ್ ಮಾಡಿ...

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನೀವು ಯಾರನ್ನ ನೋಡಲು ಬಯಸುತ್ತಿದ್ದೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ..

  English summary
  Bigg Boss is back in Kannada. According to latest Grapevine, Prema Kumari, Kuri Pratap, Shubha Poonja are considered in the Bigg Boss Kannada 6 contestants list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X