»   » ಇತಿಹಾಸ ಸೃಷ್ಟಿಸಿದ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮ.!

ಇತಿಹಾಸ ಸೃಷ್ಟಿಸಿದ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮ.!

Posted By:
Subscribe to Filmibeat Kannada

ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅಂತ ಹೇಳಿ' ಹೊಸ ಇತಿಹಾಸ ಸೃಷ್ಟಿಸಿದೆ. ಬರೋಬ್ಬರಿ 3000 ಸಂಚಿಕೆಗಳ ಗಡಿ ತಲುಪುವ ಮೂಲಕ ಭಾರತದ ದೂರದರ್ಶನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ದೂರದರ್ಶನ ವಾಹಿನಿ ನಿಮಗೂ ಅವಕಾಶ ಕಲ್ಪಿಸಿದೆ. ಇದೇ ಭಾನುವಾರ (ಜುಲೈ 10) ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ 'ಥಟ್ ಅಂತ ಹೇಳಿ' 3000ನೇ ಸಂಚಿಕೆಯ ಚಿತ್ರೀಕರಣ ನಡೆಯಲಿದೆ.[ಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿ]

'That Anta Heli' completes 3000 episodes

ಕೇವಲ 100 ಜನರಿಗೆ ಮಾತ್ರ ಸ್ಥಳಾವಕಾಶ ಒದಗಿಸಲಾಗಿದ್ದು, ಮೊದಲು ಬಂದವರಿಗೆ ಆದ್ಯತೆ. ಚೀಟಿ ಎತ್ತುವುದರ ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯಲಿದೆ.

'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ಇದುವರೆಗೂ ನಡೆಸಿಕೊಂಡು ಬರುತ್ತಿರುವ ಡಾ.ನಾ.ಸೋಮೇಶ್ವರ ನಿರೂಪಣೆಯಲ್ಲೇ 3000ನೇ ಸಂಚಿಕೆ ಚಿತ್ರೀಕರಣವಾಗಲಿದೆ.[ಲಿಮ್ಕಾ ದಾಖಲೆಯತ್ತ 'ಥಟ್ ಅಂತ ಹೇಳಿ' ಕಾರ್ಯಕ್ರಮ]

'ಥಟ್ ಅಂತ ಹೇಳಿ' ಹಾಟ್ ಸೀಟ್ ನಲ್ಲಿ ಕೂರುವ ಆಸೆ ನಿಮಗೆ ಇದ್ದರೆ, ಈ ಭಾನುವಾರ ತಪ್ಪದೇ ಬೆಂಗಳೂರಿನ ದೂರದರ್ಶನ ಕೇಂದ್ರಕ್ಕೆ ಭೇಟಿ ಕೊಡಿ....

English summary
DD Chandana TV Channel's popular program 'That Anta Heli' completes 3000 episodes. The shooting of 3000th episode will take place on Sunday, July 10th at Doordarshan Office, Bengaluru at 11 am.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada