For Quick Alerts
  ALLOW NOTIFICATIONS  
  For Daily Alerts

  ಜನವರಿ 11ಕ್ಕೆ 'ಜೀ ಕುಟುಂಬ ಅವಾರ್ಡ್ಸ್ 2013'

  By Rajendra
  |

  ತನ್ನ ವಿಭಿನ್ನ ಕಾರ್ಯಕ್ರಮಗಳಿಂದ ಕನ್ನಡಿಗರ ಮನೆಮಾತಾದ ಕನ್ನಡ ಕಣ್ಮಣಿ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಬೃಹತ್ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಸತತ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ 'ಜೀ ಕುಟುಂಬ ಅವಾರ್ಡ್ಸ್' ಈ ವರ್ಷವನ್ನು ಮತ್ತಷ್ಟು ವರ್ಣರಂಜಿತವಾಗಿ ಆಚರಿಸಲು ಸಜ್ಜಾಗಿದೆ.

  ಜನವರಿ 10 ಹಾಗೂ 11ರಂದು 'ಜೀ ಕುಟುಂಬ ಅವಾರ್ಡ್ಸ್' ಕಾರ್ಯಕ್ರಮ ನಡೆಯಲಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ಇತರೆ ಕಾರ್ಯಕ್ರಮ ವಿಭಾಗಗಳಲ್ಲಿ 22 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.

  ಹದಿನಾಲ್ಕು ವಿಭಾಗಗಳ ಪ್ರಶಸ್ತಿಗಳನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದು ಉಳಿದ ಎಂಟು ವಿಭಾಗದ ಪ್ರಶಸ್ತಿಗಳನ್ನು ಎಸ್ಎಂಎಸ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಬಾರಿಯ ತೀರ್ಪುಗಾರರು ಪ್ರಣಯರಾಜ ಶ್ರೀನಾಥ್, ತಾರಾ, ಸುಧಾರಾಣಿ, ಸಂಜು ತಗಡೂರು ಹಾಗೂ ಖ್ಯಾತ ಲೇಖಕ, ಪತ್ರಕರ್ತ ಗಿರೀಶ್ ರಾವ್ ಉರುಫ್ ಜೋಗಿ.

  ಶ್ರೇಷ್ಠ ಅಪ್ಪ, ಶ್ರೇಷ್ಠ ಅಮ್ಮ, ಅತ್ಯುತ್ತಮ ಕಳ್ಳ, ಅತ್ಯುತ್ತಮ ಕಳ್ಳಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚೊಚ್ಚಲ ನಟ, ಅತ್ಯುತ್ತಮ ಚೊಚ್ಚಲ ನಟಿ, ಶ್ರೇಷ್ಠ ಬಾಲ ಕಲಾವಿದ, ವಿಶೇಷ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.

  ಶ್ರೇಷ್ಠ ಮಗ, ಶ್ರೇಷ್ಠ ಮಗಳು, ಶ್ರೇಷ್ಠ ಹಾಸ್ಯ ನಟ, ಶ್ರೇಷ್ಠ ಹಾಸ್ಯ ನಟಿ, ಅತ್ಯುತ್ತಮ ನಿರೂಪಣೆ, ಅತ್ಯುತ್ತಮ ನಾನ್ ಫಿಕ್ಷನ್ ಶೋ, ಅತ್ಯುತ್ತಮ ಜೋಡಿ ಹಾಗೂ ಅತ್ಯುತ್ತಮ ಕುಟುಂಬ ಪ್ರಶಸ್ತಿಗಳನ್ನು ಎಸ್ಎಂಎಸ್ ಮೂಲಕ ಆಯ್ಕೆ ಮಾಡಲಾಗುತ್ತದೆ.

  ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್ 2013ರ ಬಣ್ಣ, ಬೆಳಕು, ನೃತ್ಯ ವೈಭವ ಜೊತೆಗೆ ಮುಗಿಲು ಮುಟ್ಟಿದ ಪ್ರಶಸ್ತಿ ಸಂಭ್ರಮವನ್ನು ಶನಿವಾರ (ಜ.11) ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಕಣ್ತುಂಬಿಕೊಳ್ಳಬಹುದು. (ಒನ್ಇಂಡಿಯಾ ಕನ್ನಡ)

  English summary
  The Zee Kutumba Awards 2013 is happening on 10th & 11th of January,2014. But the Main Event is happening on 11th January 2014 5 pm. It's the Third year Award Ceremony happening in Zee Kannada. The Event is taking place in National College Grounds, Basavangudi, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X