For Quick Alerts
  ALLOW NOTIFICATIONS  
  For Daily Alerts

  'ವಿಲನ್' ಆಡಿಯೋ ಕಾರ್ಯಕ್ರಮಕ್ಕೆ ಹೋಗದೇ ಇದ್ದವರಿಗೆ ಗುಡ್ ನ್ಯೂಸ್

  By Bharath Kumar
  |
  ದಿ ವಿಲನ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗದೆ ಇರುವವರಿಗೆ ಗುಡ್ ನ್ಯೂಸ್ | Filmibeat Kannada

  ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗಷ್ಟೆ ಬೆಂಗಳೂರಿನ ಹೆಬ್ಬಾಳದ ಬಳಿಯಿರುವ ವೈಟ್ ಆರ್ಕೆಡ್ ನಲ್ಲಿ ನಡೆದಿತ್ತು.

  ಈ ಕಾರ್ಯಕ್ರಮವನ್ನ ನೋಡಿ ಕಣ್ತುಂಬಿಕೊಳ್ಳಬೇಕೆಂದು ನೂರಾರು ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ, ಅದೇಷ್ಟೋ ಜನ ನಾನಾ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಹೋಗಿರುವುದಿಲ್ಲ. ಹೀಗಾಗಿ, ಶೊ ಮಿಸ್ ಮಾಡಿಕೊಂಡೆವು ಎಂದು ಬೇಸರ ಪಟ್ಟುಕೊಂಡಿರುತ್ತಾರೆ.

  ಇನ್ನು ಕೆಲವರು ಅರೇ ಟಿವಿಯಲ್ಲಿ ಹಾಕ್ತಾರೆ ಬಿಡಿ ನೋಡೋಣ ಅಂತ ಸುಮ್ಮನಾಗಿರ್ತಾರೆ. ಟವಿಯಲ್ಲಿ ಅದ್ಯಾವಾಗ ಪ್ರಸಾರ ಮಾಡ್ತಾರೋ ಎಂಬ ಯೋಚನೆಯೂ ಅವರನ್ನ ಕಾಡಿದೆ. ಹೀಗೆ ದಿ ವಿಲನ್ ಆಡಿಯೋ ಕಾರ್ಯಕ್ರಮಕ್ಕೆ ಹೋಗದೇ, ಯೋಚನೆ ಮಾಡುತ್ತಿದ್ದವರಿಗೆ ಜೀ ಕನ್ನಡ ಗುಡ್ ನ್ಯೂಸ್ ಕೊಟ್ಟಿದೆ.

  'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ

  ಅಭಿಮಾನಿಗಳನ್ನ ಹೆಚ್ಚು ಕಾಯಿಸದೇ ಇದೇ ವಾರ 'ದಿ ವಿಲನ್' ಶೋ ಪ್ರಸಾರ ಮಾಡಲು ನಿರ್ಧರಿಸಿದೆ. ಈಗಾಗಲೇ ಟಿವಿಯಲ್ಲಿ ಪ್ರೋಮೋ ಟೆಲಿಕಾಸ್ಟ್ ಆಗಿದ್ದು, ಭಾನುವಾರ ರಾತ್ರಿ 7.30ಕ್ಕೆ ಜೀ ವಾಹಿನಿಯಲ್ಲಿ ಮೂಡಿಬರಲಿದೆ.

  ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಜೋಗಿ ಪ್ರೇಮ್, ರೆಬೆಲ್ ಸ್ಟಾರ್ ಅಂಬರೀಶ್, ಗೀತಾ ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

  English summary
  Hatrick hero Shivarajkumar and sudeep starrer The Villain Audio Launch programme will telecast in zee kannada on 26th august.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X