»   » ಪವರ್ ಸ್ಟಾರ್ ಪುನೀತ್ ಗೆ ರಘು ದೀಕ್ಷಿತ್ ಏನಂತ ಚಾಲೆಂಜ್ ಮಾಡಿದ್ದಾರೆ ಗೊತ್ತಾ.?

ಪವರ್ ಸ್ಟಾರ್ ಪುನೀತ್ ಗೆ ರಘು ದೀಕ್ಷಿತ್ ಏನಂತ ಚಾಲೆಂಜ್ ಮಾಡಿದ್ದಾರೆ ಗೊತ್ತಾ.?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಗಾಂಧಿನಗರದ ಹೈವೋಲ್ಟೇಜ್ ಕರೆಂಟ್. ಬಾಲಕನಾಗಿರುವಾಗಲೇ 'ರಾಷ್ಟ್ರ ಪ್ರಶಸ್ತಿ' ಮುಡಿಗೇರಿಸಿಕೊಂಡ ಪುನೀತ್... ಅಭಿನಯದಲ್ಲಿ, ನೃತ್ಯದಲ್ಲಿ, ಗಾಯನದಲ್ಲಿ... ಎಲ್ಲದರಲ್ಲೂ ಸೂಪರ್.

ಇಂತಿಪ್ಪ ಅಪ್ಪುಗೆ ರಘು ದೀಕ್ಷಿತ್ ಒಂದು ಚಾಲೆಂಜ್ ಮಾಡಿದ್ದಾರೆ. ಹಾಗಂತ ಅದು ಸೀರಿಯಸ್ ಚಾಲೆಂಜ್ ಅಲ್ಲ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಘು ದೀಕ್ಷಿತ್ Rapid Fire ರೌಂಡ್ ನಲ್ಲಿ ಮಾತ್ರ ಕನ್ನಡ ಚಿತ್ರರಂಗದ ಲೀಡಿಂಗ್ ನಟರಾದ ಪುನೀತ್, ಸುದೀಪ್, ದರ್ಶನ್, ಯಶ್, ಗಣೇಶ್ ಗೆ ಇಂಟ್ರೆಸ್ಟಿಂಗ್ ಚಾಲೆಂಜ್ ಗಳನ್ನ ಕೊಟ್ಟರು. ಪೂರ್ತಿ ವಿವರ ಇಲ್ಲಿದೆ ಓದಿರಿ...

ಅಕುಲ್ ಕೇಳಿದ ಪ್ರಶ್ನೆ ಇದು.!

Rapid Fire ರೌಂಡ್ ನಲ್ಲಿ ''ಈ ನಟರಲ್ಲಿ ಯಾರಿಗೆ ಯವ ಚಾಲೆಂಜ್ ಕೊಡುತ್ತೀರಾ.?'' ಎಂದು ರಘು ದೀಕ್ಷಿತ್ ರನ್ನ ಅಕುಲ್ ಬಾಲಾಜಿ ಕೇಳಿದರು. ಜೊತೆಗೆ ಗಣೇಶ್, ದರ್ಶನ್, ಸುದೀಪ್, ಯಶ್, ಪುನೀತ್, ಶಿವಣ್ಣ ಹೆಸರುಗಳನ್ನ ರಘು ದೀಕ್ಷಿತ್ ಮುಂದಿಟ್ಟರು. ಒಬ್ಬೊಬ್ಬರಿಗೂ ರಘು ದೀಕ್ಷಿತ್ ಕೊಟ್ಟ ಚಾಲೆಂಜ್ ಹೀಗಿದೆ....

ಮೂಕಾಭಿನಯ ಮಾಡಬೇಕು ಗಣೇಶ್

''ಯಾವುದೇ ಡೈಲಾಗ್ ಇಲ್ಲದೇ ('ಮೂಕಾಭಿನಯ') ಒಂದು ಸಿನಿಮಾ ಮಾಡಬೇಕು. ಯಾಕಂದ್ರೆ, ಅವರ ಮುಖ ತುಂಬಾ ಎಕ್ಸ್ ಪ್ರೆಸಿವ್ ಆಗಿದೆ'' ಎಂದು ನಟ ಗಣೇಶ್ ಗೆ ರಘು ದೀಕ್ಷಿತ್ ಚಾಲೆಂಜ್ ನೀಡಿದ್ದಾರೆ.

ಇಲ್ಲ ಸಲ್ಲದ ಅಪವಾದ: ಕನ್ನಡ ಚಿತ್ರರಂಗದ ಮೇಲೆ ಮುನಿಸಿಕೊಂಡ ರಘು ದೀಕ್ಷಿತ್.!

ದರ್ಶನ್ ಗೆ ಕೊಟ್ಟ ಚಾಲೆಂಜ್ ಇದು

''ಒಂದು ರೋಮ್ಯಾಂಟಿಕ್ ಸಿನಿಮಾ ಮಾಡಿ'' ಅಂತ ದರ್ಶನ್ ಗೆ ರಘು ದೀಕ್ಷಿತ್ ಚಾಲೆಂಜ್ ಹಾಕಿದ್ದಾರೆ.

ರಘು ದೀಕ್ಷಿತ್ ಗೆ ಅವಮಾನ ಮಾಡಿದ ಕನ್ನಡದ 'ಆ' ಮಹಾನ್ ಡೈರೆಕ್ಟರ್ ಯಾರು.?

ಇನ್ನೊಂದು ಚಾನ್ಸ್ ಕೊಡಬೇಕು

''ಇನ್ನೊಂದು ಸಿನಿಮಾಗೆ ನನ್ನನ್ನ ಮ್ಯೂಸಿಕ್ ಡೈರೆಕ್ಟರ್ ಮಾಡಿಕೊಳ್ಳಬೇಕು'' ಎಂದು ಸುದೀಪ್ ಗೆ ಚಾಲೆಂಜ್ ನೀಡಿದ್ದಾರೆ ರಘು ದೀಕ್ಷಿತ್.

ಯಶ್ ಗೆ ಕೊಟ್ಟಿರುವ ಚಾಲೆಂಜ್...

''ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಅನಂತ್ ನಾಗ್ ರವರ ಪಾತ್ರದ ತರಹ ಒಂದು ರೋಲ್ ಮಾಡಬೇಕು (ಅಷ್ಟು ವಯಸ್ಸಾದ ಪಾತ್ರ ಅಲ್ಲ) ತೆರೆಮೇಲೆ ಯಶ್ ನ ನೋಡದೆ, ಜನ ಪಾತ್ರವನ್ನ ಮಾತ್ರ ನೋಡುವಂತಹ ರೋಲ್ ಮಾಡಬೇಕು'' - ಇದು ಯಶ್ ಗೆ ರಘು ದೀಕ್ಷಿತ್ ಕೊಟ್ಟಿರುವ ಚಾಲೆಂಜ್

ಪುನೀತ್ ಗೆ ನೀಡಿದ ಚಾಲೆಂಜ್ ಏನು.?

''ಪುನೀತ್ ಸರ್ ಗೆ ಏನು ಹೇಳುವುದು.? ಅವರು ಎಲ್ಲ ಮಾಡಿ ಬಿಸಾಕ್ಬಿಟ್ಟಿದ್ದಾರೆ. ಅವರಿಗೆ ಏನು ಚಾಲೆಂಜ್ ಮಾಡೋಕೆ ಆಗುತ್ತೆ. ಡ್ಯಾನ್ಸ್, ಆಕ್ಟಿಂಗ್, ಸಿಂಗಿಂಗ್ ಎಲ್ಲ ಮಾಡ್ತಾರೆ ಅವರು. ಒಳ್ಳೆ ಮನುಷ್ಯ ಕೂಡ. ಏನಾದರೂ ಕೆಟ್ಟ ಕೆಲಸ ಮಾಡಿ ಅಂತ ಚಾಲೆಂಜ್ ಕೊಡ್ತೀನಿ'' ಎಂದರು ರಘು ದೀಕ್ಷಿತ್.

Akul Balaji

ಶಿವಣ್ಣ 'ಇದನ್ನ' ಮಾಡಿದರೆ ಸಾಕು..

''ಒಂದು ದಿನ ನಾನು ಅಡುಗೆ ಮಾಡುತ್ತೇನೆ. ಅವರು ನಮ್ಮ ಮನೆಗೆ ಬಂದು ಊಟ ಮಾಡಬೇಕು. ಅವರೊಂದಿಗೆ ಊಟ ಮಾಡಬೇಕು ಎಂಬುದು ನನ್ನ ಆಸೆ'' ಎಂದು ಶಿವಣ್ಣನಿಗೆ ಚಾಲೆಂಜ್ ಹಾಕಿದ್ದಾರೆ ರಘು ದೀಕ್ಷಿತ್.

English summary
This is what Raghu Dixit challenged to Power Star Puneeth Rajkumar. Read the article to know more..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada