Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಟ್ಟಿದಾಗಿನಿಂದ ಜನರ ಪ್ರೀತಿ ನೋಡಿರುವ ನನಗೆ ವಿವಾದ ಯಾಕೆ ಬೇಕು: ಪುನೀತ್
ಸಿನಿಮಾ.. ಚಿತ್ರರಂಗ ಅಂದ್ಮೇಲೆ ಗಾಸಿಪ್, ವಿವಾದ ಸರ್ವೇ ಸಾಮಾನ್ಯ. ಸದಾ ಸುದ್ದಿಯಲ್ಲಿ ಇರಬೇಕು ಅಂದ್ರೆ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡ್ತಾ ಇರಬೇಕು. ಸಿನಿಮಾ ಮಾಡುತ್ತಲೇ ಇರಬೇಕು. ಹೀಗಾಗಲಿಲ್ಲ ಅಂದಾಗ ಕೆಲವರು ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ತಾರೆ.
ಪ್ರಚಾರಕ್ಕಾಗಿ ಹಲವರು ವಿವಾದಗಳನ್ನು ಸೃಷ್ಟಿ ಮಾಡ್ತಾರೆ. ಸೋಷಿಯಲ್ ಮೀಡಿಯಾ ಮುಂಚೂಣಿಗೆ ಬಂದ ಮೇಲಂತೂ ಅಭಿಮಾನಿಗಳ ನಡುವೆ ಆಗಾಗ ಬೆಂಕಿ ಬೀಳುತ್ತಲೇ ಇರುತ್ತೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ಆಗಾಗ ಫ್ಯಾನ್ಸ್ ವಾರ್ ಗಳಿಗೆ ಸಾಕ್ಷಿ ಆಗ್ತಿರುತ್ತೆ.
Recommended Video
ಇಷ್ಟೆಲ್ಲ ಇರುವಾಗ ಸೈಲೆಂಟ್ ಆಗಿ ತೆರೆಗೆ ಬಂದು ಬಾಕ್ಸ್ ಆಫೀಸ್ ಉಡೀಸ್ ಮಾಡುವವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹಾಗ್ನೋಡಿದ್ರೆ, ಅಪ್ಪು ಆಗಲಿ, ಅಣ್ಣಾವ್ರ ಕುಟುಂಬದವರಾಗಲಿ ವಿವಾದಗಳಿಗೆ ಸಿಲುಕಿದ್ದು ಕಮ್ಮಿ.
ಸ್ಟಾರ್ ಗಿರಿ ನಡುವೆ ವಿವಾದಗಳನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಪುನೀತ್ ರಾಜ್ ಕುಮಾರ್ 'ಕನ್ನಡದ ಕೋಟ್ಯಧಿಪತಿ' ವೇದಿಕೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಪುನೀತ್ ಗೆ ಎದುರಾದ ಪ್ರಶ್ನೆ
''ನಮ್ಮಲ್ಲಿ ಹಲವು ನಾಯಕ ನಟರು ಇದ್ದಾರೆ. ಅವರಿಗೆ ಅಗಾಧವಾದ ಫ್ಯಾನ್ ಫಾಲೋವಿಂಗ್ ಇದೆ. ಈ ಮಧ್ಯೆ ಹಗ್ಗ-ಜಗ್ಗಾಟ, ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಆದ್ರೆ ನೀವು ಮಾತ್ರ ಯಾವುದೇ ಫ್ಯಾನ್ಸ್ ವಾರ್ ನಲ್ಲಿ ವಿವಾದಕ್ಕೀಡಾಗಿಲ್ಲ. ವಿವಾದ ಮಾಡಿಕೊಳ್ಳದೇ ನಿಭಾಯಿಸುವುದು ಹೇಗೆ.?'' ಎಂದು 'ಕನ್ನಡದ ಕೋಟ್ಯಧಿಪತಿ'ಯ ಹಾಟ್ ಸೀಟ್ ನಲ್ಲಿ ಕೂತ ಪ್ರದೀಪ್ ಎಂಬುವರು ಪುನೀತ್ ರಾಜ್ ಕುಮಾರ್ ಗೆ ಕೇಳಿದರು.
'ನಾನು
ತುಂಬಾ
ತಪ್ಪುಗಳನ್ನು
ಮಾಡಿದ್ದೀನಿ
ಕ್ಷಮಿಸಿ':
ಪೊಲೀಸರ
ಬಳಿ
ಕ್ಷಮೆ
ಕೇಳಿದ
ಅಪ್ಪು

ಪುನೀತ್ ಕೊಟ್ಟ ಉತ್ತರ ಏನು.?
''ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವರವರ ಖುಷಿಗೆ ಏನೇನೋ ಹಾಕಿಕೊಳ್ಳುತ್ತಿರುತ್ತಾರೆ. ಈ ಜನರ ಪ್ರೀತಿ, ಜಯಕಾರವನ್ನೆಲ್ಲ ನಾನು ಹುಟ್ಟಿದಾಗಿನಿಂದ ನನ್ನ ತಂದೆಯವರಿಂದ ನೋಡಿಕೊಂಡು ಬಂದಿದ್ದೇನೆ. ಐವತ್ತು ವರ್ಷಗಳಿಂದ ಜನ ನಮ್ಮ ಮೇಲೆ ಪ್ರೀತಿ ವಿಶ್ವಾಸ ತೋರಿಸಿಕೊಂಡು ನಮ್ಮನ್ನ ಬೆಳೆಸಿದ್ದಾರೆ. ಜನರ ಪ್ರೀತಿ ಇರುವಾಗ ನಾವ್ಯಾಕೆ ಕಾಂಟ್ರವರ್ಸಿ ಮಾಡಿಕೊಳ್ಳಬೇಕು.? ವಿವಾದ ನಮಗೆ ಬೇಡದೇ ಇರುವಂಥದ್ದು'' ಎಂದಿದ್ದಾರೆ ನಟ ಪುನೀತ್ ರಾಜ್ ಕುಮಾರ್
ಕೋಟ್ಯಧಿಪತಿಯಲ್ಲಿ
ಬಿಗ್
ಟ್ವಿಸ್ಟ್:
ಪವರ್
ಸ್ಟಾರ್
ಜಾಗಕ್ಕೆ
ಹೊಸ
ನಿರೂಪಕಿ

ಯಾರು ಈ ಪ್ರದೀಪ್.?
ತಿಪಟೂರು ಮೂಲದ 24 ವರ್ಷದ ಪ್ರದೀಪ್ ಗೆ ಶೇ.90 ರಷ್ಟು ಕಣ್ಣು ಕಾಣುವುದಿಲ್ಲ. ಹೀಗಿದ್ದರೂ, ಛಲದಿಂದ ಎಂ.ಎ ಮುಗಿಸಿದ್ದಾರೆ ಪ್ರದೀಪ್.

ಪ್ರದೀಪ್ ಗೆದ್ದಿದ್ದು ಎಷ್ಟು.?
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಪ್ರದೀಪ್ 3,20,000 ರೂಪಾಯಿಗಳನ್ನು ಗೆದ್ದರು. 6,40,000 ರೂಪಾಯಿಯ ಪ್ರಶ್ನೆಗೆ ತಪ್ಪಾಗಿ ಉತ್ತರ ಕೊಟ್ಟ ಪ್ರದೀಪ್ 3,20,000 ರೂಪಾಯಿಯನ್ನು ಪಡೆದರು.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್