»   » ಬಿಗ್ ಬಾಸ್ ನಿಂದ ತಿಲಕ್, ಅಪರ್ಣಾಗೆ ಗೇಟ್ ಪಾಸ್

ಬಿಗ್ ಬಾಸ್ ನಿಂದ ತಿಲಕ್, ಅಪರ್ಣಾಗೆ ಗೇಟ್ ಪಾಸ್

Posted By:
Subscribe to Filmibeat Kannada

ಇದ್ದದ್ದನ್ನು ಇದ್ದಂಗೆ ಹೇಳುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್'. ಹಾಗೆಂದು ಕಿಚ್ಚ ಸುದೀಪ್ ಪ್ರತಿವಾರ ಹೇಳುತ್ತಾ ಎಲ್ಲರ ಮನ ಗೆದ್ದಿದ್ದಾರೆ, ಮನಗೆಲ್ಲುತ್ತಿದ್ದಾರೆ. ಈ ಶುಕ್ರವಾರ (ಮೇ.3) ಮೂಡಿಬಂದ 'ವಾರದ ಕಥೆ ಕಿಚ್ಚನ ಜೊತೆ' ಕುತೂಹಲಭರಿತವಾಗಿ ಸಾಗಿಹೋಯಿತು.

ಈ ಬಾರಿ ಓಟ್ ಯಾರಿಗೆ ಗೇಟ್ ಯಾರಿಗೆ ಎನ್ನುತ್ತಾ ಸುದೀಪ್ ಸ್ಪರ್ಧಿಗಳ ಎದೆಬಡಿತ ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಅವರು ಸ್ಪರ್ಧಿಗಳಿಗೆ ಹಿತವಚನವನ್ನೂ ಹೇಳಿದರು. ಪುಟಗೋಸಿ, ಮುಂಡೇಮಕ್ಕಳು ಮುಂತಾದ ಪದಗಳನ್ನು ಬಳಸದಿರುವಂತೆ ವಿನಂತಿಸಿಕೊಂಡರು. ಬಹಳಸುವ ಭಾಷೆ ಚೆನ್ನಾಗಿರಲಿ ಎಂದರು.

ಈ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ನೋಡುತ್ತಿರುತ್ತಾರೆ. ಅವರಲ್ಲಿ ಮಕ್ಕಳು, ಮಹಿಳೆಯರು ಎಲ್ಲರೂ ಇದ್ದಾರೆ. ನೀವು ಆಡುವ ಭಾಷೆ ಬಗ್ಗೆ ಗಮನವಿರಲಿ. ತಮ್ಮನ್ನು ಎಲ್ಲರೂ ನೋಡುತ್ತಿದ್ದಾರೆ ಎಂಬ ಪರಿಜ್ಞಾನ ಇರಲಿ ಎಂದು ಕಿವಿಮಾತು ಹೇಳಿದರು. ಇದಕ್ಕೆ ಮನೆಮಂದಿಯಲ್ಲಾ ಓಕೆ ಎಂದರು.

ಇದು ಮಸಾಲೆ ಶೋ ಅಲ್ಲ ಎಂದ ಸುದೀಪ್

ರಾತ್ರಿ 12 ಗಂಟೆಗೆ ಪ್ರಸಾರವಾಗುವ ಮಸಾಲೆ ಶೋ ಇದಲ್ಲ. ಪ್ರೈಮ್ ಟೈಮ್ ನಲ್ಲಿ ರಾತ್ರಿ 8ಕ್ಕೆ ಮೂಡಿಬರುತ್ತಿರುವ ಮನೆಮಂದಿಯಲ್ಲಾ ಕುಳಿತು ನೋಡುವ ಶೋ ಇದಾಗಿದೆ ಎಂಬುದು ತಮ್ಮ ಗಮನಕ್ಕಿರಲಿ. ನಿಮ್ಮನ್ನು ಕೋಟ್ಯಾಂತರ ಕನ್ನಡಿಗರು ಗಮನಿಸುತ್ತಿದ್ದಾರೆ ಎಂದರು.

ನಲವತ್ತು ದಿನಕ್ಕೆ ಎಲ್ಲರೂ ಸುಸ್ತೋ ಸುಸ್ತು

'ಬಿಗ್ ಬಾಸ್' ಕಾರ್ಯಕ್ರಮ ನಲವತ್ತು ಎಪಿಸೋಡುಗಳನ್ನು ಮುಗಿಸಿ ನಲವತ್ತೊಂದನೇ ದಿನಕ್ಕೆ ಅಡಿಯಿಟ್ಟಿದೆ. ಸ್ಪರ್ಧಿಗಳ ನಡುವೆ ಮನಸ್ತಾಪ, ಕೋಪ ತಾಪಗಳು ಮನೆಮಾಡಿವೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಎಂಬಂತಾಗಿದೆ. ಕೆಲವರು ಅಲ್ಲಿಂದ ಹೊರಬಿದ್ದರೆ ಸಾಕು ಎಂಬ ಸ್ಥಿತಿಯಲ್ಲಿದ್ದಾರೆ. ಇನ್ನೂ ಕೆಲವರು ಗೆದ್ದೇ ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.

ಎಲ್ಲರೂ ಚಂದ್ರಿಕಾ ಎಂದು ಭಾವಿಸಿದರು

ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಹೊರಬೀಳುತ್ತಾರೆ ಎಂಬ ಬಗ್ಗೆ ಕುತೂಹಲ ಇದ್ದೇ ಇತ್ತು. ಕಡೆತನಕ ಆ ಕುತೂಹಲವನ್ನು ಹಿಡಿದಿಟ್ಟುಕೊಂಡು ಸುದೀಪ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಬಹುಶಃ ಚಂದ್ರಿಕಾ ಅವರು ಹೊರಬೀಳುವುದು ಗ್ಯಾರಂಟಿ ಎಂದು ಎಲ್ಲರೂ ಭಾವಿಸಿದ್ದರು.

ತಿಲಕ್, ಅಪರ್ಣಾ ಮನೆಯಿಂದ ಔಟ್

ಆದರೆ ಆಗಿದ್ದೇ ಬೇರೆ. ನಟ ತಿಲಕ್ ಹಾಗೂ ನಿರೂಪಕಿ ಅಪರ್ಣಾ ಅವರನ್ನು ಮನೆಯಿಂದ ಹೊರ ಕಳುಹಿಸಲಾಯಿತು. ಇಬ್ಬರೂ ನಗುನಗುತ್ತಲೇ ಮನೆಯಿಂದ ಹೊರಬಂದರು. ಈ ಬಾರಿ ಮನೆಯಿಂದ ಇಬ್ಬರು ಎಲಿಮಿನೇಟ್ ಆಗಿದ್ದು ವಿಶೇಷ.

ಎಲಿಮಿನೇಷನ್ ಭಯಕ್ಕೆ ಕಂಗಾಲಾಗಿದ್ದ ಅನುಶ್ರೀ

ಎಲಿಮಿನೇಷನ್ ಬಗ್ಗೆ ಮಾತನಾಡುತ್ತಿರಬೇಕಾದರೆ ಅನುಶ್ರೀ ಅವರಂತೂ ಬಹಳಷ್ಟು ಕಂಗಾಲಾದ್ದರು. ಅವರು ಕೈಯಲ್ಲಿ ಗಣೇಶನ ಮೂರ್ತಿಯನ್ನು ಹಿಡಿದು ಪ್ರಾರ್ಥಿಸುತ್ತಿದ್ದರು. ಇದನ್ನು ಗಮನಿಸಿದ ಸುದೀಪ್ ಅವರ ಟೆನ್ಷನ್ ಇನ್ನಷ್ಟು ಹೆಚ್ಚಿಸಿ ಕಡೆಗೆ ನೀವು ಸೇಫ್ ಎಂದು ಹೇಳುವ ಮೂಲಕ ಅವರ ಮುಖವನ್ನು ಊರಗಲ ಅರಳುವಂತೆ ಮಾಡಿದರು.

ಮಕ್ಕಳಂತೆ ಕುಣಿದಾಡಿದ ಅರುಣ್ ಸಾಗರ್

ಇನ್ನು ಅರುಣ್ ಸಾಗರ್ ಅವರೂ ಅಷ್ಟೇ ತಾವು ಸೇಫ್ ಎಂದು ಗೊತ್ತಾಗುತ್ತಿದ್ದಂತೆ ಚಿಕ್ಕಮಕ್ಕಳ ತರಹ ಕುಣಿದಾಡಿ ಸಂಭ್ರಮಿಸಿದರು. ಸ್ವಲ್ಪ ಕಂಟ್ರೋಲಲ್ಲಿ ಇದ್ದದ್ದು ಎಂದರೆ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಮಾತ್ರ. ಈಗಾಗಲೆ ಒಂದು ಬಾರಿ ಮನೆಯಿಂದ ಹೊರಹೋಗಿ ಮತ್ತೆ ಎಂಟ್ರಿಕೊಟ್ಟಿರುವ ಜಯಲಕ್ಷ್ಮಿ ಅವರೂ ಅಷ್ಟೇ ನಿರ್ಲಿಪ್ತರಾಗಿದ್ದರು.

ತನ್ನ ಮಗು ಮೇಲೆ ಆಣೆ ಮಾಡಿದ ಚಂದ್ರಿಕಾ

ನಟಿ ಚಂದ್ರಿಕಾ ಅವರು ಬಹಳಷ್ಟು ಉದ್ವೇಗಕ್ಕೆ ಒಳಗಾದಂತಿದ್ದರು. ಇದನ್ನು ಅವರು ಆದಷ್ಟು ತೋರಿಸಿಕೊಳ್ಳದಂತೆ ನಟಿಸುತ್ತಿದ್ದದ್ದು ಎಲ್ಲರ ಗಮನಕ್ಕೂ ಬರುತ್ತಿದ್ದು. ಶರ್ಮಾ ಅವರ ಬಗ್ಗೆ ಅವರು ಮಾಡಿದ ಕಾಮೆಂಟ್ ಬಗ್ಗೆ ಸುದೀಪ್ ಚರ್ಚಿಸಿದರು. ಇದಕ್ಕೆ ಅವರು ನನ್ನ ಮಗು ಮೇಲೆ ಆಣೆ ನಾನು ಆ ರೀತಿ ಹೇಳಿಲ್ಲ ಎಂದದ್ದು ಸುದೀಪ್ ಅವರನ್ನು ಇರುಸುಮುರುಸು ಮಾಡಿತು. ಇದೊಂದು ಗೇಮ್ ಅಷ್ಟೇ ಹಾಗೆಲ್ಲಾ ಆಣೆ ಪ್ರಮಾಣ ಬೇಡ ಎಂದರು.

ಬಿಗ್ ಬಾಸ್ ಗೆ ಯಾಕೆ ಧಮ್ಕಿ ಹಾಕ್ತೀರಾ ಗುರೂಜಿ

ಇನ್ನು ಬ್ರಹ್ಮಾಂಡ ಶರ್ಮಾ ಅವರು ಪದೇ ಪದೇ 'ಬಿಗ್ ಬಾಸ್'ಗೆ ಧಮ್ಕಿ ಹಾಕುತ್ತಿರುವ ಬಗ್ಗೆಯೂ ಸುದೀಪ್ ಪ್ರಸ್ತಾಪಿಸಿದರು. ಗುರುಗಳೇ ನಿಮ್ಮನ್ನು ನಾವೇನು ಬಲವಂತ ಮಾಡಿ ಕರೆದುಕೊಂಡು ಬಂದಿಲ್ಲ. ನೀವು ಪದೇ ಪದೇ ಮನೆಯಿಂದ ನನ್ನನ್ನು ಕಳುಹಿಸಿಬಿಡಿ ಎಂದು ಗೋಗರೆಯುವುದು ಸರಿಯಲ್ಲ. ನಾವೇನೋ ನಿಮ್ಮನ್ನು ಕಳುಹಿಸಬೇಕು ಎಂದಿದ್ದೇವೆ. ಆದರೆ ಕರ್ನಾಟಕದ ಜನತೆ ನಿಮ್ಮನ್ನು ಕಳುಹಿಸುತ್ತಿಲ್ಲವೇ ಎಂದರು.

ಶರ್ಮಾಗೆ ಬ್ರಹ್ಮಾಂಡ ಜನಪ್ರಿಯತೆ

ಬ್ರಹ್ಮಾಂಡ ಗುರುಗಳ ಪಾಪ್ಯುಲಾರಿಟಿ ದಿನೇ ದಿನೇ ಹೆಚ್ಚಾಗುತ್ತಿದೆ. ನಮ್ಮ ಅಭಿಮಾನಿಗಳನ್ನು ಶರ್ಮಾ ಅವರು ಎಲ್ಲಿ ಮೀರಿಸಿಬಿಡುತ್ತಾರೋ ಎಂದು ಭಯವಾಗುತ್ತಿದೆ ಎಂದು ಸುದೀಪ್ ಹಾಸ್ಯ ಚಟಾಕಿ ಸಿಡಿಸಿದರು. ಬಳಿಕ ಲೈಟಾಗಿ ಅವರನ್ನು ತರಾಟೆಗೂ ತೆಗೆದುಕೊಂಡರು.

ಬ್ರಹ್ಮಾಂಡ ಶರ್ಮಾಗೆ ಸುದೀಪ್ ತರಾಟೆ

ಬ್ರಹ್ಮಾಂಡ ಗುರುಗಳು ತಾಳ್ಮೆ ಕಳೆದುಕೊಳ್ಳುತ್ತಿರುವುದು. ಸಿಕ್ಕಾಪಟ್ಟೆ ರೇಗಾಡಿದ್ದು, ಅರುಣ್ ಸಾಗರ್ ಮೇಲೆ ಹರಿಹಾಯ್ದದ್ದು ಯಾಕೆ ಎಂದು ಕೇಳಿದರು. ಇದಕ್ಕೆ ಗುರುಗಳು ಕೋಪ ಬಂದಾಗ ಆ ಕ್ಷಣಕ್ಕೆ ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ನನ್ನ ತಪ್ಪು ಅರಿವಾದ ಮೇಲೆ ಕ್ಯಾಮೆರಾ ಮುಂದೆ ಕ್ಷಮೆ ಕೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.

ನಿಧಾನಕ್ಕೆ ಎಲ್ಲರ ಮನಗೆಲ್ಲುತ್ತಿರುವ ವಿಜಯ್

ಮನೆಯ ಹೊಸ ಅಭ್ಯರ್ಥಿ ರೋಹನ್ ಗೌಡ ಅವರು ಈ ಬಾರಿ ಎಲಿಮಿನೇಷನ್ ರೌಂಡ್ ನಿಂದ ಹೊರಗುಳಿದಿದ್ದರು. ಆರಂಭದ ದಿನಗಳಲ್ಲಿ ತನ್ನ ಪಾಡಿಗೆ ತಾನಿರುತ್ತಿದ್ದ ವಿಜಯ್ ರಾಘವೇಂದ್ರ ಅವರು ಈಗ ಸಾಕಷ್ಟು ಬದಲಾಗಿದ್ದಾರೆ. ಅವರು ಎಲ್ಲೂ ಅತಿ ಎನ್ನಿಸಿಕೊಳ್ಳದೆ ಎಲ್ಲರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ.

English summary
This Friday (3rd May) two members actor Tilak and anchor Aparna are evicted from Bigg Boss Kannada house hosted by Kichcha Sudeep. The shows weekly roundup 'Vaarada Kathe Kichchana Jothe' highlights. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada