For Quick Alerts
  ALLOW NOTIFICATIONS  
  For Daily Alerts

  ಟಾಪ್ ನಿರೂಪಕಿ ಸುಮಾ ಒಂದು ಶೋಗೆ ಎಷ್ಟು ತೆಗೆದುಕೊಳ್ಳುತ್ತಾರೆ ಗೊತ್ತೆ?

  By ರವೀಂದ್ರ ಕೊಟಕಿ
  |

  ಆಕೆಯದು ನಿರರ್ಗಳವಾದ ಭಾಷೆ, ಕಣ್ಣಿಂದಲೇ ಮಾತಿಗೆ ತಕ್ಕ ಭಾವಭಿನಯ. ಅವಳದು ಪರಿಶುದ್ಧವಾದ ನಗು, ಅವಳು ವೇದಿಕೆಯ ಮೇಲೆ ನಿರೂಪಣೆಗೊಂದು ನಿಂತರೆ ಆ ವೇದಿಕೆಗೆ ಅವಳೇ ಅಂದ, ಅವಳ ಮಾತುಗಳೇ ಚಂದ. ಅವಳ ಹೆಸರೇ 'ಸುಮ" ಕನಕಾಲ.

  ಈಟಿವಿ 'ಸ್ಟಾರ್ ಮಹಿಳಾ' ಗೇಮ್ ಶೋ ಶುರುವಾಗಿದ್ದು 2008ರಲ್ಲಿ. ಇಲ್ಲಿಗೆ ಇದುವರೆಗೆ ಅಸಂಖ್ಯಾತ ಮಹಿಳೆಯರು ಬಂದರು ಆಟ ಆಡಿದರು ಹೋದರು, ನಿರೂಪಕಿ ಮಾತ್ರ ಹಾಗೆಯೇ ಉಳಿದಳು. ಇಂಡಿಯಾಸ್ ಲಾಂಗೆಸ್ಟ್ ಗೇಮ್ ಶೋ (India's longest game show) ಗೆ ಇವತ್ತಿಗೂ ಅದೇ ನಿರೂಪಕಿ, ಅದೇ ಸುಮ.

  ಸೌತ್ ಇಂಡಿಯಾದ ಟಾಪ್ ವಿಲನ್: ಜಗಪತಿ ಬಾಬು ಸಂಭಾವನೆ ಎಷ್ಟಿದೆ?ಸೌತ್ ಇಂಡಿಯಾದ ಟಾಪ್ ವಿಲನ್: ಜಗಪತಿ ಬಾಬು ಸಂಭಾವನೆ ಎಷ್ಟಿದೆ?

  ಖ್ಯಾತ ಗಾಯಕ ಎಸ್ಪಿಬಿ ಅವರ ಸ್ವರಾಭಿಷೇಕಂ ಕಾರ್ಯಕ್ರಮ ನೋಡಿದವರಿಗೆ ಗೊತ್ತಿರುವುದೇ, ಪ್ರತಿವಾರ ಅನೇಕ ಗಾಯಕ-ಗಾಯಕಿಯರು ಹಳೆಯ ಸುಮಧುರ ಗೀತೆಗಳು ಪ್ರಸ್ತುತಪಡಿಸುವಾಗ ಪ್ರತಿ ಹಾಡಿಗೆ ಮೊದಲು ಆ ಹಾಡಿನ ಹಿನ್ನಲೆಯ ಬಗ್ಗೆ ಅದ್ಭುತವಾಗಿ ಎರಡು ನಿಮಿಷದಲ್ಲಿ ಒಂದು ನಿರೂಪಣೆ, ಹಾಡು ಮುಗಿದ ತಕ್ಷಣ ಒಂದು ಚುಟುಕು ಪ್ರಶ್ನೆ ಅದು ಸುಮಳ ನಿರೂಪಣಾ ಶೈಲಿ. ಕಾರ್ಯಕ್ರಮದಲ್ಲಿ ಎಸ್ಪಿಬಿ, ಸುಮ ಮಧ್ಯೆ ನಡೆಯುತ್ತಿದ್ದ ಮಾತುಗಳ ಚಮತ್ಕಾರ ನೋಡುವುದೇ ಖುಷಿ ಕೊಡುತ್ತಿತ್ತು. ಸತತ ಹತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯಕ್ರಮ ಈಗಲೂ ನಿಂತಿಲ್ಲ, ಇಲ್ಲಿ ಎಸ್ಪಿಬಿ ನೆನಪುಗಳ ಜೊತೆಗೆ ಸುಮಳ ನಿರೂಪಣೆ ಹಾಗೇ ಮುಂದುವರೆದಿದೆ. ಅಂದಹಾಗೆ ಎಸ್ಪಿಬಿ ಅವರು ಹೇಳಿದಂತೆ ಅವರು ಸುಮಳಿಗೆ ಅತಿ ದೊಡ್ಡ ಅಭಿಮಾನಿ...

  ಸುಮ ಕೇವಲ ಒಂದು ನಿರೂಪಕಿ ಮಾತ್ರವಲ್ಲ ಬದಲಾಗಿ ಒಳ್ಳೆ ಸಂದರ್ಶಕಿ ಕೂಡ. ಅವಳು ಸಂದರ್ಶಿಸುವ ಶೈಲಿ, ಪ್ರಶ್ನಿಸುವ ದಾಟಿ ಅದರೊಳಗೊಂದು ಹಾಸ್ಯಪ್ರಜ್ಞೆ, ವಿಷಯಗಳನ್ನು ಜೀವಂತವಾಗಿರಿಸುವ ವಿಧಾನ...ಆಕೆಯನ್ನು ಅತ್ಯುತ್ತಮ ಸಂದರ್ಶಕಿ ಎಂಬ ಪಟ್ಟ ತಂದುಕೊಟ್ಟಿದೆ. ಇಂದಿನ ಯೂಟ್ಯೂಬ್ ಜಮಾನದಲ್ಲಿ ಹತ್ತಾರು ಎಪಿಸೋಡುಗಳ ಸಂದರ್ಶನಗಳನ್ನು ನಾವು ಎಲ್ಲೆಡೆ ನೋಡುತ್ತಿದ್ದೇವೆ. ಆದರೆ ಇಂತಹ ಪ್ರಯತ್ನವನ್ನು ಮೊದಲು ಆರಂಭಿಸಿದ್ದೆ ಸುಮ. ಸುಮಾರು ಹದಿನೈದು ವರ್ಷಗಳ ಹಿಂದೆ ಈಕೆ ತೆಲುಗಿನ ದಂತಕಥೆಯಾಗಿದ್ದರ ನಾಗೇಶ್ವರರಾವ್ ಅವರ ಇಡೀ ಜೀವನ ಯಾತ್ರೆಯನ್ನು ಸುಮಾರು 50ಕ್ಕೂ ಹೆಚ್ಚು ಎಪಿಸೋಡುಗಳ ಮೂಲಕ 'ಮಾ ಟಿವಿ' ಚಾನೆಲ್ಗಾಗಿ ನಾಗೇಶ್ವರರಾವ್ ಅವರ ಸಂದರ್ಶನವನ್ನು ಮಾಡಿ ಪ್ರಸ್ತುತಪಡಿಸಿದಳು. ತೆಲುಗು ಸಿನಿಮಾದ ಯಾವದೇ ನಟ-ನಟಿ ತಾಂತ್ರಿಕ ವರ್ಗದವರು ಈಕೆಯ ಸಂದರ್ಶನದಿಂದ ಇದುವರೆಗೆ ತಪ್ಪಿಸಿಕೊಂಡಿಲ್ಲ.

  Top anchor Suma Kanakala Remuneration per Show and Net worth Details

  ಪ್ರತಿ ಸ್ಟಾರ್ ನಟನ ಸಿನಿಮಾದ ಮ್ಯೂಸಿಕ್ ಇವೆಂಟ್ ಅಥವಾ ಶೋ ಇದ್ದರೆ ಅಲ್ಲಿ ಸುಮ ನಿರೂಪಣೆ ಕಡ್ಡಾಯ. ಏಕಕಾಲಕ್ಕೆ ಅತ್ತ ಚಾನಲ್ಗಳಲ್ಲಿ ಇತ್ತ ಈ ಮೆಂಟುಗಳಲ್ಲೂ ಮಿಂಚುತ್ತಿರುವ ಸುಮ ಪ್ರತಿ ಒಂದು ಶೋಗೆ ತೆಗೆದುಕೊಳ್ಳುವ ತೆಗೆದುಕೊಳ್ಳುವ ಫೀಸ್ ಸುಮಾರು 3 ಲಕ್ಷ.

  ಒಂದು ಹಾಡಿಗೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ತಮನ್ನಾಒಂದು ಹಾಡಿಗೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ತಮನ್ನಾ

  ಮಧ್ಯಮವರ್ಗದ ಒಂದು ಸಾಧಾರಣ ಹಿನ್ನೆಲೆಯಿಂದ ಬಂದ ಈ ಮಲಯಾಳಿ ಬೆಡಗಿ ಅಸಾಧಾರಣವಾದ ಪ್ರತಿಭೆಯಿಂದ ದೇಶದ ಅತಿದೊಡ್ಡ anchor ಗಳಲ್ಲಿ ಒಬ್ಬಳಾಗಿದ್ದಾಳೆ. ತೆಲುಗು ಮಲಯಾಳಂ ಜೊತೆಗೆ ಹಿಂದಿ ತಮಿಳು ಇಂಗ್ಲಿಷ್ ಸ್ಪ್ಯಾನಿಶ್ ಭಾಷೆಗಳ ಮೇಲೆ ಅದ್ಭುತವಾದ ಹಿಡಿತ ಹೊಂದಿದ್ದಾಳೆ. ಪೋಷಕನಟ ರಾಜೀವ್ ಕನಕಾಲನನ್ನು ಪ್ರೀತಿಸಿ ಮದುವೆಯಾಗಿರುವ ಸುಮಗೆ ಇಬ್ಬರು ಮಕ್ಕಳು. ಇತ್ತೀಚೆಗೆ ಗಂಡ-ಹೆಂಡತಿ ಬೇರೆ ಆಗುತ್ತಿದ್ದಾರೆ ಎಂಬ ರೂಮರ್ಸ್ ಕೂಡ ಹರಡಿತ್ತು. ಆದರೆ ಇದು ಕೇವಲ ಗಾಳಿಸುದ್ದಿ ಅಂತ ಹೇಳಿ ಗಂಡ-ಹೆಂಡತಿ ಇಬ್ಬರು ತಳ್ಳಿಹಾಕಿದ್ದಾರೆ.

  46ರ ಹರೆಯದಲ್ಲೂ 16 ಉತ್ಸಾಹ, ದಶಕಗಳೇ ಬದಲಾದರೂ ಇನ್ನೂ ಮಾಸದ ನಗು, ಆ ನಿರೂಪಣಾ ಶೈಲಿ. ತೆಲುಗು ಮನೆ ಮನೆಯಲ್ಲಿ ಅವಳಿಗೊಂದು ಸ್ಥಾನವನ್ನು ಕೊಟ್ಟಿದೆ. ಜೊತೆಗೆ ದಕ್ಷಿಣ ಭಾರತದ ಖ್ಯಾತ ನಿರೂಪಕಿ ಎಂಬ ಪಟ್ಟವನ್ನು ಆಕೆಯ ಕೈಯಲ್ಲಿ ಉಳಿಸಿದೆ.

  English summary
  South India top anchor Suma Kanakala Remuneration per Show and Net worth Details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X