For Quick Alerts
  ALLOW NOTIFICATIONS  
  For Daily Alerts

  ಮಕ್ಕಳ ನಗ್ನ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದ ನಟನ ಬಂಧನ

  |

  ಮಕ್ಕಳ ಮೇಲೆ ಲೈಂಗಿಕ ಹಿಂಸೆ ಎಂಬುದು ಪಿಡುಗಾಗಿ ಬೆಳೆಯುತ್ತಿದೆ. ಇಂದು ಒಬ್ಬ ನಟನನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿ ಬಂಧಿಸಲಾಗಿದೆ.

  ಮುಂಬೈನಲ್ಲಿ ಟಿವಿ ಧಾರಾವಾಹಿಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದ ವ್ಯಕ್ತಿಯನ್ನು ಮಕ್ಕಳ ಲೈಂಗಿಕ ಚಿತ್ರಗಳನ್ನು ಸಂಗ್ರಹಿಸುವುದು ಮಾರಾಟ ಮಾಡುವುದು, ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ ಆರೋಪದಲ್ಲಿ ಸಿಬಿಐ ಸಂಸ್ಥೆಯು ಬಂಧಿಸಿದೆ.

  ನಟ ಸುರೇಂದ್ರ ಹತ್ಯೆ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು

  ಮಕ್ಕಳನ್ನು ಅಥವಾ ಅಪ್ರಾಪ್ತರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುತ್ತಿದ್ದ ಧಾರಾವಾಹಿ ನಟ, ಅವರಿಂದ ಅವರ ಖಾಸಗಿ ಅಥವಾ ನಗ್ನ ಚಿತ್ರಗಳನ್ನು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದನಂತೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನ ವ್ಯಾಪ್ತಿಯನ್ನು ಹೊಂದಿದ್ದನೆಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

  ಸಾಮಾಜಿಕ ಜಾಲತಾಣದ ಮೂಲಕ ತರಿಸಿಕೊಳ್ಳುತ್ತಿದ್ದ ಅಪ್ರಾಪ್ತರ ನಗ್ನ ಚಿತ್ರಗಳು, ವಿಡಿಯೋಗಳನ್ನು ತನ್ನ 'ಗ್ರಾಹಕರಿ' ಮಾರಾಟ ಮಾಡುತ್ತಿದ್ದನಂತೆ ಈ ಸೈಕೋ ನಟ.

  ಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನ

  ಸುಮಾರು 1000 ಕ್ಕೂ ಹೆಚ್ಚು ಮಂದಿ ಅಪ್ರಾಪ್ತರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದನಂತೆ ಈ ನಟ. ಭಾರತದಲ್ಲಿ ವಿದೇಶದಲ್ಲಿ ಸಹ ಈತನಿಗೆ ಗ್ರಾಹಕರಿದ್ದರಂತೆ. ಆತನ ಗ್ರಾಹಕರನ್ನು ಸಹ ಬಂಧಿಸುವುದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಹರಿದ್ವಾರ ನಿವಾಸಿ ಆಗಿದ್ದ ಆತ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದನಂತೆ.

  English summary
  A TV actor arrested by CBI in Mumbai for running Child sexual abuse racket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X