For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ ಪ್ರಕರಣ: ಕಿರುತೆರೆಯ ಖ್ಯಾತ ನಟ ಗೌರವ್ ದೀಕ್ಷಿತ್ ಬಂಧನ

  |

  ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಕಿರುತೆರೆಯ ಖ್ಯಾತ ನಟ ಗೌರವ್ ದೀಕ್ಷಿತ್ ಅವರನ್ನು ಮುಂಬೈ ವಲಯದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ. ಚಿತ್ರರಂಗಕ್ಕೆ ಡ್ರಗ್ಸ್ ಲಿಂಕ್ ಪ್ರಕರಣ ಸಂಬಂಧ ಕಳೆದ ವರ್ಷದಿಂದ ಪೊಲೀಸರು ತನಿಖೆ ನಡೆಸುತ್ತಿದ್ದು, ಈಗಾಗಲೇ ಅನೇಕರನ್ನು ಬಂಧಿಸಿದ್ದಾರೆ. ಇನ್ನು ಕೆಲವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆಸಿರುವ ಮುಂಬೈ ಪೊಲೀಸರು ಇದೀಗ ಕಿರುತೆರೆ ನಟ ಗೌರವ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  ಈ ವರ್ಷದ ಏಪ್ರಿಲ್ ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ನಟ ಅಜಾಜ್ ಖಾನ್ ವಿಚಾರಣೆ ವೇಳೆ ಗೌರವ್ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ಪೊಲೀಸರು ಗೌರವ್ ಗಾಗಿ ಬಲೆ ಬೀಸಿದ್ದರು. ಗೌರವ್ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಅಪಾರ ಪ್ರಮಾಣದ ಮಾದಕದ್ರವ್ಯ ಪತ್ತೆಯಾಗಿತ್ತು. ಆದರೆ ಪೊಲೀಸರ ಕಂಡ ತಕ್ಷಣ ನಟ ಗೌರವ್ ಮತ್ತು ಆವರ ಸ್ನೇಹಿತರು ಓಡಿ ಹೋಗಿದ್ದರು. ಅಂದಿನಿಂದ ಮುಂಬೈ ಪೊಲೀಸರು ಗೌರವ್ ಗಾಗಿ ಹುಡುಕಾಟ ನಡೆಸುತ್ತಿದ್ದರು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

  Breaking: ರಕುಲ್, ರಾಣಾ, ರವಿತೇಜಗೆ ED ಇಲಾಖೆಯಿಂದ ಸಮನ್ಸ್Breaking: ರಕುಲ್, ರಾಣಾ, ರವಿತೇಜಗೆ ED ಇಲಾಖೆಯಿಂದ ಸಮನ್ಸ್

  ಗೌರವ್ ಅವರ ಅಂಧೇರಿಯ ಲೋಖಂಡವಾಲದಲ್ಲಿರುವ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎಂಡಿ ಮತ್ತು ಚರಸ್ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಳಿಕ ಗೌರವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್ ಸಿ ಬಿ, "ಟಿವಿ ನಟ ಗೌರವ್ ದೀಕ್ಷಿತ್ ಮನೆಯ ಮೇಲೆ ದಾಳಿ ನಡೆಸಿದಾಗ ಎಂಡಿ ಮತ್ತು ಚರಸ್ ಪತ್ತೆಯಾಗಿದೆ. ನಟ ಅಜಾಜ್ ಖಾನ್ ಅವರ ವಿಚಾರಣೆನೆ ಸಂಬಂಧಿಸಿದಂತೆ ಗೌರವ್ ನನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.

  ನಟ ಗೌರವ್ ಸಿನಿಮಾ, ಧಾರಾವಾಹಿ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದ್ದರು. ಗೌರವ್, ಹ್ಯಾಪಿ ಭಾಗ್ ಜಾಯೇಗಿ, ದಾಹೆಕ್: ಎ ರೆಸ್ಟ್ಲೆಸ್ ಮೈಂಡ್, ದಿ ಮ್ಯಾಜಿಕ್ ಆಫ್ ಸಿನಿಮಾ, ಗಂಗಾ ಕೇ ಪಾರ್ ಸಾಯನ್ ಹಮಾರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀತಾ ಔರ್ ಗೀತಾ ಎನ್ನುವ ಟಿವಿ ಕಾರ್ಯಕ್ರಮದಲ್ಲೂ ಗೌರವ್ ಕಾಣಿಸಿಕೊಂಡಿದ್ದರು.

  ಟಾಲಿವುಡ್ ಖ್ಯಾತ ಕಲಾವಿದರಿಗೆ ಸಮನ್ಸ್

  ಇನ್ನು ಡ್ರಗ್ಸ್ ಕೇಸ್‌ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ತೆಲುಗಿನ ಸ್ಟಾರ್ ಕಲಾವಿದರಿಗೆ ಜಾರಿ ನಿರ್ದೇಶನಾಲಯ (ED-Enforcement Directorate) ಸಮನ್ಸ್ ಜಾರಿ ಮಾಡಿದೆ ಎಂಬ ವಿಚಾರ ಹೊರಬಿದ್ದಿತ್ತು.

  ತೆಲುಗಿನ ಖ್ಯಾತ ಕಲಾವಿದರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪೂರಿ ಜಗನ್ನಾಥ್, ರವಿತೇಜ, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 12 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಬುಧವಾರ (ಆಗಸ್ಟ್ 25) ಸಮನ್ಸ್ ಜಾರಿ ಮಾಡಿತ್ತು ಎಂದು ವರದಿಯಾಗಿತ್ತು.

  ಪೂರಿ ಜಗನ್ನಾಥ್‌ಗೆ ಆಗಸ್ಟ್ 31 ರಂದು, ರಕುಲ್ ಪ್ರೀತ್ ಸಿಂಗ್‌ಗೆ ಸೆಪ್ಟೆಂಬರ್ 6, ರಾಣಾ ದಗ್ಗುಬಾಟಿಗೆ ಸೆಪ್ಟೆಂಬರ್ 8, ರವಿತೇಜಗೆ ಸೆಪ್ಟೆಂಬರ್ 9, ಮುಮೈತ್ ಖಾನ್‌ಗೆ ನವೆಂಬರ್ 15 ರಂದು ಹಾಗೂ ಚಾರ್ಮಿ ಕೌರ್ ಗೆ ಹಾಜರಾಗಲು ಸೂಚಿಸಲಾಗಿದೆ ಎಂದು ವರದಿಯಾಗಿದೆ. ಡ್ರಗ್ಸ್ ಪ್ರಕರಣದಲ್ಲಿ 2017ರಲ್ಲಿ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್ ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು. ಇಂಡಿಯಾ ಟುಡೆ ವರದಿ ಪ್ರಕಾರ, ಈ ಪ್ರಕರಣದಲ್ಲಿ ಸೆಲೆಬ್ರಿಟಿಗಳನ್ನು ಸಾಕ್ಷಿಯಾಗಿ ಕರೆಸಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

  English summary
  TV Actor Gaurav Dixit Arrested by NCB after recovering MD and Charas from his residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X