For Quick Alerts
  ALLOW NOTIFICATIONS  
  For Daily Alerts

  'ನನ್ನಮ್ಮ ಸೂಪರ್‌ಸ್ಟಾರ್' ಖ್ಯಾತಿಯ 6 ವರ್ಷ ಬಾಲಕಿ ಸಮನ್ವಿ ರಸ್ತೆ ಅಪಘಾತದಲ್ಲಿ ದುರ್ಮರಣ

  |

  ಹಲವು ವರ್ಷಗಳಿಂದ ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಅಮೃತಾ ನಾಯ್ಡು ಅವರ ಪುತ್ರಿ 6 ವರ್ಷ ಸಮನ್ವಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕನ್ನಡದ ಮನೋರಂಜನಾ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋ 'ನನ್ನಮ್ಮ ಸೂಪರ್‌ಸ್ಟಾರ್' ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಸಮನ್ವಿ ಹಾಗೂ ತಾಯಿ ಅಮೃತಾ ನಾಯ್ಡು ಅವರ ಜೋಡಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು.

  ರಿಯಾಲಿಟಿ ಶೋ ಚಿತ್ರೀಕರಣ ಮುಗಿಸಿ ಬೈಕಿನಲ್ಲಿ ತೆರಳುತ್ತಿದ್ದಾಗ, ಬೆಂಗಳೂರಿನ ಕೋಣನಕುಂಟೆ ಸಮೀಪ ಅಪಘಾತ ಸಂಭವಿಸಿದೆ. 6 ವರ್ಷದ ಬಾಲಕಿ ಸಮನ್ವಿ ಚಿಕ್ಕವಯಸ್ಸಿನಲ್ಲಿಯೇ ಕನ್ನಡಿಗರ ಜನಮನ ಗೆದ್ದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

  ಅಪಘಾತದಲ್ಲಿ ನನ್ನಮ್ಮ ಸೂಪರ್‌ಸ್ಟಾರ್ ಖ್ಯಾತಿಯ ಸಮನ್ವಿ ಸಾವು

  ನಟಿ ಅಮೃತಾ ನಾಯ್ಡು ಹಾಗೂ ಪುತ್ರಿ ಸಮನ್ವಿ ಇಬ್ಬರೂ 'ನನ್ನಮ್ಮ ಸೂಪರ್‌ಸ್ಟಾರ್' ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶೂಟಿಂಗ್ ಮುಗಿಸಿ ಸಂಜೆ ಬೈಕಿನಲ್ಲಿ ಅಮ್ಮ ಮತ್ತು ಮಗಳು ತೆರಳುತ್ತಿದ್ದರು. ಈ ವೇಳೆ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರೆಳುತ್ತಿದ್ದಾಗ, ಹಿಂದಿನಿಂದ ಬಂದ ಟಿಪ್ಪರ್ ಲಾಠಿ ಡಿಕ್ಕಿ ಹೊಡೆದಿದೆ. ಅಮೃತ ನಾಯ್ಡು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ 6 ವರ್ಷದ ಸಮನ್ವಿ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

  ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರು ತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಅದೇ ರಿಯಾಲಿಟಿ ಶೋ ಮುಗಿಸಿ ಮನಗೆ ತೆರಳುವಾಗ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ತಾಯಿ ಅಮೃತಾಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

  ಟಿಪ್ಪರ್ ಲಾರಿ ಚಾಲಕ ಪೊಲೀಸರ ವಶಕ್ಕೆ

  ಅಪಘಾತಕ್ಕೆ ಕಾರಣವಾದ ಟಿಪ್ಪರ್ ಲಾರಿ ಚಾಲಕನ ಕುಮಾರಸ್ವಾಮಿ ಲೇಔಟ್‌ನ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಈ ಪ್ರಕರಣ ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಮನ್ವಿ ಅಮ್ಮ ಹಲವು ವರ್ಷಗಳಿಂದ ಕನ್ನಡ ಪ್ರಸಿದ್ಧ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.

  English summary
  Nannamma Superstar Fame Samanvi Died in road accident and her mother TV actress Amrutha got injured after truck hit two wheeler in Bengaluru. Kumaraswamy swamy layout police arrest truck driver.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X