For Quick Alerts
  ALLOW NOTIFICATIONS  
  For Daily Alerts

  ಶ್ರೀಶಾಂತ್ ರನ್ನ ಹಿಂದಿಕ್ಕಿ 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿದ ನಟಿ ದೀಪಿಕಾ.!

  |

  ಹಿಂದಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-12' ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. 'ಬಿಗ್ ಬಾಸ್' ಹನ್ನೆರಡನೇ ಆವೃತ್ತಿಗೆ ನಿನ್ನೆ ರಾತ್ರಿ ತೆರೆಬಿದ್ದಿದ್ದು, ವಿಜೇತರಾಗಿ ಕಿರುತೆರೆ ನಟಿ ದೀಪಿಕಾ ಕಕ್ಕರ್ ಇಬ್ರಾಹಿಂ ಹೊರಹೊಮ್ಮಿದ್ದಾರೆ.

  ''ಮಾಜಿ ಕ್ರಿಕೆಟರ್ ಶ್ರೀಶಾಂತ್ 'ಬಿಗ್ ಬಾಸ್-12' ವಿನ್ನರ್ ಆಗುತ್ತಾರೆ'' ಎಂದೇ ಹಲವರು ಭಾವಿಸಿದ್ದರು. ಇನ್ನೂ ''ಶ್ರೀಶಾಂತ್ 'ಬಿಗ್ ಬಾಸ್-12' ಕಾರ್ಯಕ್ರಮದ ಫಿಕ್ಸ್ಡ್ ವಿನ್ನರ್'' ಎಂದು ಕೆಲವರು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದರು. ಆದ್ರೆ, ಶ್ರೀಶಾಂತ್ ರನ್ನೇ ಹಿಂದಕ್ಕಿ 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿದಿದ್ದಾರೆ ನಟಿ ದೀಪಿಕಾ ಕಕ್ಕರ್ ಇಬ್ರಾಹಿಂ.

  ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಗೆ ಹೆಚ್ಚು ಆಪ್ತರಾಗಿದ್ದದ್ದು ದೀಪಿಕಾ. ಶ್ರೀಶಾಂತ್ ಮತ್ತು ದೀಪಿಕಾ ಅಣ್ಣ-ತಂಗಿಯಾಗಿ 'ಬಿಗ್ ಬಾಸ್' ಮನೆಯಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ್ದರು. ಇದೇ ಅಣ್ಣ-ತಂಗಿ ಟಾಪ್ 2 ಹಂತ ತಲುಪಿದರು. ಅಂತಿಮವಾಗಿ ದೀಪಿಕಾ ಗೆಲುವಿನ ನಗೆ ಬೀರಿದರು. ಮುಂದೆ ಓದಿರಿ...

  'ಬಿಗ್ ಬಾಸ್' ಗೆದ್ದ ದೀಪಿಕಾ ಹಿನ್ನಲೆ..

  'ಬಿಗ್ ಬಾಸ್' ಗೆದ್ದ ದೀಪಿಕಾ ಹಿನ್ನಲೆ..

  ಕಲರ್ಸ್ ವಾಹಿನಿಯ ಜನಪ್ರಿಯ ಧಾರಾವಾಹಿ 'ಸಸುರಾಲ್ ಸಿಮರ್ ಕಾ'ದಲ್ಲಿ ಸಿಮರ್ ಪಾತ್ರ ನಿರ್ವಹಿಸುವ ಮೂಲಕ ದೀಪಿಕಾ ಕಕ್ಕರ್ ಮನೆ ಮಾತಾದರು. 'ಝಲಕ್ ದಿಖಲಾಜಾ-8', 'ನಚ್ ಬಲಿಯೇ-8' ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ದೀಪಿಕಾ ಕಕ್ಕರ್ ಭಾಗವಹಿಸಿದ್ದಾರೆ. ಇದೀಗ 'ಬಿಗ್ ಬಾಸ್' ಮೂಲಕ ದೀಪಿಕಾಗೆ ಜಯ ಸಿಕ್ಕಿದೆ.

  'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ತಲುಪಿರುವ ದೀಪಿಕಾ ಕಕ್ಕರ್ ಯಾರು.?

  ರನ್ನರ್ ಅಪ್ ಆದ ಶ್ರೀಶಾಂತ್

  ರನ್ನರ್ ಅಪ್ ಆದ ಶ್ರೀಶಾಂತ್

  'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ವಿವಾದಕ್ಕೀಡಾದ ಸ್ಪರ್ಧಿ ಮಾಜಿ ಕ್ರಿಕೆಟರ್ ಶ್ರೀಶಾಂತ್. 'ಬಿಗ್ ಬಾಸ್' ಮನೆಯಲ್ಲಿ ಪ್ರತಿ ದಿನ ಒಂದಲ್ಲಾ ಒಂದು ವಿಷಯಕ್ಕೆ ಸದ್ದು ಮಾಡುತ್ತಿದ್ದ ಶ್ರೀಶಾಂತ್ ವಿಜೇತರಾಗಬಹುದು ಎಂಬ ಲೆಕ್ಕಾಚಾರ ಇತ್ತು. ಆದ್ರೆ, 'ಬಿಗ್ ಬಾಸ್-12' ಟ್ರೋಫಿ ದೀಪಿಕಾ ಕೈಗೆ ಸೇರಿತು. ರನ್ನರ್ ಅಪ್ ಸ್ಥಾನಕ್ಕೆ ಶ್ರೀಶಾಂತ್ ತೃಪ್ತಿ ಪಟ್ಟುಕೊಂಡರು.

  ಮಾಸ್ಟರ್ ಮೈಂಡ್ ಶ್ರೀಶಾಂತ್ 'ಬಿಗ್ ಬಾಸ್-12' ಗೆಲ್ಲೋದು ಖಚಿತ.?

  ಮೂರನೇ ಸ್ಥಾನದಲ್ಲಿ ದೀಪಕ್ ಠಾಕೂರ್

  ಮೂರನೇ ಸ್ಥಾನದಲ್ಲಿ ದೀಪಕ್ ಠಾಕೂರ್

  ಬಿಹಾರ ಮೂಲದ ಗಾಯಕ, ಕಾಮನ್ ಮ್ಯಾನ್ ದೀಪಕ್ ಠಾಕೂರ್ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ದೀಪಿಕಾ ಮತ್ತು ಶ್ರೀಶಾಂತ್ ಗೆ ಹೋಲಿಸಿದರೆ, ದೀಪಕ್ ಗೆ ವೀಕ್ಷಕರ ಬೆಂಬಲ ಕಮ್ಮಿ ಇತ್ತು. ಇದರೊಂದಿಗೆ 20 ಲಕ್ಷ ಪಡೆದು ವಿನ್ನರ್ ರೇಸ್ ನಿಂದ ಹೊರಹೋಗುವ ಅವಕಾಶ ಸಿಕ್ಕಾಗ, ತಂಗಿ ಮದುವೆಯ ನೆಪವೊಡ್ಡಿ ದೀಪಕ್ ಠಾಕೂರ್ 20 ಲಕ್ಷದ ಬ್ರೀಫ್ ಕೇಸ್ ಹಿಡಿದುಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಬಂದರು.

  ಎಲ್ಲರಿಗೂ ಕಿರಿಕಿರಿ ಕೊಟ್ಟ ದೀಪಕ್ 'ಬಿಗ್ ಬಾಸ್' ಗೆಲ್ಲಲು ಸಾಧ್ಯವೇ.?

  ನಾಲ್ಕನೇ ಸ್ಥಾನದಲ್ಲಿ ರೋಮಿಲ್ ಚೌಧರಿ

  ನಾಲ್ಕನೇ ಸ್ಥಾನದಲ್ಲಿ ರೋಮಿಲ್ ಚೌಧರಿ

  ವೃತ್ತಿಯಲ್ಲಿ ವಕೀಲನಾಗಿರುವ ರೋಮಿಲ್ ಚೌಧರಿ 'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳ ವಿರುದ್ಧ ತೊಡೆ ತಟ್ಟಿದ್ದರು. ಇಂತಿಪ್ಪ ರೋಮಿಲ್ ಚೌಧರಿ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

  ಶ್ರೀಶಾಂತ್ ಎದುರು ತೊಡೆ ತಟ್ಟಿ ನಿಂತ ರೋಮಿಲ್ 'ಬಿಗ್ ಬಾಸ್' ಗೆಲ್ತಾರಾ.?

  ಐದನೇ ಸ್ಥಾನದಲ್ಲಿ ಕರಣ್ವೀರ್ ಬೋರಾ

  ಐದನೇ ಸ್ಥಾನದಲ್ಲಿ ಕರಣ್ವೀರ್ ಬೋರಾ

  ಕಿರುತೆರೆ ನಟ ಕರಣ್ವೀರ್ ಬೋರಾ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಮೂರನೇ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಟಾಪ್ 5 ಫೈನಲಿಸ್ಟ್ ಗಳ ಪೈಕಿ ಮೊದಲು 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿದ್ದು ಕರಣ್ವೀರ್ ಬೋರಾ.

  'ಬಿಗ್ ಬಾಸ್' ಮನೆಯ ಮಹಾನುಭಾವ ಕರಣ್ವೀರ್ ಬೋರಾ ಬಗ್ಗೆ ನಿಮಗೆಷ್ಟು ಗೊತ್ತು.?

  ವೀಕ್ಷಕರಿಗೆ ಖುಷಿಯೋ ಖುಷಿ

  ವೀಕ್ಷಕರಿಗೆ ಖುಷಿಯೋ ಖುಷಿ

  'ಬಿಗ್ ಬಾಸ್' ಮನೆಯಲ್ಲಿ ಯಾವುದೇ ವಿವಾದಕ್ಕೆ ಸಿಲುಕದೆ, ಅವಹೇಳನಕಾರಿಯಾಗಿ ಮಾತನಾಡದೆ, ತಾಳ್ಮೆ ಹಾಗೂ ಘನತೆ ಕಾಪಾಡಿಕೊಂಡಿದ್ದ ದೀಪಿಕಾ ಕಕ್ಕರ್ ವಿನ್ನರ್ ಆಗಿರುವುದು ವೀಕ್ಷಕರಿಗೆ ಸಂತಸ ನೀಡಿದೆ.

  ದೀಪಿಕಾ ಸಿಕ್ಕ ಬಹುಮಾನ ಎಷ್ಟು.?

  ದೀಪಿಕಾ ಸಿಕ್ಕ ಬಹುಮಾನ ಎಷ್ಟು.?

  ವಿನ್ನಿಂಗ್ ಅಮೌಂಟ್ ನಲ್ಲಿ 20 ಲಕ್ಷ ಪಡೆದು, ವಿನ್ನರ್ ರೇಸ್ ನಿಂದ ದೀಪಕ್ ಠಾಕೂರ್ ಹೊರಬಂದಿದ್ದರಿಂದ, ವಿಜೇತರಾದ ದೀಪಿಕಾ ಕಕ್ಕರ್ ಗೆ 30 ಲಕ್ಷ ರೂಪಾಯಿ ಬಹುಮಾನವಾಗಿ ಲಭಿಸಿದೆ. ಜೊತೆಗೆ 'ಬಿಗ್ ಬಾಸ್' ವಿಜೇತ ಟ್ರೋಫಿ ಕೂಡ ಅವರ ಪಾಲಾಗಿದೆ.

  English summary
  Dipika Kakar Ibrahim wins Bigg Boss 12 reality show. Dipika Kakar Ibrahim is an Indian Television Actress. She is best known for playing Simar in Sasural Simar Ka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X