»   » ಮಳವಳ್ಳಿ ಸಮೀಪ ಶವವಾಗಿ ದೊರೆತ ಟಿವಿ ನಟಿ ಸುಮಾ

ಮಳವಳ್ಳಿ ಸಮೀಪ ಶವವಾಗಿ ದೊರೆತ ಟಿವಿ ನಟಿ ಸುಮಾ

Posted By:
Subscribe to Filmibeat Kannada
TV actress Suma death case
ಕಿರುತೆರೆ ನಟಿ ಹೇಮಶ್ರೀ ಅನುಮಾನಾಸ್ಪದ ಸಾವಿನ ಬಳಿಕ ಮತ್ತೊಬ್ಬ ಕಿರುತೆರೆ ನಟಿ ಕೆಲದಿನಗಳ ಹಿಂದೆ ಶವವಾಗಿ ದೊರಕಿದ್ದರು. ಸ್ವಲ್ಪ ದಿನಗಳ ಕೆಳಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಆ ಶವ ಅರೆಬೆಂದ ಸ್ಥಿತಿಯಲ್ಲಿತ್ತು.

ಗುರುವಾರ (ಅ.17) ಈ ಶವ ನಿಟ್ಟೂರು ಬುಯ್ಯನದೊಡ್ಡಿ ರಸ್ತೆಯ ದೇವಿಕೆರೆ ಹಳ್ಳದಲ್ಲಿ ಪತ್ತೆಯಾಗಿದೆ. ಈ ಶವ ಕಿರುತೆರೆ ನಟಿ ಸುಮಾ ಅವರದು ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಸದ್ಯಕ್ಕೆ ಈತನನ್ನು ಮಳವಳ್ಳಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಕೆ.ಆರ್.ಪೇಟೆ ಮೂಲದ ಸುಮಾ (22) ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದರು. ಈಕೆಯ ಕಾರು ಚಾಲಕ ಗುರುರಾಜ್ ಅಲಿಯಾಸ್ ಗುರು ಕೊಲೆ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಪ್ರೀತಿ ಮತ್ತು ಹಣವೇ ಸುಮಾ ಅವರ ಕೊಲೆಗೆ ಕಾರಣ ಎನ್ನಲಾಗಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕನಕಪುರ ತಾಲೂಕಿನ ಎಚ್.ಎಸ್.ವಿಜಯ್ ಹಾಗೂ ಸುನೀಲ್ ಎಂಬ ಆರೋಪಿಗಳನ್ನು ಬೆಂಗಳೂರಿನ ಗಣಪತಿಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಈಗ ಬಂಧಿಸಿರುವ ವಿಜಯ್ ಹಾಗೂ ಸುನೀಲ್ ಬಳಿ ಸುಮಾರ ಮೊಬೈಲ್ ಹಾಗೂ ಆರೋಪಿಯ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ಹತ್ಯೆಗೆ ಬಳಸಲಾಗಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅನುಮಾನಾಸ್ಪದವಾಗಿ ಕಾರು ಸುತ್ತಾಡಿದ ಜಾಡನ್ನು ಹಿಡಿದು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಗಂಡನಿಂದ ದೂರವಾಗಿದ್ದ ಸುಮಾ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಕೆಲವರ್ಷಗಳಿಂದ ಸುಮಾರನ್ನು ವಿಜಯ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇವರಿಬ್ಬರ ನಡುವೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಸುಮಾ ಅವರು 'ಅತಿಥಿಗಳು' ಎಂಬ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. (ಏಜೆನ್ಸೀಸ್)

English summary
Kannada small screen actress Suma (22) found dead near Malavalli taluk. Her body was found in underdone condition. Police said the body was identified as tv actress Suma. Still now three persons are arrested by police.
Please Wait while comments are loading...