For Quick Alerts
  ALLOW NOTIFICATIONS  
  For Daily Alerts

  ಕನ್ನಡಿಗರ ಮನಗೆದ್ದ 'ಹೊಂಗನಸು' ಬೆಡಗಿ ರಕ್ಷಾ ಗೌಡ

  By ಪ್ರಿಯಾ ದೊರೆ
  |

  ತೆಲುಗಿನ ಸಾಕಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ಕನ್ನಡದ ನಟ-ನಟಿಯರೇ ಹೆಚ್ಚು ಮಿಂಚುತ್ತಿದ್ದಾರೆ. ಕನ್ನಡದ ಕೆಲವೇ ಕೆಲವು ಸೀರಿಯಲ್‌ಗಳಲ್ಲಿ ನಟಿಸಿ, ನಂತರ ಒಳ್ಳೆಯ ಆಫರ್ ಸಿಕ್ಕಿತು ಎಂದು ಪರಭಾಷೆಗಳಲ್ಲಿ ನಟಿಸುತ್ತಾರೆ. ಇದೀಗ 'ಹೊಂಗನಸು' ಧಾರಾವಾಹಿಯ ನಟಿ ರಕ್ಷಾ ಗೌಡ ಕೂಡ ತೆಲುಗಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.

  'ಹೊಂಗನಸು' ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡಿರುವ ರಕ್ಷಾ ಗೌಡ ಅವರು ಕನ್ನಡದವರೇ. ಕನ್ನಡದ ಒಂದೆರಡು ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಒಳ್ಳೆಯ ಅವಕಾಶ ಸಿಕ್ಕಿತು ಎಂದು ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿನ ಧಾರಾವಾಹಿಯೊಂದರಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

  ಬಿಗ್‌ ಬಾಸ್‌ನಲ್ಲಿ ಬೈಕರ್ ಐಶ್ವರ್ಯಾ ಪಿಸೆ: ಕಿಚ್ಚ ಸುದೀಪ್‌ ಕೂಡ ಮೆಚ್ಚಿರುವ ಇವರ ಸಾಧನೆಗಳೇನು..?ಬಿಗ್‌ ಬಾಸ್‌ನಲ್ಲಿ ಬೈಕರ್ ಐಶ್ವರ್ಯಾ ಪಿಸೆ: ಕಿಚ್ಚ ಸುದೀಪ್‌ ಕೂಡ ಮೆಚ್ಚಿರುವ ಇವರ ಸಾಧನೆಗಳೇನು..?

  ಆ ಧಾರಾವಾಹಿ ಕನ್ನಡಕ್ಕೂ ಡಬ್ ಆಗಿದೆ. ಈಗ ರಕ್ಷಾ ಗೌಡ ಕನ್ನಡ ಕಿರುತೆರೆಯಲ್ಲೂ ಇದ್ದು, ಪ್ರೇಕ್ಷಕರ ಮನ ಗೆದ್ದಿದ್ದಾರೆ. ಒಂದೇ ಧಾರಾವಾಹಿಯಿಂದಲೇ ತೆಲುಗು ಹಾಗೂ ಕನ್ನಡದ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ರಕ್ಷಾ ಗೌಡ ಯಾರು ಎಂದು ತಿಳಿಯೋಣ ಬನ್ನಿ.

   ತೆಲುಗಿನ ಧಾರಾವಾಹಿ ಕನ್ನಡದಲ್ಲಿ ಫೇಮಸ್

  ತೆಲುಗಿನ ಧಾರಾವಾಹಿ ಕನ್ನಡದಲ್ಲಿ ಫೇಮಸ್

  ಕನ್ನಡದ ಹಲವು ಧಾರಾವಾಹಿಗಳು ಪ್ರೇಕ್ಷಕರ ಮನ ಗೆದ್ದಿವೆ. ಕೆಲ ಧಾರಾವಾಹಿಗಳು ಕಥೆ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರೆ, ಮತ್ತೆ ಕೆಲವು ಧಾರಾವಾಹಿಯಲ್ಲಿನ ಪಾತ್ರಧಾರಿಗಳು ಹಾಗೂ ಅವರ ನಟನಾ ಶೈಲಿಯಿಂದ ಸಕ್ಸಸ್ ಕಾಣುತ್ತವೆ. ಸಾಮಾನ್ಯವಾಗಿ ಸಂಜೆ ಆರಂಭವಾಗುವ ಧಾರಾವಾಹಿಗಳನ್ನು ನೋಡುವವರೇ ಹೆಚ್ಚು. ಆದರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ ಪ್ರಸಾರವಾಗುವ 'ಹೊಂಗನಸು' ಧಾರಾವಾಹಿ ಕೂಡ ಪ್ರೇಕ್ಷಕರ ಮೆಚ್ಚಿನ ಧಾರಾವಾಹಿಯಾಗಿದೆ. ಇದರಲ್ಲಿನ ಕಥೆಯೂ ಚೆನ್ನಾಗಿದ್ದು, ನಾಯಕಿ ಪಾತ್ರಧಾರಿಯೂ ಪ್ರೇಕ್ಷಕರಿಗೆ ಫೇವರಿಟ್. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ 'ಹೊಂಗನಸು' ಅನೇಕ ಟ್ವಿಸ್ಟ್ ಅಂಡ್ ಟರ್ನ್‌ಗಳಿಂದ ಕೂಡಿದೆ.

  Comedy Khiladigalu Season 4: ರಾಘವೇಂದ್ರ ಆಚಾರ್ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ವೇದಿಕೆ!Comedy Khiladigalu Season 4: ರಾಘವೇಂದ್ರ ಆಚಾರ್ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ವೇದಿಕೆ!

   ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ

  ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ

  ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಬಿಬಿಎ ಓದಿರುವ ರಕ್ಷಾ ಗೌಡ ಅವರಿಗೆ ಬಣ್ಣದಲೋಕದ ಆಸೆ ಇರಲಿಲ್ಲ. ಎಂದಿಗೂ ಊಹೆಯೂ ಮಾಡಿಕೊಂಡಿರಲಿಲ್ಲ. ಆದರೆ ಕಾಲೇಜಿನಲ್ಲಿ ಓದುವಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಇನ್ನು ನಟನೆ ಮಾಡುವ ಯಾವುದೇ ಆಸೆ ಇಲ್ಲದೇ ಇದ್ದರೂ, ಸ್ನೇಹಿತರು ಈಕೆಯ ಫೋಟೋವನ್ನು ಧಾರಾವಾಹಿಯವರಿಗೆ ಕೊಟ್ಟಿದ್ದರು. ಗುಂಡು ಮುಖದ ರಕ್ಷಾ ಅವರನ್ನು ನೋಡಿ 'ರಾಧಾರಮಣ' ಧಾರಾವಾಹಿಗೆ ಅನ್ವಿತಾ ಆಗಿ ನಟಿಸಲು ಆರಂಭಿಸಿದರು. ಮೊದಮೊದಲು ಕ್ಯಾಮರಾ ಫೇಸ್ ಮಾಡಲು ಕಷ್ಟ ಪಡುತ್ತಿದ್ದ ರಕ್ಷಾ ಅವರಿಗೆ ಈಗ ಆ ಕ್ಯಾಮರಾವೇ ಬೆಸ್ಟ್ ಫ್ರೆಂಡ್ ಆಗಿಬಿಟ್ಟಿದೆ.

   ಮಿಸ್ ಯೂನಿವರ್ಸ್ ಸ್ಪರ್ಧೆಗೂ ಸ್ಪರ್ಧೆ

  ಮಿಸ್ ಯೂನಿವರ್ಸ್ ಸ್ಪರ್ಧೆಗೂ ಸ್ಪರ್ಧೆ

  ಚಿಕ್ಕಂದಿನಿಂದಲೂ ಮಾಡೆಲೆಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ರಕ್ಷಾ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಕ್ಷಾ, ಕಾಲೇಜು ದಿನಗಳಲ್ಲಿ ಸಣ್ಣ-ಪುಟ್ಟ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್ ಮಾಡುತ್ತಿದ್ದರು. ಕೆಲ ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಿಗೂ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು, ಸಮಯ ಸಿಕ್ಕಾಗ ಡ್ಯಾನ್ಸ್ ಮತ್ತು ಪೇಂಟಿಂಗ್ ಮಾಡುತ್ತಿರುತ್ತಾರೆ. ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ ಎರಡು ಮುಕ್ಕಾಲು ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ.

  ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಆಗಮಿಸಿರುವ 9 ಮಂದಿ 'ನವೀನರು' ಯಾರು, ಅವರ ಹಿನ್ನೆಲೆಯೇನು?ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಆಗಮಿಸಿರುವ 9 ಮಂದಿ 'ನವೀನರು' ಯಾರು, ಅವರ ಹಿನ್ನೆಲೆಯೇನು?

   'ಗುಪ್ಪೆಡಂತ ಮನಸು' ಕನ್ನಡದಲ್ಲಿ 'ಹೊಂಗನಸು'

  'ಗುಪ್ಪೆಡಂತ ಮನಸು' ಕನ್ನಡದಲ್ಲಿ 'ಹೊಂಗನಸು'

  ರಕ್ಷಾ ಗೌಡ ಅವರು 'ರಾಧಾ ರಮಣ' ನಂತರ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಟಿಸಿದರು. ಬಳಿಕ 'ಕೃಷ್ಣವೇಣಿ' ಎಂಬ ಸೀರಿಯಲ್ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ಇದೀಗ ತೆಲುಗಿನ 'ಗುಪ್ಪೆಡಂತ ಮನಸು' ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಈಗ ಸ್ಟಾರ್ ಸುವರ್ಣವಾಹಿನಿಯಲ್ಲಿ 'ಹೊಂಗನಸು' ಹೆಸರಿನಲ್ಲಿ ಡಬ್ ಆಗಿ ಪ್ರಸಾರವಾಗುತ್ತಿದೆ. ತೆಲುಗಿನಲ್ಲಿ ರಕ್ಷಾ ಅವರನ್ನು ಇಷ್ಟಪಟ್ಟಂತೆಯೇ ಕನ್ನಡದಲ್ಲೂ ಇವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

  English summary
  Actress raksha gowda serials and her personal life. She acted in kannada and telugu serials.
  Monday, September 26, 2022, 20:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X