»   » ಮನರಂಜನಾ ಲೋಕಕ್ಕೆ ಮತ್ತೆರಡು ಚಾನಲ್ ಲಗ್ಗೆ

ಮನರಂಜನಾ ಲೋಕಕ್ಕೆ ಮತ್ತೆರಡು ಚಾನಲ್ ಲಗ್ಗೆ

Posted By: ಜೀವನರಸಿಕ
Subscribe to Filmibeat Kannada

ಕನ್ನಡದ ಮನರಂಜನಾ ಲೋಕ ವಿಸ್ತಾರ ಪಡೆದುಕೊಳ್ಳುತ್ತಿದೆ. ಹಿಂದಿಯಲ್ಲಿ ಹೇಗೆ ಮ್ಯೂಸಿಕ್ ಗಾಗೀಯೇ ಹತ್ತಾರು ಚಾನೆಲ್ ಗಳಿವೆಯೋ ಹಾಗೇ ಕನ್ನಡದಲ್ಲೂ ಒಂದೊಂದಾಗಿ ಸಂಗೀತ ವಾಹಿನಿಗಳು ಸಂಗೀತದ ಸುಧೆ ಹರಿಸಲಿವೆ. ಹಾಗಂತ ಈ ಸಂಗೀತ ವಾಹಿನಿಗಳು ಹೊರಗಿನವರ ಒಡೆತನದ ಚಾನೆಲ್ ಗಳಲ್ಲ. ಇಲ್ಲಿ ಕನ್ನಡದವರದ್ದೇ ಕಮಾಲ್.

ಸದ್ಯದಲ್ಲೇ ಅನಿತಾ ಕುಮಾರಸ್ವಾಮಿಯವರ ಒಡೆತನದ ಕಸ್ತೂರಿ ಸಂಸ್ಥೆಯಿಂದ ಮ್ಯೂಸಿಕ್ ಚಾನೆಲ್ ಶುರುವಾಗಲಿದೆ. ಪ್ರಸ್ತುತ ಕಸ್ತೂರಿ ನ್ಯೂಜ್ 24 ಮತ್ತು ಕಸ್ತೂರಿ ಮನೋರಂಜನಾ ವಾಹಿನಿಯನ್ನ ಹೊಂದಿರೋ ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಈಗ ಮತ್ತೊಂದು ವಾಹಿನಿಯನ್ನ ಶುರುಮಾಡ್ತಿದ್ದು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. [ಪಬ್ಲಿಕ್ ಟಿವಿಯಿಂದ ಇನ್ನೊಂದು ಚಾನಲ್]

New music channels

ಇತ್ತೀಚೆಗೆ ಅಣ್ಣಾ ಹಜಾರೆಯವರ ಉಪಸ್ಥಿತಿಯಲ್ಲಿ ಯಶಸ್ವೀ ಎರಡನೇ ವರ್ಷದ ಸಂಭ್ರಮವನ್ನ ಆಚರಿಸಿದ ಪಬ್ಲಿಕ್ ಟಿವಿ ಕೂಡ ಮತ್ತೊಂದು ಚಾನೆಲ್ ನ ಸದ್ಯದಲ್ಲೇ ಆರಂಭಿಸುವ ಸೂಚನೆ ಕೊಟ್ಟಿದೆ. ನ್ಯೂಸ್ ಚಾನೆಲ್ ಗಳಲ್ಲಿ ಬಹಳ ಬೇಗ ಉನ್ನತಿಗೇರಿದ ಪಬ್ಲಿಕ್ ಟಿವಿ ಮ್ಯೂಸಿಕ್ ಚಾನೆಲ್ ಮೂಲಕ ಮನೋರಂಜನಾ ಲೋಕಕ್ಕೂ ಲಗ್ಗೆ ಇಡ್ತಿದೆ.

ಈ ಮೂಲಕ ಪ್ರೇಕ್ಷಕರಿಗೆ ಕೈ ಬೆರಳ ತುದಿಯಲ್ಲಿ ಆಯ್ಕೆಗಳು ಹೆಚ್ಚಾಗಲಿವೆ. ಆದರೆ ಅಂತೀಮವಾಗಿ ಎಷ್ಟೇ ಚಾನೆಲ್ ಗಳು ಬಂದರೂ ಯಾರು ಗುಣಮಟ್ಟವನ್ನ ಕಾಪಾಡಿಕೊಳ್ತಾರೋ ಅವರೇ ಯಶಸ್ವಿಯಾಗ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್.

ಸದ್ಯಕ್ಕೆ ಕನ್ನಡದಲ್ಲಿ ಎರಡು ಮ್ಯೂಸಿಕ್ ಚಾನಲ್ ಗಳಿವೆ. ಒಂದು ಉದಯ ಮ್ಯೂಸಿಕ್ ಹಾಗೂ ರಾಜ್ ಮ್ಯೂಸಿಕ್. ಕನ್ನಡದಲ್ಲಿ ಈಗಿರುವ ಮ್ಯೂಸಿಕ್ ಚಾನಲ್ ಗಳಿಗಿಂತ ಭಿನ್ನವಾಗಿ ಪಬ್ಲಿಕ್ ಮ್ಯೂಸಿಕ್ ಚಾನಲ್ ಬರುತ್ತಿದೆ.

ಪಬ್ಲಿಕ್ ಟಿವಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಆರ್ ರಂಗನಾಥ್ ಅವರು ಮಾತನಾಡುತ್ತಾ, ನಮ್ಮ ಮ್ಯೂಸಿಕ್ ಚಾನಲ್ ನ ನಿಲುವು ಹಾಗೂ ಉದ್ದೇಶಗಳು ವಿಭಿನ್ನವಾಗಿರುತ್ತದೆ. ಮುಖ್ಯವಾಗಿ ನಾವು ಯುವ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಹೊಸ ಚಾನಲ್ ಆರಂಭಿಸುತ್ತಿದ್ದೇವೆ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Kannada news channels Public TV and Kasturi Newz 24 plans separately to launch two 24-hour Kannada music channel soon. At present there are only two Kannada music channel in Karnataka, viz. Udaya Music and Raj Musix Kannada.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X