»   » 'ಉದಯ ಸಿಂಗರ್ ಜೂನಿಯರ್ಸ್' ರಿಯಾಲಿಟಿ ಶೋ ಆಡಿಷನ್ಸ್ ವಿವರ

'ಉದಯ ಸಿಂಗರ್ ಜೂನಿಯರ್ಸ್' ರಿಯಾಲಿಟಿ ಶೋ ಆಡಿಷನ್ಸ್ ವಿವರ

Posted By:
Subscribe to Filmibeat Kannada

ನಾಲ್ಕು ವರ್ಷಗಳ ಬಳಿಕ ಮತ್ತೆ ಗಾಯನದ ರಿಯಾಲಿಟಿ ಶೋ ಒಂದನ್ನ ಉದಯ ಟಿವಿ ಆರಂಭಿಸಲಿದೆ. ಇದಕ್ಕಾಗಿ ಅಕ್ಟೋಬರ್ 14 ರಂದು ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ, ಅಕ್ಟೋಬರ್ 15 ರಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ (ಆಡಿಷನ್ಸ್) ನಡೆಯಲಿದೆ.

ಉತ್ತಮ ಹಾಡುಗಾರಿಕೆ ಮತ್ತು ವಾಕ್ ಚಾತುರ್ಯ ಹೊಂದಿರುವ 5 ರಿಂದ 13 ವರ್ಷ ವಯಸ್ಸಿನ ಮಕ್ಕಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯುವ ಆಡಿಷನ್ ನಲ್ಲಿ ಭಾಗವಹಿಸಬಹುದು.

Udaya Singer Juniors Auditions on Oct 14th and 15th

ಆಡಿಷನ್ಸ್ ನಡೆಯುವ ದಿನಾಂಕ ಮತ್ತು ಸ್ಥಳ:

ಅಕ್ಟೋಬರ್ 14

ಹುಬ್ಬಳ್ಳಿ: ಶಾಂತಾಬಾಯಿ ದಿವಟೆ ಕಲ್ಯಾಣ ಮಂಟಪ, ಕೇಶ್ವಾಪೂರ ಮುಖ್ಯರಸ್ತೆ, ಹುಬ್ಬಳ್ಳಿ

ಉಡುಪಿ: ಸೇಂಟ್ ಮೇರಿ ಸಿರಿಯನ್ ಕಾಲೇಜ್ ನ್ಯೂ ಆಡಿಟೋರಿಯಮ್, ಎಸ್.ಎಮ್.ಎಸ್ ಚರ್ಚ್ ಹತ್ತಿರ, ಉಡುಪಿ

ಅಕ್ಟೋಬರ್ 15

ಮೈಸೂರು: ಶಾರದಾ ವಿಲಾಸ ಕಾಲೇಜ್, ಕೃಷ್ಣಮೂರ್ತಿಪುರಂ, ಮೈಸೂರು

ಬೆಂಗಳೂರು: ಉದಯಭಾನು ಕಲಾಸಂಘ, ಗವಿಪುರಂ ಚೌಟ್ರಿ ಎದುರು, ಕೆಂಪೇಗೌಡನಗರ, ಬೆಂಗಳೂರು

English summary
Udaya TV is coming up with a kids Singing reality show 'Udaya Singer Juniors' for the age group of 5-13years. Audition will be held in Udupi and Hubli on 14th October, Saturday and Mysore and Bangalore on 15th October, Sunday between 9am-5pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada