For Quick Alerts
  ALLOW NOTIFICATIONS  
  For Daily Alerts

  ಉದಯ ಚಲನಚಿತ್ರ ಪ್ರಶಸ್ತಿ 2013, ಡೋಂಟ್ ಮಿಸ್

  By Rajendra
  |
  ಸನ್ ನೆಟ್ ವರ್ಕ್ ಒಡೆತನದ ಉದಯ ಟಿವಿ ಚಲನಚಿತ್ರ ಪ್ರಶಸ್ತಿ 2013ರ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕನ್ನಡ ಮನರಂಜನಾ ಟಿವಿ ವಾಹಿನಿಗಳಲ್ಲಿ ಮುಂಚೂಣಿಯಲ್ಲಿರುವ ಉದಯ ಟಿವಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.

  ಈ ಬಾರಿಯ ಕಾರ್ಯಕ್ರಮ ಇದೇ ಭಾನುವಾರ (ಮಾ.3)ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಬೆಂಗಳೂರು ಅರಮನೆ ಮೈದಾನದ ಕೃಷ್ಣ ವಿಹಾರ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಒಟ್ಟು 26 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

  ಈ ಬಾರಿ ಉದಯ ಹಸಿರು ಎಂಬ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ನಾಲ್ಕು ಕಿ.ಮೀ ಉದ್ದಳತೆಯಲ್ಲಿ 284 ಆಲದ ಮರಗಳನ್ನು ಮಕ್ಕಳಂತೆ ಬೆಳೆಸಿ ಹಸಿರುಕ್ರಾಂತಿ ಮಾಡಿದ ಸಾಲುಮರದ ತಿಮ್ಮಕ್ಕ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಕನ್ನಡ ಚಿತ್ರಗಳ ನಟ, ನಿರ್ಮಾಪಕ, ನಿರ್ದೇಶಕ ಪ್ರಚಂಡ ಕುಳ್ಳ ಖ್ಯಾತಿಯ ದ್ವಾರಕೀಶ್ ಹಾಗೂ ಅಭಿನೇತ್ರಿ ಡಾ.ಜಯಮಾಲಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸಾಂಸ್ಕೃತಿಕ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮ ನಡೆಯಲಿದೆ.

  ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಆರ್ ಅಶೋಕ್, ಕೆಎಸ್ ಈಶ್ವರಪ್ಪ ಹಾಗೂ ಅಂಬರೀಶ್, ಫಿಲಂ ಚೇಂಬರ್ ಅಧ್ಯಕ್ಷ ವಿಜಯ್ ಕುಮಾರ್, ನಿರ್ಮಾಪಕ ಮುನಿರತ್ನ, ನಿರ್ದೇಶಕ ಎಂ.ಎಸ್.ರಮೇಶ್ ಉಪಸ್ಥಿತಿ ಇರುತ್ತದೆ. ಕಾರ್ಯಕ್ರಮದ ಪ್ರಾಯೋಜಕರು ಸ್ಯಾಂಸಂಗ್ ಗ್ಯಾಲಕ್ಸಿ ಗ್ರ್ಯಾಂಡ್. (ಒನ್ಇಂಡಿಯಾ ಕನ್ನಡ)

  English summary
  Kannada entertainment channel Udaya TV has announced the prominent awards and 2013 Kannada film awards nominations to the 26 categories. The glittering function held on Sunday (3rd March) evening at 6pm at Krishna Vihara, Bangalore Palace.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X