»   » ಉದಯ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ

ಉದಯ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ

Posted By:
Subscribe to Filmibeat Kannada
Udaya TV reality show
ಈಗ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಜಮಾನ. ಉದಯ ವಾಹಿನಿ ಅಪರೂಪದ ರಿಯಾಲಿಟಿ ಶೋ ಆರಂಭಿಸಲು ಸಿದ್ಧವಾಗುತ್ತಿದೆ. ಇದೊಂದು ವಿಕಲಚೇತನರಿಗೆಂದೇ ರೂಪಗೊಳ್ಳುತ್ತಿರುವ ಶೋ.

ಪ್ರಣಯರಾಜ ಶ್ರೀನಾಥ್ ಈ ಶೋ ನಿರೂಪಕರು. ವಿಕಲಚೇತನರಲ್ಲಿನ ಅಪ್ಪಟ ಪ್ರತಿಭೆಯನ್ನು ಗುರುತಿಸುವುದೇ ಈ ಶೋನ ವಿಶೇಷ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಕೇವಲ ಕರ್ನಾಟಕದಲ್ಲಿ ನೆಲೆಸಿರುವವರಷ್ಟೇ ಅಲ್ಲ. ಜಗತ್ತಿನಾದ್ಯಂತ ನೆಲೆಸಿರುವ ವಿಕಲಚೇತನ ಕನ್ನಡಿಗರು ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೆ ಆಡಿಷನ್ ಆರಂಭವಾಗಿದ್ದು ಜೂನ್ ತಿಂಗಳಲ್ಲಿ ಈ ರಿಯಾಲಿಟಿ ಶೋ ಆರಂಭವಾಗಲಿದೆ. ವಿಕಲಚೇತನರಲ್ಲಿ ಹೊಸ ಚೈತನ್ಯ ತುಂಬುವುದೇ ಈ ರಿಯಾಲಿಟಿ ಶೋನ ಉದ್ದೇಶ ಎನ್ನುತ್ತವೆ ವಾಹಿನಿ ಮೂಲಗಳು.

ಈ ಹಿಂದೆ ಉದಯ ವಾಹಿನಿಯಲ್ಲಿ ಹಲವಾರು ರಿಯಾಲಿಟಿ ಶೋಗಳು ಮೂಡಿಬಂದಿದ್ದವು. "ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೋಡೀರಿ" ಕಾರ್ಯಕ್ರಮವನ್ನು ಜಗ್ಗೇಶ್ ನಡೆಸಿಕೊಟ್ಟಿದ್ದಾರೆ. ಈಗ 'ಉದಯ ಸಿಂಗರ್' ಎಂಬ ರಿಯಾಲಿಟಿ ಶೋ ಮೂಡಿಬರುತ್ತಿದೆ. ಈಗ ಮತ್ತೊಂದು ಅಪರೂಪದ ರಿಯಾಲಿಟಿ ಶೋಗೆ ಉದಯ ವಾಹಿನಿ ತಯಾರಾಗುತ್ತಿದೆ.

ಇನ್ನೊಂದು ಕಡೆ ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಹಾಗೂ ಈಟಿವಿ ಕನ್ನಡದ 'ಬಿಗ್ ಬಾಸ್' ರಿಯಾಲಿಟಿ ಶೋಗಳಿಗೆ ಪೈಪೋಟಿ ನೀಡುವಂತಹ ಶೋಗಳು ಬೇರೆ ಮನರಂಜನಾ ವಾಹಿನಿಗಳಲ್ಲಿ ಇಲ್ಲದಿರುವುದು ವಾಹಿನಿಗಳ ನಡುವೆ ಅಗಾದ ಕಂದಕವನ್ನು ಸೃಷ್ಟಿಸಿವೆ. (ಏಜೆನ್ಸೀಸ್)

English summary
Kannada general entertainment channel Udaya TV soon to launch a reality show for physically challenged. The show will hosted by Pranada Raja Srinath. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada