»   » ಶರಣ್, ಶ್ರುತಿ ತಾಯಿ ರುಕ್ಮಿಣಿ 'ಕೈರುಚಿ' ನೋಡುವ ಭಾಗ್ಯ ನಿಮ್ಮದು.!

ಶರಣ್, ಶ್ರುತಿ ತಾಯಿ ರುಕ್ಮಿಣಿ 'ಕೈರುಚಿ' ನೋಡುವ ಭಾಗ್ಯ ನಿಮ್ಮದು.!

Posted By:
Subscribe to Filmibeat Kannada

ಕನ್ನಡದ ಮೊಟ್ಟ ಮೊದಲ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ಆಗಸ್ಟ್ 28 ರಿಂದ ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12 ಗಂಟೆಗೆ 'ಕೈರುಚಿ' ಎಂಬ ಹೊಚ್ಚ ಹೊಸ ಅಡುಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಇಲ್ಲಿಯವರೆಗೂ ಹತ್ತಾರು ಅಡುಗೆ ಕಾರ್ಯಕ್ರಮಗಳು ಬಂದಿದ್ದರೂ, ಅವೆಲ್ಲಕ್ಕಿಂತ 'ಕೈರುಚಿ' ಸ್ವಲ್ಪ ವಿಭಿನ್ನ. 'ಕೈರುಚಿ' ಕಾರ್ಯಕ್ರಮದ ಪ್ರತಿಯೊಂದು ಸಂಚಿಕೆಯಲ್ಲೂ ಮೂರು ವಿಭಾಗಗಳಿದ್ದು ಪ್ರತಿಯೊಂದು ವಿಭಾಗವೂ ವೈಶಿಷ್ಟ್ಯ ಪೂರ್ಣವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕಿಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಿ, ಅವರ ಕೈಯಿಂದಲೇ ವಿಶೇಷ ಖಾದ್ಯಗಳನ್ನು ಮಾಡಿಸಲಾಗುವುದು. ಮುಂದೆ ಓದಿರಿ...

ರುಕ್ಮಿಣಿ 'ಕೈರುಚಿ'

ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಹಾಗೂ ಪ್ರತಿಭಾನ್ವಿತ ಕಲಾವಿದೆ ಶ್ರುತಿಯವರ ತಾಯಿಯಾದ ಶ್ರೀಮತಿ ರುಕ್ಮಿಣಿಯವರು ಹಳ್ಳಿ ಸೊಗಡಿರುವ ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರವಾದ ಅಡುಗೆಯನ್ನು 'ಕೈರುಚಿ' ಕಾರ್ಯಕ್ರಮದಲ್ಲಿ ಮಾಡಿ ತೋರಿಸುತ್ತಾರೆ. ಈ ಅಜ್ಜಿ ಕೈರುಚಿಯನ್ನು ಸವಿಯಲು ಹಿರಿತೆರೆ ಹಾಗೂ ಕಿರುತೆರೆಯ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಆಯುರ್ವೇದದ ಬಗ್ಗೆ ಮಾಹಿತಿ

ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ಮನೆ ಮದ್ದಿನ ಬಗ್ಗೆ ಉಪಯುಕ್ತವಾದ ಸಲಹೆಯನ್ನು ವೀಕ್ಷಕರಿಗೆ ತಿಳಿಸಿಕೊಡುವುದಕ್ಕೆ ಆಯುರ್ವೇದಾಚಾರ್ಯರು ಹಾಗೂ ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರೂ ಆಗಿರುವ ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು (ಡಾ. ಸಂತೋಷ್ ಗುರೂಜಿ) ನಡೆಸಿಕೊಡುತ್ತಾರೆ.

ನಿರೂಪಕಿ ಸ್ವಾತಿ

ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಕಿರುತೆರೆಯ ಖ್ಯಾತ ಕಲಾವಿದೆ ಸ್ವಾತಿ 'ಕೈರುಚಿ' ಕಾರ್ಯಕ್ರಮದ ನಿರೂಪಕಿ.

ಪ್ರಸಾರ ಯಾವಾಗ.?

'ಕೈರುಚಿ' ಕಾರ್ಯಕ್ರಮ ಮುಂದಿನ ಸೋಮವಾರದಿಂದ (28.08.2017) ಮಧ್ಯಾಹ್ನ 12ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

English summary
Karnataka’s leading entertainment channel Udaya TV is launching a new cookery show “Kai Ruchi” from 28th August every Mon to Sat at 12 Noon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada