»   » ಕಿರುತೆರೆಯಲ್ಲಿ ಮೊದಲ ಬಾರಿಗೆ ಬ್ಲಾಕ್ ಬಸ್ಟರ್ 'ರಂಗಿತರಂಗ'

ಕಿರುತೆರೆಯಲ್ಲಿ ಮೊದಲ ಬಾರಿಗೆ ಬ್ಲಾಕ್ ಬಸ್ಟರ್ 'ರಂಗಿತರಂಗ'

Written By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಹಲವು ದಾಖಲೆಗೆ ಸಾಕ್ಷಿಯಾಗಿ, ಬಾಕ್ಸಾಫೀಸ್ ಧೂಳೆಬ್ಬಿಸಿದ್ದ 'ರಂಗಿತರಂಗ' ಚಿತ್ರ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಅನೂಪ್ ಭಂಡಾರಿ ರಚಿಸಿ, ನಿರ್ದೇಶಿಸಿದ್ದ ರಂಗಿತರಂಗ ಚಿತ್ರ ಜುಲೈ 2015ರಲ್ಲಿ ಬಿಡುಗಡೆಗೊಂಡು ವಿದೇಶದಲ್ಲೂ ಯಶಸ್ವೀ ಪ್ರದರ್ಶನಗೊಂಡಿತ್ತು. (ಮೈಲಿಗಲ್ಲು ಸೃಷ್ಟಿಸಿದ ರಂಗಿತರಂಗ)

Udaya TV telecasting blockbuster Rangitaranga on August 28

ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ಸಾಯಿಕುಮಾರ್, ರಾಧಿಕಾ ಚೇತನ್ ಪ್ರಮುಖ ಭೂಮಿಕೆಯಲ್ಲಿರುವ ರಂಗಿತರಂಗ ಚಿತ್ರ ಆಗಸ್ಟ್ 28 ಭಾನುವಾರ ಸಂಜೆ 6ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ನಿಧಾನಗತಿಯಲ್ಲಿ ಆರಂಭ ಪಡೆದುಕೊಂಡಿದ್ದ ರಂಗಿತರಂಗ ಚಿತ್ರ ನಂತರದ ದಿನಗಳಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ಸಡ್ಡುಹೊಡೆದು ಜನಮನ್ನಣೆ ಗಳಿಸಿತ್ತು.

ಬಿಡುಗಡೆಯ ಸಮಯದಲ್ಲಿ ರಂಗಿತರಂಗ ಚಿತ್ರ ಪ್ರದರ್ಶಿಸಲು ಆಸಕ್ತಿ ತೋರದ ಬೆಂಗಳೂರಿನ ಮಲ್ಟಿಪ್ಲೆಕ್ಸುಗಳು, ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಅತಿಹೆಚ್ಚಿನ ಸ್ಕ್ರೀನ್ ನೀಡಿದ್ದವು.

ಐಐಎಫ್ಎ 2015 ರಲ್ಲಿ 13, 63ನೇ ಫಿಲಂಫೇರ್ ಸೌತ್ ಅವಾರ್ಡ್ಸ್ ನಲ್ಲಿ ಆರು ಮತ್ತು 5ನೇ ಸೈಮಾ ಅವಾರ್ಡ್ಸ್ ನಲ್ಲಿ ವಿವಿಧ ವಿಭಾಗಗಳಲ್ಲಿ ಒಂಬತ್ತು ಪ್ರಶಸ್ತಿಯನ್ನು ರಂಗಿತರಂಗ ಚಿತ್ರ ಪಡೆದುಕೊಂಡಿದೆ.

English summary
Udaya TV telecasting blockbuster Rangitaranga on August 28. Movie written and directed by Anup Bhandari. Nirup Bhaandari, Avantika Shetty, Radhika Chetan and Saikumar in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada