»   » ದರ್ಶನ್ ಅಭಿಮಾನಿಗಳೇ ಸಂಕ್ರಾಂತಿಯಂದು ಉದಯ ಟಿವಿ ತಪ್ಪದೆ ನೋಡಿ

ದರ್ಶನ್ ಅಭಿಮಾನಿಗಳೇ ಸಂಕ್ರಾಂತಿಯಂದು ಉದಯ ಟಿವಿ ತಪ್ಪದೆ ನೋಡಿ

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬರಲಿದೆ. ನಟ ದರ್ಶನ್ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ 'Mr.ಐರಾವತ' ಸೂಪರ್ ಹಿಟ್ ಆಗಿತ್ತು.

ಸಂದೇಶ್ ನಾಗರಾಜ್ ನಿರ್ಮಾಣದ ಎ.ಪಿ. ಅರ್ಜುನ್ ನಿರ್ದೇಶನ ಮಾಡಿರುವ 'Mr.ಐರಾವತ' ಸಿನಿಮಾ ನಿರ್ಮಾಣ ಹಂತದಿಂದ ಹಿಡಿದು ಬಿಡುಗಡೆಯವರೆಗೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿತ್ತು.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']


Udaya TV telecasting 'Mr.Airavatha' movie on January 15th

ಅಂದಹಾಗೆ ನಟ ದರ್ಶನ್ ಪುತ್ರ ವಿನೀಶ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಹಳ ದಿನಗಳ ನಂತರ ತೆರೆ ಮೇಲೆ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ದರ್ಶನ್ ಕಾಣಿಸಿಕೊಂಡಿದ್ದು, ಹಾಡು, ಡೈಲಾಗ್, ಫೈಟ್ಸ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದರಿಂದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.[ಕಲೆಕ್ಷನ್ ನಲ್ಲಿ ಚಿಂದಿ ಉಡಾಯಿಸಿದ ದರ್ಶನ್ 'Mr.ಐರಾವತ']


ಮಾತ್ರವಲ್ಲದೇ, ಗಳಿಕೆಯಲ್ಲೂ ದಾಖಲೆ ಬರೆದಿದ್ದ 'Mr.ಐರಾವತ' ಮತ್ತೊಮ್ಮೆ ನಟ ದರ್ಶನ್ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದನ್ನು ಸಾಬೀತು ಪಡಿಸಿತ್ತು.
ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ 'Mr.ಐರಾವತ' ಕಿರುತೆರೆಯಲ್ಲಿ ಪ್ರದರ್ಶನ ಕಾಣಲಿದ್ದು, 'ಜನವರಿ 15 ರಂದು ಸಂಜೆ 7 ಗಂಟೆಗೆ ಉದಯ ಟಿವಿಯಲ್ಲಿ' 'Mr.ಐರಾವತ'ನ ದರ್ಶನವಾಗಲಿದೆ. ಯಾರಾದ್ರೂ ಬೆಳ್ಳಿತೆರೆಯ ಮೇಲೆಯ ಈ ಸಿನಿಮಾ ಮಿಸ್ ಮಾಡ್ಕೊಂಡಿದ್ದಲ್ಲಿ ಈ ಬಾರಿ ಮಾತ್ರ ಮಿಸ್ ಮಾಡ್ಬೇಡಿ.


English summary
Sankranthi Festival Special: First time in the small screen, Udaya TV telecasting Actor Darshan starrer Kannada Movie 'Mr.Airavatha' on January 15th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada