»   » ಸುವರ್ಣ ವಾಹಿನಿಯಲ್ಲಿ ಯುಗಾದಿ ವಿಶೇಷಗಳು

ಸುವರ್ಣ ವಾಹಿನಿಯಲ್ಲಿ ಯುಗಾದಿ ವಿಶೇಷಗಳು

Posted By:
Subscribe to Filmibeat Kannada

"ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಮತ್ತೆ ಮತ್ತೆ ತರುತಿದೆ..." ಎಂಬ ಹಾಡಿನ ಸಾಲುಗಳು ಯುಗಯುಗಗಳಿಂದಲೂ ಕನ್ನಡ ಕುಲಕೋಟಿಗೆ ಹೊಸ ಚೈತನ್ಯ ತುಂಬುತ್ತಿವೆ. ಈ ವರ್ಷದ ಯುಗಾದಿಯ ಮೆರುಗನ್ನು ಇಮ್ಮಡಿಗೊಳಿಸಲು ಸುವರ್ಣವಾಹಿನಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಸುವರ್ಣವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಐಡಿಯಾ ಸ್ಟಾರ್ ಸಿಂಗರ್' ಕಾರ್ಯಕ್ರಮದಲ್ಲಿ ಇದೇ ಭಾನುವಾರ ಮಾರ್ಚ್ 30ರಂದು ರಾತ್ರಿ 9:00 ಗಂಟೆಗೆ 'ದಿಲ್ ರಂಗೀಲಾ' ನಾಯಕ ಗೋಲ್ಡನ್ ಸ್ಟಾರ್ ಗಣೇಶ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.

ಸುವರ್ಣ ವಾಹಿನಿಯು ಸದಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಅದೇ ಹಾದಿಯಲ್ಲಿ ಮುಂದುವರೆಯಲಿ ಎಂಬ ಆಸೆ ಭರವಸೆಯೊಂದಿಗೆ ಎಲ್ಲರಿಗೂ ಬೇವು -ಬೆಲ್ಲದ ಹಬ್ಬ ತರಲಿ ಸಂತಸ ಸಡಗರವನ್ನು ಎಂದು ಸುವರ್ಣ ವಾಹಿನಿ ಆಶಿಸುತ್ತದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ತಮ್ಮ ಸಿನಿಮಾ ಜೀವನ ಹಂಚಿಕೊಳ್ಳಲಿರುವ ಗಣೇಶ್

ಕಾರ್ಯಕ್ರಮದಲ್ಲಿ ಅವರು ತಮ್ಮ ಸಿನಿಮಾ ಜೀವನ, ದಿಲ್ ರಂಗೀಲಾ ಚಲನಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಸ್ಟಾರ್ ಸಿಂಗರ್ ಸ್ಪರ್ಧಿಗಳೊಂದಿಗೆ ಬೆರೆತು ಅವರ ಪ್ರತಿಭೆಯನ್ನು ಪ್ರಶಂಸಿಸಿ ಪ್ರೋತ್ಸಾಹಿಸಿದ್ದಾರೆ. ಇದಿಷ್ಟೇ ಅಲ್ಲದೆ ಅಂಧ ಸ್ಪರ್ಧಿ ಶಿವಮ್ಮಳ ಹಾಡು ಕೇಳಿ ಮನಕರಗಿದ ಕ್ಷಣ ಎಲ್ಲರನ್ನು ಮೂಕವಿಸ್ಮಿತಗೊಳಿಸುವಂತಿತ್ತು.

ಕ್ರೇಜಿಸ್ಟಾರ್ ಚಿತ್ರ ಭಾನುವಾರ ಸಂಜೆ 6 ಗಂಟೆಗೆ

ಯುಗಾದಿ ಪ್ರಯುಕ್ತ ಇತ್ತೀಚೆಗಷ್ಟೇ ಬಿಡುಗಡೆಯಾದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಲನಚಿತ್ರ 'ಕ್ರೇಜಿಸ್ಟಾರ್' ಭಾನುವಾರ ಸಂಜೆ 6:00 ಗಂಟೆಗೆ ಪ್ರಸಾರವಾಗಲಿದೆ.

ಅನಾಥ ಹೆಣ್ಣು ಮಕ್ಕಳ ಸೇವಾಶ್ರಮದಲ್ಲಿ

'ಕಾರಂಜಿ' ಧಾರಾವಾಹಿಯ 'ತೊಟ್ಟಿಲು' ಎಂಬ ಅನಾಥ ಹೆಣ್ಣು ಮಕ್ಕಳ ಸೇವಾಶ್ರಮದಲ್ಲಿ ಸುವರ್ಣ ತಾರೆಯರ ಯುಗಾದಿ ಸಂಭ್ರಮಾಚರಣೆ ಇದೇ ಸೋಮವಾರ ಮಾರ್ಚ್ 31ರಂದು ಸಂಜೆ 4:30ಕ್ಕೆ ಪ್ರಸಾರವಾಗಲಿದೆ.

ಧಾರಾವಾಹಿಯ ಕಲಾವಿದರು ನೃತ್ಯ ಪ್ರದರ್ಶನ

ಈ ವಿಶೇಷ ಕಾರ್ಯಕ್ರಮದಲ್ಲಿ ಅಮೃತವರ್ಷಿಣಿಯ ಅಮೃತ, ಮೀರಾ ಮತ್ತು ಮಾಧವ, ಆಕಾಶ ಮತ್ತು ದೀಪಾ, ಪ್ರೀಯದರ್ಶಿನಿ ಹಾಗೂ ಪಂಚರಂಗಿ ಪೋಂಪೋಂ ಧಾರಾವಾಹಿಯ ಕಲಾವಿದರು ನೃತ್ಯ ಪ್ರದರ್ಶನ ಮಾಡಿದ್ದಾರೆ. ಹಾಗೂ ಅನಾಥಾಶ್ರಮದಲ್ಲಿ ಕಿರುತೆರೆ ತಾರೆಯರನ್ನು ಸ್ವಾಗತಿಸಿ ಬೀಳ್ಕೊಟ್ಟ ದೃಶ್ಯವನ್ನು ನೋಡುವುದೇ ಬಲು ಸೊಗಸು.

ಕಾರಂಜಿ ಧಾರಾವಾಹಿ ಮಹತ್ತರ ತಿರುವು

ಮತ್ತೊಂದು ವಿಶೇಷವೆಂದರೆ ಕನ್ನಡ ಕಿರುತೆರೆಯಲ್ಲಿಯೇ ಪ್ರಪ್ರಥಮ ಬಾರಿಗೆ ಖ್ಯಾತ ನಟಿ ಚಾರುಲತಾ 'ಕಾರಂಜಿ'ಯಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದು ಇದೇ ಯುಗಾದಿ ದಿನದಂದು ಧಾರಾವಾಹಿಯು ಮಹತ್ತರ ತಿರುವನ್ನು ಪಡೆಯುತ್ತಿದೆ.

English summary
Kannada General Entertainment channel all set to air Ugadi special programmes which telecast on Sunday March 30 th and Monday March31st 2014. Golden Star Ganesh to talk his filmy career and 'Dil Rangeela' moments in the programme.
Please Wait while comments are loading...