»   » ಉಮಾಶ್ರೀ ಕೆನ್ನೆಗೆ ಹೊಡೆದಿದ್ದರು ಸಾಹಸಸಿಂಹ ವಿಷ್ಣು

ಉಮಾಶ್ರೀ ಕೆನ್ನೆಗೆ ಹೊಡೆದಿದ್ದರು ಸಾಹಸಸಿಂಹ ವಿಷ್ಣು

Posted By:
Subscribe to Filmibeat Kannada
ಕನ್ನಡ ಚಲನಚಿತ್ರ ಹಾಗೂ ರಂಗಭೂಮಿಯ ಕಂಡಂತಹ ಪ್ರತಿಭಾನ್ವಿತ ಅಭಿನೇತ್ರಿ ಉಮಾಶ್ರೀ. ಈಗವರು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇತ್ತೀಚೆಗೆ ಅವರು ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ಮೂಡಿಬಂದ 'ಸ್ಟ್ರೈಟ್ ಹಿಟ್' ಕಾರ್ಯಕ್ರಮದಲ್ಲಿ ನೇರ ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರಿಸಿದರು.

ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಒಮ್ಮೆ ಉಮಾಶ್ರೀ ಅವರನ್ನು ಕುರಿತು ನೀವು ಸಿನಿಮಾಗೆ ಲಾಯಕ್ಕಿಲ್ಲ ಎಂದಿದ್ದರಂತೆ. ಒಮ್ಮೆ ಸಾಹಸಸಿಂಹ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಅಲ್ಲ ರಿಯಲ್ ಆಗಿಯೇ ಕೆನ್ನೆಗೆ ಹೊಡೆದಿದ್ದರಂತೆ.

ಈ ಬಗ್ಗೆ ಉಮಾಶ್ರೀ ಅವರನ್ನು 'ಸ್ಟ್ರೈಟ್ ಹಿಟ್'ನಲ್ಲಿ ಕೇಳಿದಾಗ, ಹೌದು. ಆಗ ಭಾರತಿ ಅವರು ಹೇಳಿದ್ದೇನೆಂದರೆ ಅವರು ಕೆನ್ನೆಗೆ ಹೊಡೆದರೆ ಒಳ್ಳೆಯದಾಗುತ್ತದೆ ಹೋಗು ಎಂದಿದ್ದರು. ನನ್ನ ಜೀವನದಲ್ಲಿ ಹಾಗೆಯೇ ಆಯಿತು ಎಂದು ಉಮಾಶ್ರೀ ತಮ್ಮ ನೆನಪುಗಳನ್ನು ಹರವಿದ್ದಾರೆ.

ಸೆಡಕ್ಷನ್ ಪಾತ್ರಗಳನ್ನೇ ಹೆಚ್ಚಾಗಿ ಮಾಡುತ್ತಿದ್ದೀರಲ್ಲಾ ಎಂದು ಕೇಳಿದ್ದಕ್ಕೆ, ನನಗೆ ಯಾವುದೇ ಪಾತ್ರ ಕೊಟ್ಟರು ಅದನ್ನು ಜವಾಬ್ದಾರಿಯುತವಾಗಿ ಮಾಡ್ತೀನಿ ಎಂದಿದ್ದಾರೆ. ಅಂದಹಾಗೆ ಸ್ಟ್ರೈಟ್ ಹಿಟ್ ಕಾರ್ಯಕ್ರಮ ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ಪ್ರತಿ ರಾತ್ರಿ 9 ಗಂಟೆಗೆ ಮೂಡಿಬರುತ್ತದೆ.

ಮಂಗಳವಾರ (ಜೂನ್.4) ರಾತ್ರಿ ಸ್ಟೈಟ್ ಹಿಟ್ ನಲ್ಲಿ ಬರುತ್ತಿರುವವರು ಸಾಫ್ಟ್ ಸೆಕ್ಸ್ ಚಿತ್ರಗಳ ರಾಣಿ, ಒಂದು ಕಾಲದ ಯುವಕರ ನಿದ್ದೆಗೆಡಿಸಿದ್ದ ಶಕೀಲಾ ಮೇಡಂ. ಅವರು ಸ್ವತಃ ತಂಗಿಯಿಂದಲೇ ಮೋಸ ಹೋಗಿದ್ದು, ಅವರ ಆತ್ಮಕಥೆ ಚಿತ್ರವಾಗುತ್ತಿರುವ ಬಗ್ಗೆ, ಸರಿಸುಮಾರು 20 ಕೆ.ಜಿ ತೂಕ ಇಳಿಸಿಕೊಂಡಿರುವ ಬಗ್ಗೆ, ಹೆಚ್ಚಾಗಿ ವಯಸ್ಕರ ಚಿತ್ರಗಳಲ್ಲೇ ಅಭಿನಯಿಸಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಡೋಂಟ್ ಮಿಸ್ ರಾಜ್ ಮ್ಯೂಸಿಕ್. (ಒನ್ಇಂಡಿಯಾ ಕನ್ನಡ)

English summary
Kannada and culture and women and child welfare minister Umashree recently appeared on Raj Musix Kannada channel Straight Hit programme. She said once Sahasasimha Dr.Vishnuvardhan slapped her. Tuesday (4th June) Suguna's straight hit with shakeela mam.. watch at 9pm only on raj music karnataka.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada