»   » ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರಾಸಲೀಲೆ ಬಯಲು

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರಾಸಲೀಲೆ ಬಯಲು

Posted By: ಉದಯರವಿ
Subscribe to Filmibeat Kannada

ಭಾರತೀಯ ಕಿರುತೆರೆ ಕ್ಷೇತ್ರದ ರಿಯಾಲಿಟಿ ಶೋಗಳಲ್ಲೇ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ 'ಬಿಗ್ ಬಾಸ್'ನಲ್ಲಿ ನಡೆಯುತ್ತಿರುವ ದೊಂಬರಾಟಗಳು ಒಂದೆರಡಲ್ಲ ಬಿಡಿ. ಫರಾಹ್ ಖಾನ್ ನಿರೂಪಣೆಯಲ್ಲಿ ಕಲರ್ಸ್ ವಾಹಿನಿಯಲ್ಲಿ ಮೂಡಿಬರುತ್ತಿರುವ ಹಿಂದಿಯ 'ಬಿಗ್ ಬಾಸ್ ಹಲ್ಲಾ ಬೋಲ್' (ಬಿಗ್ ಬಾಸ್ ಸೀಸನ್ 8) ಎಪಿಸೋಡ್ ಗಳು ಭಾರಿ ಚರ್ಚೆಗೆ ಕಾರಣವಾಗುತ್ತಿವೆ. ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸಿದ ಸುದ್ದಿ ಇದು.

ಈ ಶೋನಲ್ಲಿ ನಡೆಯುತ್ತಿರುವ ಪ್ರೀತಿ ಪ್ರೇಮ ಪ್ರಣಯದ ಆಟಗಳು ಕೈ ಮೀರಿ ಹೋಗಿವೆ ಎಂಬ ಮಾತುಗಳು ಯಥೇಚ್ಛವಾಗಿ ಕೇಳಿಬರುತ್ತಿವೆ. ಇದೇ ರೀತಿಯ ತಾಜಾ ಘಟನೆಯೊಂದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈ ಶೋನ ಸ್ಪರ್ಧಿ ಉಪೇನ್ ಪಟೇಲ್ ಹಾಗೂ ಕರಿಷ್ಮಾ ತನ್ನಾ ನಡುವಿನ ಪ್ರೇಮ ಸಂಬಂಧ ಪರಾಕಾಷ್ಠೆ ತಲುಪಿದೆ, ಬಿಗ್ ಬಾಸ್ ಮನೆಯನ್ನೇ ಹನಿಮೂನ್ ಮಾಡಿಕೊಂಡಂತಿದೆ ಇವರ ವರಸೆ. [ಇನ್ನೊಂದು ವಾರ ಅಷ್ಟೇ ಬಣ್ಣದ ವಾಹಿನಿಯಿಂದ ಸಲ್ಲೂ ಹೊರಕ್ಕೆ!]

Bigg Boss1

ಭಾನುವಾರದ (ಜ.18) ಎಪಿಸೋಡ್ ನಲ್ಲಿ ಇವರಿಬ್ಬರ ನಡುವೆ ನಡೆದ ಘಟನೆಯೊಂದು ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮನೆಯಲ್ಲಿ ಲೈಟ್ ಆಫ್ ಆಗಿ ಎಲ್ಲರೂ ಇನ್ನೇನು ನಿದ್ದೆಗೆ ಜಾರಿದ ಮೇಲೆ ಇವರಿಬ್ಬರೂ ಎಚ್ಚೆತ್ತುಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ ಫೋಟೋಗಳು ಈಗ ಭಾರಿ ಸದ್ದು ಮಾಡುತ್ತಿರುವೆ.

ಕತ್ತಲಲ್ಲಿ ಇವರಿಬ್ಬರೂ ಜಾಮೂನು ತಿಂದಿರುವ ಫೋಟೋಗಳು, ತುಟಿಗೆ ತುಟಿ ಕೊಟ್ಟು ಗಾಢವಾಗಿ ಚುಂಬಿಸಿಕೊಂಡ ಸನ್ನಿವೇಶಗಳು ಕ್ಯಾಮೆರಾದಲ್ಲಿ ಬಂಧಿಯಾಗಿವೆ. ಆ ಫೋಟೋಗಳನ್ನು ನೀವಿಲ್ಲಿ ನೋಡಬಹುದು.

Bigg Boss

ವಾಸ್ತವಾಗಿ ಇವರಿಬ್ಬರಿಗೂ ಬೇರೆಬೇರೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಇದ್ದಾರೆ. ಆದರೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಅದು ಪ್ರೇಮಕ್ಕೆ ತಿರುಗಿ ಈಗ ಜೋಡಿ ಹಕ್ಕಿಗಳಂತಾಗಿದ್ದಾರೆ. ಕದ್ದುಮುಚ್ಚಿ ನಡೆಯುತ್ತಿರುವ ಇವರಿಬ್ಬರ ಜೂಟಾಟ, ಕಣ್ಣಾಮುಚ್ಚಾಲೆಗೆ ಸದ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳಿಲ್ಲ.

English summary
Upen Patel and Karishma Tanna's affair has set tongues wagging inside the Bigg Boss house. While their alleged relationship has been put under the scanner by fellow contestants who consider it nothing but a publicity gimmick, Karishma who was apprehensive about accepting it in front of national television has gone and planted a kiss on Upen's lips.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada