»   » ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್!

ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್!

Posted By: Naveen
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ನಟ, ನಿರ್ದೇಶಕ ಕಾಶೀನಾಥ್ ಆಗಮಿಸಿದ್ದಾರೆ. ಸಾಕಷ್ಟು ಅಭಿಮಾನಿಗಳ ಆಸೆಯಂತೆ ಕಾಶೀನಾಥ್ ಸಾಧಕರ ಸೀಟ್ ನಲ್ಲಿ ಕುಳಿತಿದ್ದಾರೆ.[ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್]

ನಟ ನಿರ್ದೇಶಕ ಉಪೇಂದ್ರ... ಕಾಶೀನಾಥ್ ರವರ ಕಟ್ಟಾ ಶಿಷ್ಯ.! ಉಪ್ಪಿ ಸಿನಿಮಾರಂಗಕ್ಕೆ ಪರಿಚಿತರಾಗಿದ್ದು ಕಾಶೀನಾಥ್ ರವರ ಗರಡಿಯ ಮೂಲಕವೇ. ಇಂತಹ ಅಪರೂಪದ ಗುರು ಶಿಷ್ಯರ ಸಮಾಗಮಕ್ಕೆ ಈ ವಾರದ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಸಾಕ್ಷಿಯಾಗಿದೆ.['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್ ]

ಈ ಕಾರ್ಯಕ್ರಮದಲ್ಲಿ ಉಪೇಂದ್ರ ರವರು ಕಾಶೀನಾಥ್ ರವರ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಉಪೇಂದ್ರ ಅವರ ಆ ಮಾತುಗಳನ್ನ ಕೇಳಿ ಕಾಶೀನಾಥ್ ಭಾವುಕರಾಗಿದ್ದಾರೆ. ಮುಂದೆ ಓದಿ....

ತುಂಬ ಖುಷಿಯಾಗುತ್ತಿದೆ.

''ಸರ್... ನಮಸ್ಕಾರ. ನನಗೆ ತುಂಬ ಸಂತೋಷ ಆಗುತ್ತಿದೆ... ನೀವು ಆ ಸೀಟ್ ನಲ್ಲಿ ಕೂರಲು ಅರ್ಹವಾದ ವ್ಯಕ್ತಿ. ತುಂಬ ಖುಷಿ ಅನಿಸುತ್ತಿದೆ ಸರ್'' - ಉಪೇಂದ್ರ, ನಟ, ನಿರ್ದೇಶಕ['ರಾಜಕುಮಾರ' ಕಲೆಕ್ಷನ್ ಬಗ್ಗೆ ರಿಯಲ್ ಸ್ಟಾರ್ ಮೆಚ್ಚುಗೆ]

ದೊಡ್ಡ ಗುಣ ಅವರದ್ದು

''ಕೆಲವು ಸಲ ಕೆಲಸದ ಟೈಂ ನಲ್ಲಿ ನಾನು ಅವರಿಗೆ ಏನಾದ್ರೂ ಅಂದು ಬಿಡುತ್ತಿದೆ. ಯಾವಾಗಲೂ ಗುರುಗಳು ಶಿಷ್ಯರಿಗೆ ಬೈತಾರೆ. ಆದರೆ, ನಾನು ಏನೇ ಹೇಳಿದರು ಸಮಾಧಾನವಾಗಿ ಇದ್ದು ಕ್ಷಮಿಸಿ ಬಿಡುತ್ತಿದ್ದರು. ಇದು ಅವರ ದೊಡ್ಡ ಗುಣ'' - ಉಪೇಂದ್ರ, ನಟ, ನಿರ್ದೇಶಕ.

ಉಪ್ಪಿ ಕಣ್ಣೀರು

''ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೆ ಈಗ ಮಾತಾಡುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ. ಅಕಸ್ಮಾತ್ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ''... ಹೀಗೆ ಹೇಳಿ ಉಪೇಂದ್ರ ಕಣ್ಣೀರಿಟ್ಟರು.

ಇದು ನನ್ನ ಪುಣ್ಯ.

ಉಪೇಂದ್ರ ಆಡಿದ ಮಾತುಗಳನ್ನ ಕೇಳಿ ಕಾಶೀನಾಥ್ ಸಹ ಭಾವುಕರಾದರು. ಇಂತಹ ಶಿಷ್ಯರನ್ನ ಪಡೆದಿರುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ ಅಂತ ಕಾಶೀನಾಥ್ ಹೇಳಿದರು.

ನೀವು ಪ್ರೋಮೋ ನೋಡಿ

ಕಾಶೀನಾಥ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋ ನೋಡಿದವರೆಲ್ಲ ಶನಿವಾರದ ಕಾರ್ಯಕ್ರಮ ಯಾವಾಗ ಬರುತ್ತದೆ ಅಂತ ಕಾಯುವ ತರಹ ಆಗಿದೆ.

English summary
Kannada Actor, Director Kashinath and Real Star Upendra becomes emotional in Zee Kannada Channel's popular show Weekend with Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada