»   » ಕಿಚ್ಚ ಸುದೀಪ್ ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ ಫಿಲಾಸಫಿ

ಕಿಚ್ಚ ಸುದೀಪ್ ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ ಫಿಲಾಸಫಿ

Posted By:
Subscribe to Filmibeat Kannada

ಅದು ಎರಡು ದಶಕಗಳ ಹಿಂದಿನ ಕಥೆ. ಕಾಶೀನಾಥ್ ನಿರ್ದೇಶನದ 'ಅಜಗಜಾಂತರ' ಚಿತ್ರದ ಮೇಕಿಂಗ್ ಸಂದರ್ಭ.

'ಅಜಗಜಾಂತರ' ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದವರಲ್ಲಿ ಉಪೇಂದ್ರ ಕೂಡ ಒಬ್ಬರು. ಸಾಲದಕ್ಕೆ ಕಾಶೀನಾಥ್ ಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ರು ಉಪ್ಪಿ.

upendra

ಹೀಗಿದ್ದರೂ, ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಉಪೇಂದ್ರ ಹೆಸರು ಇರ್ಲಿಲ್ಲ. ''ನನ್ನ ಹೆಸರು ಇಲ್ವಲ್ಲಾ...ಕೇಳೋಣ ಬೇಡ್ವಾ? ಕೇಳಿದ್ರೆ ಏನ್ ಅಂದುಕೊಳ್ಳುತ್ತಾರೆ. ಹೋಗಲಿ ಬಿಡು, ಎಷ್ಟು ಜನ ಟೈಟಲ್ ಕಾರ್ಡ್ ನೋಡ್ತಾರೆ. ನೋಡಿದ್ರೆ ನನ್ನ ಫ್ರೆಂಡ್ಸ್ ನೋಡ್ಬಹುದು ಅಷ್ಟೆ'' ಅಂತ ಉಪೇಂದ್ರ ಸುಮ್ಮನಾಗ್ಬಿಟ್ರಂತೆ. ['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]

ಆಗ ಟೈಟಲ್ ಕಾರ್ಡ್ ಹಾಕ್ಬೇಕು ಅಂದ್ರೆ ಕ್ಯಾಮರಾದಲ್ಲಿ ಶೂಟ್ ಮಾಡ್ಬೇಕಿತ್ತು. ಇನ್ನೇನು ಚಿತ್ರ ರಿಲೀಸ್ ಆಗುವ ಸಂದರ್ಭದಲ್ಲಿ ಉಪೇಂದ್ರ ಹೆಸರು ಮಿಸ್ ಆಗಿರುವುದನ್ನ ಕಾಶೀನಾಥ್ ಗಮನಿಸಿ ಹೊಸದಾಗಿ ಟೈಟಲ್ ಕಾರ್ಡ್ ಶೂಟ್ ಮಾಡ್ಸಿದ್ರಂತೆ.

upendra

''ಹೀಗೆ, ನಿರೀಕ್ಷೆ ಮಾಡದೇ ಇರುವಾಗ ಕೇಳಿದ್ದಕ್ಕಿಂತ ದೇವರು ಜಾಸ್ತಿ ಕೊಡ್ತಾನೆ. ಶ್ರಮಕ್ಕೆ ಪ್ರತಿಫಲ ಇದ್ದೇ ಇದೆ'' ಅಂತ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ತಮ್ಮ ಜೀವನದ ಸಣ್ಣ ನಿದರ್ಶನ ನೀಡ್ತಾ ಉಪೇಂದ್ರ ಫಿಲಾಫಸಿ ಹೇಳಿದ್ರು. [ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?]

ನಿರೀಕ್ಷೆ ಮಾಡಿ ನಿರಾಸೆ ಅನುಭವಿಸುವ ಬದಲು, ಪಾಲಿಗೆ ಬಂದಿದ್ದೇ ಪಂಚಾಮೃತ ಅಂತ ಸ್ವೀಕರಿಸಿದರೆ ನೆಮ್ಮದಿ ಗ್ಯಾರೆಂಟಿ ಅಲ್ಲವೇ.?!

English summary
Kannada Actor Real Star Upendra spoke about his movies and philosophical thoughts during a chit-chat with Sudeep in Super Sunday with Sudeep (Bigg Boss Kannada-3) show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada