»   » ವಿ.ಹರಿಕೃಷ್ಣ ಮದುವೆಯಲ್ಲಿ ಟೈಗರ್ ಪ್ರಭಾಕರ್ ಅವರ ಪಾತ್ರವೇನು?

ವಿ.ಹರಿಕೃಷ್ಣ ಮದುವೆಯಲ್ಲಿ ಟೈಗರ್ ಪ್ರಭಾಕರ್ ಅವರ ಪಾತ್ರವೇನು?

Written By: Naveen
Subscribe to Filmibeat Kannada

ಕನ್ನಡದ ಬಹು ಬೇಡಿಕೆಯ ಸಂಗೀತ ನಿರ್ದೇಶಕ 'ವಿ.ಹರಿಕೃಷ್ಣ'. ಆದ್ರೆ, ಒಂದು ಕಾಲದಲ್ಲಿ ಹರಿಕೃಷ್ಣ ಸಂಗೀತದ ಸಹವಾಸವೇ ಬೇಡ ಅಂತ ಗ್ಯಾರೇಜ್ ಕಡೆ ಮುಖ ಮಾಡಿದ್ದರು ಅಂದ್ರೆ ನಂಬಲೇಬೇಕು.

ಗ್ಯಾರೆಜ್ ಯಿಂದ ಮತ್ತೆ ಅವರ ಸಂಗೀತದ ಜರ್ನಿ ಶುರುವಾಗಿದ್ದು, ಮೆಲೋಡಿ ಎನ್ನುವ ಆರ್ಕೆಸ್ಟ್ರಾ ತಂಡಕ್ಕೆ ಸೇರಿದ ಮೇಲೆ. ಅಲ್ಲಿಗೆ ಹೊದ ಮೇಲೆ ಬರಿ ಸಂಗೀತ ಜರ್ನಿ ಅಲ್ಲ, ಜೊತೆಗೆ ಅವರ ಮತ್ತು ವಾಣಿ ಅವರ ಜೊತೆ ಪ್ರೇಮ ಜರ್ನಿ ಕೂಡ ಶುರುವಾಯಿತು.[ವಿ.ಹರಿಕೃಷ್ಣ ರವರ ಮೊಟ್ಟ ಮೊದಲ ಸಂದರ್ಶನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.!]

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ 'ಹರಿಕೃಷ್ಣ ಮತ್ತು ವಾಣಿ ಹರಿಕೃಷ್ಣ' ಅವರ ಮ್ಯೂಸಿಕಲ್ ಲವ್ ಸ್ಟೊರಿ ಬಹಿರಂಗವಾಯಿತು. ಆ ಕಥೆ ಮುಂದಿದೆ ಓದಿ.

ಆರ್ಕೆಸ್ಟ್ರಾದಲ್ಲಿ ಇಬ್ಬರಿಗೂ ಪರಿಚಯ

ಮೆಲೋಡಿ ಆರ್ಕೆಸ್ಟ್ರಾ' ತಂಡವನ್ನ ಹರಿಕೃಷ್ಣ ಸೇರಿದರು. ಅಲ್ಲಿ ಹರಿಕೃಷ್ಣ ಕೀ-ಬೊರ್ಡ್ ಪ್ಲೇಯರ್ ಆಗಿದ್ದರೇ, ವಾಣಿ ಹರಿಕೃಷ್ಣ ಗಾಯಕಿಯಾಗಿದ್ರು. ಆಗ ಅವರಿಬ್ಬರ ನಡುವೆ ಪರಿಚಯ ಬೆಳೆಯಿತು. ಮುಂದೆ ಆ ಪರಿಚಯವೇ ಪ್ರೇಮವಾಯಿತು.[ಸಾವಿನ ಮನೆಗೆ ವಿ.ಹರಿಕೃಷ್ಣ ಕಾಲಿಡಲ್ಲ.! ಯಾಕೆ?]

ಮದುವೆ ಆಗಿದ್ದೇ ರೋಚಕ

''ತುಂಬಾ ಇಷ್ಟಪಟ್ಟು ಅವಳನ್ನ ಮದುವೆಯಾದೆ. ನಾವು ಮದುವೆಯಾದಾಗ ತುಂಬ ಕಷ್ಟ ಇತ್ತು. ಮದುವೆಯಾಗುವ ಸಮಯದಲ್ಲಿ 8 ತಿಂಗಳು ನನಗೆ ಕೆಲಸ ಇರಲಿಲ್ಲ''. -ಹರಿಕೃಷ್ಣ.[ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..]

ಶೇವಿಂಗ್ ಮಾಡುವುದಕ್ಕೆ ಪ್ರಭಾಕರ್ ಸಹಾಯ ಮಾಡಿದ್ದರು

''ಮದುವೆಯ ಎರಡು ದಿನದ ಹಿಂದೆ ನಟ ಟೈಗರ್ ಪ್ರಭಾಕರ್ ಸರ್ ಅವರ ಒಂದು ಸಿನಿಮಾ ರೆಕಾರ್ಡಿಂಗ್ ಮಾಡುವುದಕ್ಕೆ ಕೆಲಸ ಸಿಕ್ಕಿತು. ಆ ದಿನ ಶೇವಿಂಗ್ ಮಾಡಿಕೊಳ್ಳುವುದಕ್ಕು ನನ್ನ ಹತ್ತರ ದುಡ್ಡು ಇರಲಲ್ಲಿ. ಪ್ರಭಾಕರ್ ಸರ್ ಅವರೇ ಶೇವ್ ಮಾಡಿ, ಸೂಟ್ ಕೊಡಿಸಿ ನನ್ನ ಮದುವೆಗೆ ಸಹ ಬಂದಿದ್ದರು''.- ಹರಿಕೃಷ್ಣ ['ಡಿ' ಬಾಸ್ ದರ್ಶನ್ ಮೇಲೆ ವಿ.ಹರಿಕೃಷ್ಣ ತೋರಿದ ಗೌರವದ ಪರಿ ಇದು!]

ಬಂಪರ್ ಲಾಟರಿ

''ಆಕೆಯನ್ನ ಮದುವೆಯಾದ ದಿನದಿಂದನೇ ಕೆಲಸ ಮಾಡಿ ಇವತ್ತಿನವರೆಗೂ ನಾನ್ ಸ್ಟಾಪ್ ಕೆಲಸ ಮಾಡುತ್ತಿದ್ದೇನೆ ಅದಕ್ಕೆ ಯಾವಗಲೂ ಅವಳನ್ನ ಲಾಟರಿ ಟಿಕೆಟ್ ಅಂತ ಕರೆಯುತ್ತೇನೆ''.- ಹರಿಕೃಷ್ಣ

ಬಂಪರ್ ಲಾಟರಿ

''ಆಕೆಯನ್ನ ಮದುವೆಯಾದ ದಿನದಿಂದನೇ ಕೆಲಸ ಮಾಡಿ ಇವತ್ತಿನವರೆಗೂ ನಾನ್ ಸ್ಟಾಪ್ ಕೆಲಸ ಮಾಡುತ್ತಿದ್ದೇನೆ ಅದಕ್ಕೆ ಯಾವಗಲೂ ಅವಳನ್ನ ಲಾಟರಿ ಟಿಕೆಟ್ ಅಂತ ಕರೆಯುತ್ತೇನೆ''.- ಹರಿಕೃಷ್ಣ

ಹರಿಕೃಷ್ಣ ಬಗ್ಗೆ ವಾಣಿ ಅವರು ಹೇಳಿದ್ದೇನು?

''4 ವರ್ಷ ಲವ್ ಮಾಡಿದ್ವಿ. ಆಮೇಲೆ ನನ್ನ ಬಗ್ಗೆ ಕವಿತೆ ಎಲ್ಲ ಬರೆದಿದ್ದರು. ಆಗ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಅದ್ರೀಗ ಬರಿ ಕೆಲಸ.. ಕೆಲಸ ಅಂತ ಹೇಳ್ತಾ ಇರುತ್ತಾರೆ''. ವಾಣಿ ಹರಿಕೃಷ್ಣ

English summary
Music Director V.Harikrishna Shares Love Story with His Wife Vani Harikrishna at weekend with Ramesh 3.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X