»   » ಸಾವಿನ ಮನೆಗೆ ವಿ.ಹರಿಕೃಷ್ಣ ಕಾಲಿಡಲ್ಲ.! ಯಾಕೆ?

ಸಾವಿನ ಮನೆಗೆ ವಿ.ಹರಿಕೃಷ್ಣ ಕಾಲಿಡಲ್ಲ.! ಯಾಕೆ?

Posted By: Naveen
Subscribe to Filmibeat Kannada

ಹಾಯ್... ನಮಸ್ಕಾರ ಕರ್ನಾಟಕ.. ವೀಕೆಂಡ್ ಬಂದಾಯ್ತು, ಟೈಂ ಬೇರೆ ಆಯ್ತು, ಮತ್ತೆ... ಶುರು ಮಾಡೋಣ, ಈ ವಾರ ಸಾಧಕರ ಸೀಟ್ ನಲ್ಲಿ ಕುಳಿತಿರುವವರು ಒನ್ ಅಂಡ್ ಒನ್ಲಿ 'ಶ್ರೀ ವಿ.ಹರಿಕೃಷ್ಣ'. ಹೀಗೆ ಹೇಳುತ್ತಾ ಈ ವಾರ ರಮೇಶ್ 'ವಿ.ಹರಿಕೃಷ್ಣ' ಅವರ ಜರ್ನಿ ಶುರು ಮಾಡಿದ್ದರು.

'ವಿ.ಹರಿಕೃಷ್ಣ' ಇವತ್ತು ಕನ್ನಡ ಸಿನಿಮಾರಂಗದಲ್ಲೇ ದೊಡ್ಡ ಸಂಗೀತ ನಿರ್ದೇಶಕ. ಒಂದು ದಶಕ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿ.ಹರಿಕೃಷ್ಣ 100 ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ್ದಾರೆ. ಈ ಯಶಸ್ಸಿಗಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ನಿಮಗೆ ಗೊತ್ತಾ.....ಸಾವಿನ ಮನೆಗೆ ವಿ.ಹರಿಕೃಷ್ಣ ಅವರು ಹೋಗೋದೇ ಇಲ್ಲ. ಅದು ಯಾರಾದರೂ ಸರಿ, ಸ್ನೇಹಿತ, ಸಂಬಂಧಿಯಾದರೂ ಕೂಡ ಹೋಗುವುದಿಲ್ಲವಂತೆ. ಅದು ಯಾಕೆ ಅಂತ ಮುಂದೆ ಓದಿ.....

ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡೆ

''ನಮ್ಮಪ್ಪ ಕಾರ್ ಮೆಕಾನಿಕ್, ನಾನು ಸಣ್ಣ ವಯಸ್ಸಿನಲ್ಲಿರುವಾಗಲೇ ಅವರನ್ನ ಕಳೆದುಕೊಂಡೆ. ನಾನು ಸಂಗೀತಗಾರ ಆಗಬೇಕು ಎನ್ನುವುದು ಅವರ ಕನಸು. ನನಗೆ ನನ್ನ ಬಗ್ಗೆ ನಂಬಿಕೆ ಇಲ್ಲದಿದ್ರೂ, ಅವರಿಗಾಗಿ ಸಂಗೀತ ಕಲಿಯುವುದಕ್ಕೆ ಶುರು ಮಾಡಿದೆ''. - ವಿ.ಹರಿಕೃಷ್ಣ

ನನಗೆ ಸೈಕಲ್ ಸಹ ಬರಲ್ಲ

''ನಮ್ಮ ತಂದೆ ನನಗೆ ಆಟ ಆಡುವುದಕ್ಕೂ ಬಿಡುತ್ತಿರಲಿಲ್ಲ. ಯಾವಗಲೂ ಸಂಗೀತ ಕಲಿ ಅಂತ ಹೇಳುತಿದ್ದರು. ನನ್ನ ತಮ್ಮಂದಿರು ಟಿವಿ ನೋಡುತ್ತಿದ್ದರೇ, ನನಗೆ ತುಂಬಾ ನೋವಾಗುತ್ತಿತ್ತು. ನನ್ನ ಜೀವನದಲ್ಲಿ ಒಂದೇ ಒಂದು ಆಟವೂ ಆಡಿಲ್ಲ. ಮಕ್ಕಳ ಜೊತೆ ಸೇರಿಲ್ಲ. ನನಗೆ ಸೈಕಲ್ ಸವಾರಿ ಮಾಡುವುದಕ್ಕೂ ಸಹ ಬರಲ್ಲ'' - ವಿ.ಹರಿಕೃಷ್ಣ

9 ವರ್ಷಕ್ಕೆ ಆರ್ಕೇಸ್ಟ್ರಾ ಸೇರಿದೆ

''9 ವರ್ಷಕ್ಕೆ ಆರ್ಕೇಸ್ಟ್ರಾದಲ್ಲಿ ಕೀಬೋರ್ಡ್ ಪ್ಲೇಯರ್ ಆದೆ. ತಿಂಗಳಿಗೆ 20 ಕಾರ್ಯಕ್ರಮಗಳನ್ನ ಮಾಡ್ತಿದೆ. ನನ್ನ ತಂದೆ ಸಂಗೀತ ಕಲಿಸುವಾಗ ನನಗೆ ಸೀರಿಯಸ್ನೆಸ್ ಇರಲಿಲ್ಲ. ಅದ್ರೇ ಅವರು ಬಿಟ್ಟು ಹೋದಾಗ, ಅದರ ಸೀರಿಯಸ್ನೆಸ್ ಗೊತ್ತಾಯಿತು. ಅವರ ಕನಸು, ಅವರು ಇಷ್ಟ ಪಟ್ಟಿದ್ದು, ಇವತ್ತು ನಾನು ಆಗಿರಬಹುದೇನೋ'' - ವಿ.ಹರಿಕೃಷ್ಣ.

ತಾಯಿಗೆ ಇಷ್ಟ ಇರಲಿಲ್ಲ

''ಮನೆಯಲ್ಲಿ ದೊಡ್ಡ ಜಗಳ ಆಗುತ್ತಿತ್ತು. ನಾನು ಸಂಗೀತ ಕಲಿಯುವುದು ಅಮ್ಮನಿಗೆ ಸ್ವಲ್ಪವೂ ಇಷ್ಟ ಇರಲಿಲ್ಲ. ನಾನು ಓದಬೇಕು ಎನ್ನುವುದು ಅವರ ಆಸೆ, ಸಂಗೀತ ಕಲಿಯಬೇಕು ಎನ್ನುವುದು ತಂದೆ ಆಸೆ'' - ವಿ.ಹರಿಕೃಷ್ಣ.

ಇಂದಿಗೂ ಸಾವಿನ ಮನೆಗೆ ಹೋಗಲ್ಲ!

''ಸಾವಿನ ಮನೆಗೆ ಹೋದ್ರೆ ನಮ್ಮ ತಂದೆ ನೆನಪಿಗೆ ಬರುತ್ತಾರೆ. ಅದಕ್ಕೆ ಯಾರೇ ಆಗಲಿ, ನನ್ನ ಕ್ಲೋಸ್ ಫ್ರೆಂಡ್ ತೀರಿಕೊಂಡಾಗಲೂ ನಾನು ಹೋಗಿಲ್ಲ. ಅದು ತಲೆಯಿಂದನೇ ಹೋಗಿಲ್ಲ. ಎಲ್ಲೇ ಹೋದರೂ ನಮ್ಮ ತಂದೆ ಕಾಣಿಸಿಕೊಳ್ಳುತ್ತಿದ್ದರು. ಸೋ, ಅದಕ್ಕೆ ಅದನ್ನ ಬಿಟ್ಟೆ. ಬದುಕುವುದಕ್ಕೆ ಶುರು ಮಾಡಿದೆ'' ವಿ.ಹರಿಕೃಷ್ಣ.

ಎಲ್ಲ ಬಿಟ್ಟು ಕಾರ್ ಮೆಕಾನಿಕ್ ಆದೆ

''ಯಾವಾಗ ನಮ್ಮ ತಂದೆ ತೀರಿಕೊಂಡ್ರೋ, ಆಗಲೇ ಕಾಲೇಜ್, ಆರ್ಕೇಸ್ಟ್ರಾ ಎಲ್ಲಾ ನಿಲ್ಲಿಸಿದೆ. ನಮ್ಮ ತಂದೆ ಮೆಕಾನಿಕ್ ಶಾಪ್ ನಲ್ಲಿ ನಾನು ಮೆಕಾನಿಕ್ ಆದೆ. ಅದು ಬಿಟ್ಟರೆ ನಮಗೆ ಬೇರೆ ಆದಾಯ ಇರಲಿಲ್ಲ. ನಾನು ಗ್ಯಾರೇಜ್ ಗೆ ಹೋದ್ರೆ ನಮ್ಮ ತಮ್ಮ ಓದಬಹುದು ಅಂತ ಬೆಳ್ಳಿಗೆ 9 ಗಂಟೆಯಿಂದ ರಾತ್ರಿ 11 ಗಂಟೆ ತನಕ ಕೆಲಸ ಮಾಡಿದೆ'' - ವಿ.ಹರಿಕೃಷ್ಣ.

ಇನ್ನೊಂದು ಜನ್ಮ ಬೇಡ..

''ಪಿಯುಸಿ ಓದುವಾಗ ಅವರ ತಂದೆ ತೀರಿಕೊಂಡರು. ಆಗ ನನ್ನ ನೋಡಿಕೊಂಡ. ತಂದೆ ಸ್ಥಾನದಲ್ಲಿ ನಿಂತು ಎಲ್ಲ ಪೂರೈಸಿದ. ದೇವರಲ್ಲಿ ಯಾವಾಗಲೂ ಕೇಳಿಕೊಳ್ತೀನಿ ನನಗೆ ಮುಂದಿನ ಜನ್ಮವೇ ಬೇಡ. ಯಾಕಂದ್ರೆ ಈ ತರಹ ಮಗ ಮತ್ತೆ ಸಿಗುತ್ತಾನ ಇಲ್ವಾ ಅಂತ'' -ವಸಂತಮ್ಮ, ತಾಯಿ

ಥ್ಯಾಂಕ್ಸ್ ಎನ್ನುವುದು ಸಣ್ಣ ಪದ

ಏನು ಹೇಳೋದು ಸಾರ್..? ಗೊತಾಗ್ತಿಲ್ಲ. ನಮ್ಮ ತಂದೆ ತೀರಿಕೊಂಡಾಗ ಎಲ್ಲ ಕಷ್ಟಗಳು ಅಣ್ಣನ ತಲೆಯಲ್ಲಿ ಇತ್ತು. ನಮಗೆ ಗೊತಾಗ್ತಿರಲಿಲ್ಲ. ಡೈರೆಕ್ಟ್ ಆಗಿ ಅದು ಬೇಕು, ಇದು ಬೇಕು ಅಂತ ಕೇಳ್ತಿದ್ವಿ. ಇದುವರೆಗೂ ಯಾವುದಕ್ಕೂ ನೋ ಅಂತ ಹೇಳಿಲ್ಲ. ವಿ ಆರ್ ವೆರಿ ಹ್ಯಾಪಿ, ಥ್ಯಾಂಕ್ಸ್ ಎನ್ನುವುದು ತುಂಬ ಸಣ್ಣ ಪದ ಆಗತ್ತೆ. - ವಿನೋದ್, ಸಹೋದರ.

English summary
Kannada Music Director V.Harikrishna's struggling life revealed in Weekend With Ramesh-3.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X