»   » ಗಣೇಶ ಹಬ್ಬಕ್ಕೆ 'ಮನೋಹರ ಮನೆ ಪಾಕ': ಜನಶ್ರೀ ನ್ಯೂಸ್ ನಲ್ಲಿ ಮಾತ್ರ!

ಗಣೇಶ ಹಬ್ಬಕ್ಕೆ 'ಮನೋಹರ ಮನೆ ಪಾಕ': ಜನಶ್ರೀ ನ್ಯೂಸ್ ನಲ್ಲಿ ಮಾತ್ರ!

Posted By:
Subscribe to Filmibeat Kannada

ಸಂಗೀತ ನಿರ್ದೇಶಕ ವಿ.ಮನೋಹರ್ ಕಿರುತೆರೆಯಲ್ಲಿ ಆಡುಗೆ ಶೋ ಮಾಡಲು ಮುಂದಾಗಿದ್ದಾರೆ. ಅದರ ಹೆಸರು 'ಮನೋಹರ ಮನೆಪಾಕ'. ಜನಶ್ರೀ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದೇ ಭಾನುವಾರ (ಸೆಪ್ಟೆಂಬರ್ 4) ರಾತ್ರಿ 9ಕ್ಕೆ ಹಾಗೂ ಸೋಮವಾರ ಸಂಜೆ 5 ಗಂಟೆಗೆ 'ಮನೋಹರ ಮನೆಪಾಕ' ಪ್ರಸಾರವಾಗಲಿದ್ದು, ಅಡುಗೆ ಭಟ್ಟರಾಗಿ ಅವತಾರ ತಾಳಲಿದ್ದಾರೆ ಖುದ್ದು ವಿ.ಮನೋಹರ್.

ಈಗಾಗಲೇ 'ಮಜಾ ಟಾಕೀಸ್'ನಲ್ಲಿ ಮನೋಹರ್ ಅಡುಗೆ ಭಟ್ಟರಾಗಿ ಹಾಸ್ಯ ರಸದೌತಣ ನೀಡಿದ್ದರು. ಈಗ ಅವರ ಕೈ ರುಚಿಯ ಜೊತೆಗೆ ಕನ್ನಡ ಚಿತ್ರರಂಗದ ತಾರೆಯರ ಅಭಿಮಾನಿಗಳ ರೆಸಿಪಿ ಕಲಿಯುವ ಸುವರ್ಣಾವಕಾಶ ಜನಶ್ರೀ ವಾಹಿನಿ ಪ್ರೇಕ್ಷಕರಿಗೆ. ಮುಂದೆ ಓದಿ....

ಏನಿದು 'ಮನೋಹರ ಮನೆಪಾಕ'?

'ಮನೋಹರ ಮನೆಪಾಕ' ಕಾರ್ಯಕ್ರಮದಲ್ಲಿ ಅಡುಗೆ ಭಟ್ರಾಗಿರುವ ವಿ.ಮನೋಹರ್, ನಟ/ನಟಿಯರ ಅಭಿಮಾನಿಗಳ ಮನೆಗೆ ತೆರಳಿ, ಆ ಅಭಿಮಾನಿಯ ಕೈಯಾರೆ ಸ್ಪೆಷಲ್ ಅಡುಗೆ ಮಾಡಿಸಲಿದ್ದಾರೆ. ನಂತರ ಅದೇ ಅಭಿಮಾನಿಯ ಮನೆಗೆ ನಟ/ನಟಿಯನ್ನು ಕರೆತರಲಿದ್ದಾರೆ. ಅದೇ ಮನೆಯಲ್ಲಿ ಅಭಿಮಾನಿಗಳು ಮಾಡಿದ ಸವಿರುಚಿಯನ್ನು ತಾರೆಯರು ಸವಿಯಲಿದ್ದಾರೆ.

ಮೊದಲ ವಿಶೇಷ ಸಂಚಿಕೆ

ಮೊದಲ ವಿಶೇಷ ಸಂಚಿಕೆಯಲ್ಲಿ ವಿ.ಮನೋಹರ್ ರವರು ನಟಿ ತಾರಾ ಅವರ ಅಭಿಮಾನಿಯೊಬ್ಬರ ಮನೆಗೆ ತೆರಳಿ, ಅವರ ಮನೆಯಲ್ಲೇ ಸಿಹಿ ಖಾದ್ಯ ಮಾಡಿಸಿದ್ದಾರೆ.

ನಟಿ ತಾರಾಗೆ ಏನು ಇಷ್ಟ?

ವಿ.ಮನೋಹರ್ ಅವರು ತಾರಾ ಅವರನ್ನು ಇಷ್ಟಪಡುವ 'ಸಂಪೂರ್ಣ' ಎಂಬ ಗೃಹಿಣಿಯ ಮನೆಗೆ ಹೋಗಿ, ಅವರ ಮನೆಯಲ್ಲೇ ತಾರಾ ರವರಿಗೆ ಇಷ್ಟವಾದ ಜಾಮೂನ್ ಮಾಡಿದ್ದಾರೆ. ಜೊತೆಗೆ ಗಣೇಶ ಹಬ್ಬದ ಸಂಭ್ರಮಕ್ಕಾಗಿ ಕಾಯಿಕಡುಬು ಕೂಡ ಮಾಡಿಸಿದ್ದಾರೆ.

ಗಣೇಶ ಹಬ್ಬದ ಆಚರಣೆ

ಅಭಿಮಾನಿ ಮನೆಯಲ್ಲೇ ಒಂದು ತಾಸು ಇದ್ದು, ಅವರೆಲ್ಲರ ಸಮ್ಮುಖದಲ್ಲಿ ಅವರ ಮನೆಗೆ ತಾರಾ ಅವರನ್ನು ಕರೆಸಿ, ಅವರೆಲ್ಲರ ಮಧ್ಯೆ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ ವಿ.ಮನೋಹರ್.

ಅನಂತ್ ಚಿನಿವಾರ್ ಏನಂತಾರೆ?

ಶೆಫ್ ರೂಪದಲ್ಲಿ ವಿ.ಮನೋಹರ್ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ಮೆರಗು ತಂದಿದ್ದಾರೆ ಎನ್ನುತ್ತಾರೆ ಜನಶ್ರೀ ಚಾನೆಲ್ ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಅನಂತ್ ಚಿನಿವಾರ್.

ಈ ಶೋನ ವಿಶೇಷತೆಗಳೇನು?

ವಾರಕ್ಕೊಮ್ಮೆ ಪ್ರಸಾರವಾಗುವ ಈ ಶೋನ ವಿಶೇಷತೆಯೇ ಸೆಲೆಬ್ರಿಟಿಗಳಿಗೆ ಇಷ್ಟವಾಗುವ, ಅವರು ಇಷ್ಟಪಟ್ಟು ತಿನ್ನುವ ಸಿಹಿತಿಂಡಿ ಅಥವಾ ಖಾದ್ಯವನ್ನು ಅಭಿಮಾನಿಗಳ ಕೈಯಲ್ಲಿ ಮಾಡಿಸುವುದು ಈ ಕಾರ್ಯಕ್ರಮದ ವಿಶೇಷತೆ.

English summary
Music Director V.Manohar has turned Chef for a new cookery show called 'Manohara Mane Paka' which will be aired in Janashri News Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada